Advertisement

ಪಾಂಗಾಳದಲ್ಲಿ ಪ್ರಯಾಣಿಕರ ಸಂಕಷ್ಟ ;ಹೆದ್ದಾರಿ ಬದಿ ತಂಗುದಾಣಗಳ ಕೊಡುಗೆ

09:05 AM Apr 03, 2019 | Team Udayavani |

ಉಡುಪಿ : ಇಲ್ಲಿನ ಪಾಂಗಾಳದಲ್ಲಿ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಎರಡೂರು ಬದಿಗಳಲ್ಲಿ ಆರ್ಯಾಡಿ ಸುಬ್ಬಣ್ಣ ಶೆಟ್ಟಿ ಮನೆ ದಿವಂಗತ ಸಂಜೀವ ಶೆಟ್ಟಿ ಹಾಗೂ ಕೃಷ್ಣಿ ಶೆಡ್ತಿ ಇವರ ಸ್ಮರಣಾರ್ಥ ಅವರ ಮಕ್ಕಳು ಸುಮಾರು 4 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಸ್‌ ನಿಲ್ದಾಣಗಳನ್ನು ಲೋಕಾರ್ಪಣೆ ಗೊಳಿಸಲಾಯಿತು.

Advertisement

ಪಿ.ಕೆ ಸಂಜೀವ ಶೆಟ್ಟಿ ಅವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದರು.ಉತ್ತಮ ಕೃಷಿಕರಾಗಿಯೂ ಹೆಸರುವಾಸಿಯಾಗಿದ್ದರು.

ತಂದೆಯವರ ಸವಿನೆನಪಿಗಾಗಿ ನಿಲ್ದಾಣಗಳನ್ನು ಲೋಕಾರ್ಪಣೆ ಮಾಡಲಾಗಿದೆ ಎಂದು ಪುತ್ರ ಗೋವಿಂದ ಶೆಟ್ಟಿಯವರು ಹೇಳಿದರು.

ಉದ್ಯಮಿ ಸುರೇಶ್‌ ಶೆಟ್ಟಿ ತಂಗುದಾಣಗಳನ್ನು ಲೋಕಾರ್ಪಣೆಗೊಳಿಸಿದರು, ಈ ವೇಳೆ ಗಣ್ಯರು ಹಾಜರಿದ್ದರು.

ರಸ್ತೆ ಕಾಮಗಾರಿಯ ವೇಳೆ ಬಸ್‌ ತಂಗುದಾಣವನ್ನು ತೆರವುಗೊಳಿಸದ ಹಿನ್ನಲೆಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು. ಅಪಘಾತಗಳೂ ಸಂಭವಿಸಿ ಪ್ರಾಣ ಹಾನಿಯಾಗಿತ್ತು. ಎರಡು ಜೀವಗಳು ರಸ್ತೆ ಅವಘಡಕ್ಕೆ ಬಲಿಯಾಗಿದ್ದವು.

Advertisement

ಕಟಪಾಡಿಯಲ್ಲಿರುವ ತಂಗುದಾಣ ಬಳಸಿಕೊಳ್ಳಲು ಮನವಿ

ಕಟಪಾಡಿ ಹೆದ್ದಾರಿ ಬದಿಯಲ್ಲಿ ಮೂರು ಬಸ್‌ ತಂಗುದಾಣಗಳಿದ್ದು ಪ್ರಯಾಣಿಕರು ಇದನ್ನು ಉಪಯೋಗಿಸುತ್ತಿಲ್ಲ. ನಾಲ್ಕು ಹೆಜ್ಜೆ ನಡೆಯಬೇಕೆಂಬ ಕಾರಣಕ್ಕೆ ಪ್ರಯಾಣಿಕರು ಬಸ್‌ ನಿಲ್ದಾಣವನ್ನು ಉಪಯೋಗಿಸುತ್ತಿಲ್ಲ.

ಕೆನರಾ ಬ್ಯಾಂಕ್‌ನವರು ನಿರ್ಮಿಸಿದ ತಂಗುದಾಣ ಅರ್ಧದಲ್ಲೇ ನಿಂತಿದೆ. ಪಂಚಾಯತ್‌ ಪಕ್ಷ ನಿರ್ಮಿಸಿದ ತಂಗುದಾಣ ಪ್ರಯಾಣಿಕರಿಗಾಗಿ ಕಾಯುತ್ತಿದೆ.

ಕಟಪಾಡಿಯ ಬಸ್‌ಗಳು , ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಪೋಷಕರ ಮಧ್ಯೆ ಕೇವಲ ಚರ್ಚೆಯಲ್ಲಿರುವ ಈ ಸಮಸ್ಯೆ ಬೇಗನೆ ಬಗೆ ಹರಿಯಬೇಕಾಗಿದೆ.

ಹೆದ್ದಾರಿ ದಟ್ಟನೆಗೂ ಇದು ಕಾರಣವಾಗಿದ್ದು, ಪ್ರತಿ ನಿತ್ಯ ಅವಘಡಗಳಿಗೆ ಕಾರಣವಾಗಿದೆ. ಅವಘಡಗಳು ನಡೆಯುವುದು ತಪ್ಪಿಸಲು ಸಾರ್ವಜನಿಕರು ನಾಲ್ಕು ಹೆಜ್ಜೆ ನಡೆದು ಹೊಸ ತಂಗುದಾಣಗಳನ್ನು ಉಪಯೋಗಿಸಿಕೊಂಡು ಸಂಭವಿಸಬಹುದಾದ ಅವಘಡಗಳನ್ನು ತಡೆಯಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next