Advertisement

ಪಾರ್ವತಮ್ಮ ರಾಜ್‌ಕುಮಾರ್‌ ಚೇತರಿಕೆ: ಐಸಿಯುನಿಂದ ವಾರ್ಡ್‌ಗೆ

09:06 AM Mar 08, 2017 | |

ಬೆಂಗಳೂರು: ಡಾ.ರಾಜ್‌ಕುಮಾರ್ ರವರ ಧರ್ಮಪತ್ನಿ ಹಾಗೂ ಹೆಸರಾಂತ ಕನ್ನಡ ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ಅವರು ತೀವ್ರ ಅಸ್ವಸ್ಥರಾಗಿದ್ದು, ಬುಧವಾರ ನಸುಕಿನ 1 ಗಂಟೆಯ ವೇಳೆ ಅವರನ್ನು ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Advertisement

77 ರ ಹರೆಯದಲ್ಲಿರುವ ಪಾರ್ವತಮ್ಮ ಅವರಿಗೆ ರಕ್ತದ ಒತ್ತಡ ಕಡಿಮೆಯಾಗಿ,ಶುಗರ್‌ ಹೆಚ್ಚಾಗಿ  ತೀವ್ರ ಅಸ್ವಸ್ಥರಾದ ಕೂಡಲೇ  ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಯಿತು.ಎಲ್ಲಾ ರೀತಿಯ ಪರೀಕ್ಷೆ ಮತ್ತು ಔಷಧೋಪಚಾರದ ಬಳಿಕ ಅವರು ಚೇತರಿಸಿಕೊಂಡಿದ್ದು ಐಸಿಯುನಿಂದ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. 

ಪುತ್ರರಾದ ರಾಘವೇಂದ್ರ ರಾಜ್‌ಕುಮಾರ್‌, ಶಿವರಾಜ್‌ಕುಮಾರ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಅವರು ಕುಟುಂಬ ಸದಸ್ಯರ ಜೊತೆಗೆ ಆಸ್ಪತ್ರೆಗೆ ಆಗಮಿಸಿ ತಾಯಿಯ ಆರೋಗ್ಯ ವಿಚಾರಿಸಿದ್ದಾರೆ.
ಪುತ್ರಿ ಪೂರ್ಣಿಮಾ ಅವರ ಜೊತೆಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next