ನವದೆಹಲಿ: ಗೋವಾದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕನೋರ್ವ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಇತ್ತೀಚಿಗೆ ವಿಮಾನಗಳ ಸುದ್ದಿಗಳೇ ಹೆಚ್ಚು ಪ್ರಸಾರವಾಗುತ್ತಿರುವುದನ್ನು ನಾವು ಕಾಣುತ್ತೇವೆ, ವಿಮಾನದಲ್ಲಿ ಸಿಗರೇಟ್ ಸೇವನೆ, ಮದ್ಯದ ನಶೆಯಲ್ಲಿ ಸಹ ಪ್ರಯಾಣಿಕನ ಮೇಲೆ ಮೂತ್ರ ವಿಸರ್ಜನೆ, ವಿಮಾನ ಪ್ರಯಾಣದ ವೇಳೆ ಬಾಗಿಲು ತೆರೆಯಲು ಪ್ರಯತ್ನಿಸಿದ ಪ್ರಕರಣ ಹೀಗೆ ಹಲವಾರು ಪ್ರಕರಣಗಳು ನಡೆದಿದೆ ಅದರಂತೆ ಗೋವಾದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೋರ್ವ ವಿಮಾನದಲ್ಲಿದ್ದ ಸಿಬ್ಬಂದಿ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾನೆ.
ಗೋವಾದಲ್ಲಿ ವಿಮಾನ ಹತ್ತಿದ ವ್ಯಕ್ತಿ ವಿಮಾನ ಸಿಬ್ಬಂದಿಯೊಂದಿಗೆ ಇಲ್ಲಸಲ್ಲದ ವಿಚಾರಕ್ಕೆ ಜಗಳ ತೆಗೆದಿದ್ದಾನೆ ಈ ವೇಳೆ ವಿಮಾನದ ಸಿಬಂದಿಗಳು ಪ್ರಯಾಣಿಕನನ್ನು ಸಮಾಧಾನಿಸಲು ಎಷ್ಟೇ ಪ್ರಯತ್ನಿಸಿದರೂ ಸಮಾಧಾನಗೊಳ್ಳದ ಪ್ರಯಾಣಿಕ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಘಟನೆಯ ಕುರಿತು ವಿಮಾನಯಾನ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿದ್ದು ಬಳಿಕ ವಿಮಾನ ದೆಹಲಿ ತಲುಪುತ್ತಿದ್ದಂತೆ ಪ್ರಯಾಣಿಕನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿದ ವಿಮಾನಯಾನ ಸಂಸ್ಥೆ ಪ್ರಯಾಣಿಕರು ಹಾಗೂ ಸಿಬ್ಬಂದಿಗಳ ರಕ್ಷಣೆ ನಮ್ಮ ಪ್ರಮುಖ ಆದ್ಯತೆ ಹಾಗಾಗಿ ಅಶಿಸ್ತು ತೋರಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ನಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.
Related Articles
ಇದನ್ನೂ ಓದಿ: Nashik: ಕಾರು ನದಿಗೆ ಉರುಳಿ ಒಂದೇ ಕುಟುಂಬದ ಮೂವರ ಸಾವು; ಆರು ಮಂದಿಗೆ ಗಾಯ