Advertisement
ಈ ಸಂಸ್ಥೆ ಸೋಮವಾರ ಬಿಡುಗಡೆಗೊಳಿಸಿರುವ ವರದಿಯಲ್ಲಿ ಉಲ್ಲೇಖಿಸಿರುವಂತೆ, ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ 2,85,027 ಪ್ರಯಾಣಿಕರ ವಾಹನಗಳು ಮಾರಾಟವಾಗಿದ್ದರೆ ಈ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಈ ಸಂಖ್ಯೆ 2,84,223ಕ್ಕೆ ಕುಸಿದಿದೆ.
– ಪ್ರಯಾಣಿಕರ ವಾಹನಗಳ ವಿಭಾಗಲದಲ್ಲಿ ಒಟ್ಟಾರೆ ಉತ್ಪಾದನೆ ಶೇ.21.14 ರಷ್ಟಕ್ಕೆ ಕುಸಿಯುವ ಮೂಲಕ 2,69,186 ವಾಹನಗಳು ಮಾರಾಟವಾಗಿದ್ದು, ರಫ್ತುವಿನಲ್ಲಿ ಶೇ.2.18ರಷ್ಟು ಕುಸಿತವಾಗಿದೆ.
– ಕಳೆದ ತಿಂಗಳು ಒಟ್ಟು 2,85,027 ಯುನಿಟ್ಗಳಷ್ಟು ಪ್ರಯಾಣಿಕ ವಾಹನಗಳು ಮಾರಾಟವಾಗಿದ್ದರೆ ಇದರಲ್ಲಿ 1,73,549ನಷ್ಟು ಕಾರುಗಳು ಮಾರಾಟಗೊಂಡಿದ್ದು, ಒಟ್ಟಾರೆ ಉತ್ಪಾದನೆಯಲ್ಲಿ ಶೇ.6.34 ರಷ್ಟು ಕುಸಿತ ಕಂಡಿದೆ.
– ಒಟ್ಟು 1,62,343 ಪ್ರಯಾಣಿಕ ಕಾರುಗಳು ಮಾರಾಟವಾಗಿದ್ದು, ಕಳೆದ ವರ್ಷದ ಉತ್ಪಾದನಾ ಮಟ್ಟಕ್ಕೆ ಹೋಲಿಸಿದ್ದರೆ ಶೇ.30.22 ರಷ್ಟು ಕುಸಿದಿದೆ.
– ಪ್ರಯಾಣಿಕ ವಾಹನಗಳು, ವಾಣಿಜ್ಯ ವಾಹನಗಳು, ದ್ವಿಚಕ್ರ ವಾಹನಗಳು ಮತ್ತು ತ್ರಿಚಕ್ರ ವಾಹನಗಳು ಸೇರಿದಂತೆ ಒಟ್ಟು ದೇಶೀಯ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಶೇ.12.76ರಷ್ಟು ಕುಸಿತ ಕಾಣುತ್ತಿದೆ.
– ಒಟ್ಟು ಉತ್ಪಾದನೆಯಲ್ಲಿ ಶೇ.26.22 ರಷ್ಟು ಕುಸಿತ ಕಂಡು ಬಂದಿದ್ದರೆ, ರಫ್ತಿನಲ್ಲಿ ಶೇ.2.72 ರಷ್ಟು ಏರಿಕೆಯಾಗಿದೆ ಎಂದು ವರದಿಯಲ್ಲಿನ ಅಂಕಿ ಅಂಶಗಳು ಹೇಳುತ್ತಿವೆ.
– ಕಮರ್ಷಿಯಲ್ ವಾಹನಗಳ ವಿಭಾಗದಲ್ಲಿ ಪ್ರಯಾಣಿಕ, ಸರಕು, ಮಧ್ಯಮ ಮತ್ತು ದೊಡ್ಡ ವಾಹನಗಳು ಸೇರಿದಂತೆ ವಾಣಿಜ್ಯ ಉಪಯೋಗಿ ವಾಹನಗಳ ಮಾರಾಟದಲ್ಲಿ ಶೇ.23.31 ರಷ್ಟು ಇಳಿಕೆಯಾಗಿದೆ.
– ಈ ತಿಂಗಳಲ್ಲಿ ಒಟ್ಟು 66,773 ವಾಣಿಜ್ಯ ವಾಹನಗಳು ಮಾರಾಟವಾಗಿದ್ದು, ಇದರಲ್ಲಿ 51,439 ಲಘು ವಾಣಿಜ್ಯ ವಾಹನಗಳು ಸೇರಿವೆ.
– ಅಕ್ಟೋಬರ್ ನಲ್ಲಿ ಒಟ್ಟು 17,57,264 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಹಿಂದಿನ ವರ್ಷಕ್ಕಿಂತ ಶೇ.14.43 ರಷ್ಟು ಕಡಿಮೆ ಇದೆ.
– ದ್ವಿಚಕ್ರ ವಾಹನಗಳ ರಫ್ತುವಿನಲ್ಲಿ ಶೇ.8.03 ರಷ್ಟು ಏರಿಕೆಯಾದರೂ, ಉತ್ಪಾದನಾ ಮಟ್ಟದಲ್ಲಿ ಮಾತ್ರ ಶೇ.26.57 ರಷ್ಟು ಕುಸಿತವಾಗಿದೆ.