Advertisement
ರಾಣಾ ಶಪಥ ಹಿನ್ನೆಲೆ: ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆಯಲಿರುವ 2018 ಕಾಮನ್‌ವೆಲ್ತ್ ಗೇಮ್ಸ್‌ಗೆ ಇತ್ತೀಚೆಗೆ ಅರ್ಹತಾ ಸುತ್ತಿನ ಪಂದ್ಯ ನಡೆಸಲಾಗಿತ್ತು. ಈ ಪಂದ್ಯದಲ್ಲಿ ಸುಶೀಲ್ ಕುಮಾರ್ 7-3ರಿಂದ ರಾಣಾ ವಿರುದ್ಧ ಗೆಲುವು ಸಾಧಿಸಿದ್ದರು. ಇದೇ ಸಂದರ್ಭದಲ್ಲಿ ರಾಣಾ ಮೇಲೆ ಸುಶೀಲ್ ಬೆಂಬಲಿಗರು ಹಲ್ಲೆ ಮಾಡಿದ್ದರು. ಹೀಗಾಗಿ ಪಿಡಬ್ಲೂéಎಲ್‌ನಲ್ಲಿ ಸುಶೀಲ್ ಕುಮಾರ್ ಸೋಲಿಸುತ್ತೇನೆ ಎಂದು ರಾಣಾ ಪಣ ತೊಟ್ಟಿದ್ದಾರೆ. ಸುಶೀಲ್ ಬೆಂಬಲಿಗರೇ ಹಲ್ಲೆ ಮಾಡಿದ್ದಾರೆ ಎಂದು ದೂರು ದಾಖಲಾಗಿದೆ. ಆದರೆ ಸುಶೀಲ್ ಕುಮಾರ್ ತಾನು ತಪ್ಪಿತಸ್ಥನಾಗಿದ್ದರೆ ಗಲ್ಲಿಗೇರಿಸಿ ಎನ್ನುವ ಮೂಲಕ ಆರೋಪವನ್ನು ನಿರಾಕರಿಸಿದ್ದಾರೆ.
ಒಲಿಂಪಿಕ್ಸ್ ಬೆಳ್ಳಿ ತಾರೆ
ಎರಡು ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಪದಕ ತಂದ ಸುಶೀಲ್ ಕುಮಾರ್ ಕಳೆದ ಎರಡು ವರ್ಷದಿಂದ ಒಂದಲ್ಲ ಒಂದು ವಿವಾದದಲ್ಲಿ ಸಿಲುಕುತ್ತಿದ್ದಾರೆ. 2016 ರಿಯೋ ಒಲಿಂಪಿಕ್ಸ್‌ಗೆ 74ಕೆಜಿ ವಿಭಾಗದಲ್ಲಿ ಸುಶೀಲ್ ಕುಮಾರ್ ಬದಲು ನರಸಿಂಗ್ ಯಾದವ್ ಅರ್ಹತೆ ಪಡೆದಿದ್ದರು. ನಂತರ ಉದ್ದೀಪನ ಮದ್ದು ಪ್ರಕರಣದಲ್ಲಿ ನರಸಿಂಗ್ ಯಾದವ್ ಸಿಲುಕಿ ಅವಕಾಶ ಕಳೆದುಕೊಂಡರು. ಈ ಸಂದರ್ಭದಲ್ಲಿ ಸುಶೀಲ್ ಕುಮಾರ್ ಬೆಂಬಲಿಗರೇ ನರಸಿಂಗ್ ಯಾದವ್‌ಗೆ ಪಾನೀಯದಲ್ಲಿ ಉದ್ದೀಪನ ಬೆರೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಇತ್ತೀಚೆಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕೂಡ ಸುಶೀಲ್ ವಿರುದಟಛಿ ಯಾವುದೇ ಕುಸ್ತಿಪಟುಗಳು ಸ್ಪರ್ಧಿಸಿರಲಿಲ್ಲ.