ಮುಂಬೈ: ಕೋಲ್ಕತ್ತಾ ನೈಟ್ ರೈಡರ್ಸ್ ಆಲ್‌ರೌಂಡರ್ ಪ್ಯಾಟ್ ಕಮಿನ್ಸ್ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಉಳಿದ ಸೀಸನ್‌ನಿಂದ ಶುಕ್ರವಾರ ಹೊರಗುಳಿದಿದ್ದಾರೆ.
ಆಸ್ಟ್ರೇಲಿಯನ್ ಟೆಸ್ಟ್ ನಾಯಕ ಕಮಿನ್ಸ್ ಸೊಂಟದ ಗಾಯದ ಕಾರಣದಿಂದ ಸಿಡ್ನಿಗೆ ಮರಳುವ ನಿರೀಕ್ಷೆಯಿದೆ ಎಂದು ಕ್ರಿಕೆಟ್.ಕಾಮ್.ಎಯು ವರದಿ ಮಾಡಿದೆ.
ಈ ಋತುವಿನಲ್ಲಿ ಕೆಕೆಆರ್ ಗಾಗಿ ಐದು ಪಂದ್ಯಗಳಲ್ಲಿ ಕಮಿನ್ಸ್ ಏಳು ವಿಕೆಟ್ ಗಳನ್ನು ಪಡೆದಿದ್ದಾರೆ. ಬ್ಯಾಟಿಂಗ್ ನಲ್ಲಿ ಮಿಂಚಿದ್ದ ಕಮಿನ್ಸ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಕೇವಲ 14 ಎಸೆತಗಳಲ್ಲಿ ಅರ್ಧಶತಕವನ್ನು ಗಳಿಸಿದ್ದರು.
ಆಡಿದ 12 ಪಂದ್ಯಗಳಲ್ಲಿ ಐದರಲ್ಲಿ ಮಾತ್ರ ಗೆದ್ದಿರುವ ಕೆಕೆಆರ್ ತಂಡ, ಏಳರಲ್ಲಿ ಸೋಲನುಭವಿಸಿದೆ. ಅಂಕಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿರುವ ಶ್ರೇಯಸ್ ಅಯ್ಯರ್ ಪಡೆ ಪ್ಲೇ ಆಫ್ ತಲುಪುವುದು ಬಹುತೇಕ ಅಸಾಧ್ಯ.
Related Articles
ಇದನ್ನೂ ಓದಿ:ಶ್ರೀಮಂತ ಟಿ20 ಲೀಗ್ ನಲ್ಲಿ ವಿದ್ಯುತ್ ಸಮಸ್ಯೆಯಿಂದ ವಿವಾದಾತ್ಮಕ ತೀರ್ಪು; ಫ್ಯಾನ್ಸ್ ಗರಂ
ಐಪಿಎಲ್ ಮುಗಿದ ಬಳಿಕ ಆಸ್ಟ್ರೇಲಿಯಾ ತಂಡ ಸತತ ಸರಣಿಗಳನ್ನು ಆಡಲಿದೆ. ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ಆಸೀಸ್ ನೆಲದಲ್ಲೇ ಆಡಲಿದೆ. ಹೀಗಾಗಿ ಫಿಟ್ ನೆಸ್ ಕಾಯ್ದುಕೊಳ್ಳುವ ಸಲುವಾಗಿ ಕಮಿನ್ಸ್ ಸಿಡ್ನಿಗೆ ತೆರಳಲಿದ್ದಾರೆ ಎಂದು ವರದಿ ತಿಳಿಸಿದೆ.