Advertisement

ಪಾರ್ವತಮ್ಮ ರಾಜ್‌ಕುಮಾರ್‌ ಅವರಿಗೆ ಸರ್ಕಾರಿ ಗೌರವ-ವಕೀಲರಿಂದ ದೂರು

12:48 PM Jun 03, 2017 | Team Udayavani |

ಬೆಂಗಳೂರು: ದಿವಂಗತ ಪಾರ್ವತಮ್ಮ ರಾಜ್‌ಕುಮಾರ್‌ ಅವರ ಅಂತಿಮ ಯಾತ್ರೆ ವೇಳೆ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರ ಧ್ವಜ ಹೊಂದಿಸಿರುವುದು ಭಾರತೀಯ ಧ್ವಜ ಕಾಯ್ದೆ ಉಲ್ಲಂಘನೆ ಎಂದು ಆರೋಪಿಸಿ ವಕೀಲ ಚೇತನ್‌ ಎಂಬುವರು 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದಾರೆ.

Advertisement

ಪ್ರಕರಣದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ ಮತ್ತು ಬೆಂಗಳೂರು ನಗರ ಪೊಲೀಸ್‌ ಆಯುಕ್ತರನ್ನು ಆರೋಪಿಗಳನ್ನಾಗಿಸಿ ವಕೀಲ ಚೇತನ್‌ ದೂರು ದಾಖಲಿಸಿದ್ದಾರೆ. ವಿಶ್ವದ ಪ್ರತಿ ರಾಷ್ಟ್ರಕ್ಕೂ ಅದರದ್ದೇ ಆದ ಧ್ವಜ ಕಾಯ್ದೆ ಇದೆ.

ಭಾರತೀಯ ಧ್ವಜ ಕಾಯ್ದೆ 5ರ ಪ್ರಕಾರ ರಾಜ್ಯ ಪೊಲೀಸರು, ಮಿಲಿಟರಿ, ಕೇಂದ್ರ ಪ್ಯಾರಾ ಮಿಲಿಟರಿ ಪಡೆಗಳ ಸಿಬ್ಬಂದಿ  ಅಂತ್ಯಕ್ರಿಯೆ ಸಂದರ್ಭದಲ್ಲಿ ಮಾತ್ರ ಧ್ವಜ ಹೊದಿಸಬೇಕು. ಖಾಸಗಿ ವ್ಯಕ್ತಿ ಮೃತಪಟ್ಟ ವೇಳೆ ಉಪಯೋಗಿಸಬಾರದು ಎಂಬ ನಿಯಮವಿದೆ. ಆದರೆ, ಪಾರ್ವತಮ್ಮ ರಾಜ್‌ಕುಮಾರ್‌ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸುವ ಮೂಲಕ ಧ್ವಜಕ್ಕೆ ಅಪಮಾನ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ “ರಾಷ್ಟ್ರೀಯ ಗೌರವ ಅಪಮಾನ ತಡೆ ಕಾಯ್ದೆ (3) 1971ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ಕಾನೂನು ಪ್ರಕಾರ ಆರೋಪಿಗಳಿಗೆ ಶಿಕ್ಷೆ ನೀಡಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next