Advertisement

ಧಾರ್ಮಿಕ ಕ್ಷೇತ್ರದಲ್ಲಿ ಸಂಚಲನ: ಪೂಂಜ

02:37 PM Apr 08, 2019 | Team Udayavani |
ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಚಂದ್ಕೊರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಜಿಲ್ಲೆ ಯಲ್ಲೇ ಪ್ರಥಮ ಬಾರಿಗೆ ತರುಣ ಪಡೆ ಸಜ್ಜಾಗಿರುವುದು ಧಾರ್ಮಿಕ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದು ಶಾಸಕ‌ ಹರೀಶ್‌ ಪೂಂಜ ಹೇಳಿದರು.
ಮೇ 8ರಿಂದ 13ರ ವರೆಗೆ ನಡೆಯುವ ಚಂದ್ಕೊರು ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಬ್ರಹ್ಮಕಲಶೋತ್ಸವದ ಪೂರ್ವ ಭಾವಿಯಾಗಿ ಲಾೖಲ ವಿಶ್ವರ ಕಲಾ ಮಂದಿರದಲ್ಲಿ ರವಿವಾರ ಲಾೖಲ ಹಾಗೂ ನಡ ಗ್ರಾಮಸ್ಥರ ಬೃಹತ್‌ ತರುಣ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್‌ ಡೋಂಗ್ರೆ ಮಾತನಾಡಿ, ತರುಣ ಪಡೆ ಚಂದ್ಕೊರು ಬ್ರಹ್ಮ ಕಲಶೋತ್ಸವಕ್ಕೆ ಸಹಕರಿಸಲು ಮುಂದಾಗುತ್ತಿರುವುದು ಶ್ರೀ ದೇವರ ಅನುಗ್ರಹವಾಗಿದೆ. ಇದರಿಂದ ಬ್ರಹ್ಮ ಕಲಶೋತ್ಸವ  ಯಶಸ್ವಿಯಾಗಲಿದೆ ಎಂದರು.
ವಿವಿಧ ತಾ|ಗಳಿಗೆ ಆಮಂತ್ರಣ ನೀಡುವ ಹಾಗೂ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಜವಾಬ್ದಾರಿ ಹಂಚಲಾಯಿತು. ಸಮಾವೇಶದಲ್ಲಿ ಸಮಿತಿಯ ಮುಖಂಡ ರಾದ ಪ್ರಸಾದ್‌ ಶೆಟ್ಟಿ ಏಣಿಂಜೆ, ಸುಬ್ರಾಯ ಡೋಂಗ್ರೆ, ಗಣೇಶ್‌, ಅಲೋಕ್‌ ಅಜ್ರಿ, ಅರವಿಂದ, ಪ್ರಜ್ವಲ್‌, ಸುಧಾಕರ್‌, ಗಣೇಶ್‌, ನೂರಾರು ತರುಣರು ಭಾಗವಹಿಸಿದ್ದರು.
 ಯುವಕರ ಬೆಂಬಲ
ದೇವರು, ಸಂಸ್ಕೃತಿ, ಸಂಸ್ಕಾರವನ್ನು ಹಿರಿಯರು ನೇತೃತ್ವ ವಹಿಸಿಕೊಳ್ಳುತ್ತಿದ್ದು, ಇದಕ್ಕೆ ಬೆಂಬಲವಾಗಿ ಯುವಕರು ಕೈಜೋಡಿಸುತ್ತಿರುವುದು ಇದೇ ಪ್ರಥಮ. ಮುಂದಿನ ದಿನಗಳಲ್ಲಿ ಸಂಸ್ಕೃತಿಯನ್ನು ಮನೆ ಮನೆಗೆ ಪಸರಿಸುವ ಕೆಲಸವಾಗಬೇಕಿದ್ದು, ಯುವ ಪಡೆ ಅದನ್ನು ಸೇವೆಯಾಗಿ ಸ್ವೀಕರಿಸಬೇಕಿದೆ. ತರುಣ ಪಡೆ ಜಿಲ್ಲೆಯ ಸಮಸ್ತ ಹಿಂದೂ ಬಾಂಧವರಿಗೆ ಆಮಂತ್ರಣ ನೀಡುವ ಕಾರ್ಯವನ್ನು ಮೊದಲು ಮಾಡಬೇಕಾಗಿದ್ದು, ಬಳಿಕ ಬ್ರಹ್ಮಕಲಶೋತ್ಸವ ಯಶಸ್ಸಿಗೆ ಸಹಕರಿಸಬೇಕು.
 - ಹರೀಶ್‌ ಪೂಂಜ ಬೆಳ್ತಂಗಡಿ ಶಾಸಕರು
Advertisement

Udayavani is now on Telegram. Click here to join our channel and stay updated with the latest news.

Next