Advertisement

ಮೂಲ ಕಾಂಗ್ರೆಸ್ಸಿಗರಿಗೆ ಸಮಸ್ಯೆ ಆಗಬಾರದು

12:32 PM Oct 27, 2020 | Suhan S |

ಅನಗೊಂಡನಹಳ್ಳಿ: ಹೊಸಕೋಟೆ ಕಾಂಗ್ರೆಸ್‌ ಭದ್ರಕೋಟೆ. ಕಳೆದ ಉಪಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಮಾಡಿದ ಕೆಲ ದೋಷಗಳಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೋಲಾಯಿತುಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚೀಮಂಡಹಳ್ಳಿ ಮುನಿ  ಶಾಮಣ್ಣ ಹೇಳಿದರು.

Advertisement

ಶರತ್‌ ಬಚ್ಚೇಗೌಡ ಕಾಂಗ್ರೆಸ್‌ ಸೇರ್ಪಡೆ ನಿರ್ಧಾರ ಕುರಿತಾಗಿ ನಗರದಲ್ಲಿ ನಡೆದ ಹೊಸ ಕೋಟೆ ಟೌನ್‌ ಹಾಗೂ ಕಸಬಾ ಹೋಬಳಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತ ನಾಡಿದ ಅವರು, ಮೂಲ ಕಾಂಗ್ರೆಸ್ಸಿಗರಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾದರೆ, ಬೇರೆ ದಾರಿ ನೋಡಿಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.

ಶಾಸಕ ಶರತ್‌ ಬಚ್ಚೇಗೌಡ ಅವರು ಯುವಕರಾಗಿದ್ದು, ಹೊಂದಾಣಿಕೆಯಿಂದ ಪಕ್ಷ ಮುನ್ನಡೆ ಸುತ್ತಾರೆ. ಆದರೆ ಅವರ ಬೆಂಬಲಿಗರು ಮೂಲ ಕಾಂಗ್ರೆಸ್ಸಿಗರಿಗೆ ಸಮಸ್ಯೆ ಮಾಡಬಾರದು. ಕಾಂಗ್ರೆಸ್‌ ಪಕ್ಷಕ್ಕೆ ನಾಯಕರ ಕೊರತೆ ಕಾರಣ ದಿಂದ ಶರತ್‌ ಬಚ್ಚೇಗೌಡ ಅವರ ಸೇರ್ಪಡೆಗೆ ಒಪ್ಪಿಗೆ ಸೂಚಿಸುವ ಅವಶ್ಯಕತೆ ಇಲ್ಲ . ಬದಲಾಗಿ ಒಟ್ಟಿಗೆ ಸೇರಿ ಕ್ಷೇತ್ರದ ಅಭಿವೃದ್ಧಿಗೊಳಿಸುವ ಉದ್ದೇಶ ದಿಂದ ನಮ್ಮ ಸಮ್ಮತಿ ಇದೆ. ಎರಡೂ ಪಕ್ಷದ ಮುಖಂಡರ ಸಮನ್ವಯ ಸಮಿತಿ ರಚಿಸಿ ಅದರ ನಿರ್ಣಯದಂತೆ ನಡೆದರೆ, ಸಮಸ್ಯೆಗಳು ಎದುರಾಗುವುದಿಲ್ಲ ಎಂದು ಸಭೆಯಲ್ಲಿ ಮುಖಂಡರು ಅಭಿಪ್ರಾಯ ಪಟ್ಟರು.

ಸಭೆಯಲ್ಲಿ ಮುಖಂಡರಾದ ಪಿಳ್ಳಣ್ಣ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿ. ಪ್ರಸಾದ್‌, ಹೇಮಂತಕುಮಾರ್‌, ಮಂಜುನಾಥ್‌, ಕೃಷ್ಣ  ಮೂರ್ತಿ, ಕುಮಾರ್‌, ಚಂದ್ರೇಗೌಡ, ಸಗೀರ್‌ ಅಹಮದ್‌ ಉಪಸ್ಥಿತರಿದ್ದರು.

ಪೌರಕಾರ್ಮಿಕರಿಗೆ ಬಟ್ಟೆ ವಿತರಣೆ :

Advertisement

ನೆಲಮಂಗಲ : ಧಾರ್ಮಿಕ ಆಚರಣೆಗಳಿಂದ ಪರಸ್ಪರ ಬಾಂಧವ್ಯ ವೃದ್ಧಿಯಾಗಿ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದು ಟಚ್‌ ಇಂಡಿಯಾ ಮಿನಿಸ್ಟ್ರೀಸ್‌ ಸಂಸ್ಥಾಪಕ ಅಧ್ಯಕ್ಷೆ ಸಿಸ್ಟರ್‌ ಜೋಸ್ನಾ ಫ್ರಾನ್ಸಿಸ್‌ ಅಭಿಪ್ರಾಯಪಟ್ಟರು.

ಪಟ್ಟಣದ ಮಾರುತಿ ಬಡಾವಣೆಯಲ್ಲಿರುವ ಥಾಮಸ್‌ ಮೆಮೋರಿಯಲ್‌ ಆಂಗ್ಲ ಶಾಲೆಯ ಆವರಣದಲ್ಲಿ ವಿಜಯ  ದಶಮಿ ಹಾಗೂ ಆಯುಧಪೂಜೆ ಪ್ರಯುಕ್ತ ವಾಜರಹಳ್ಳಿ ವ್ಯಾಪ್ತಿಯ ಪೌರ ಕಾರ್ಮಿಕರು ಮತ್ತು ಕುಟುಂಬದವರಿಗೆ ಬಟ್ಟೆ ವಿತರಿಸಿ ಮಾತನಾಡಿದರು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹೊಣೆಗಾರಿಕೆ ನಮ್ಮೆಲ್ಲರಮೇಲಿದೆ. ಯಾವುದೇ ಧರ್ಮದ ಧಾರ್ಮಿಕ ಆಚರಣೆಗಳನ್ನು ಗೌರವಿಸುವುದು ಪ್ರತಿಯೊಬ್ಬರ ನೈತಿಕ ಹೊಣೆಗಾರಿಕೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಮಾಜದ ಶಾಂತಿ ಕದಡುವಲ್ಲಿ ದುಷ್ಟ ಶಕ್ತಿಗಳು ನಿರಂತರ ಪ್ರಯತ್ನದಲ್ಲಿರುವುದು ಬೇಸರದ ಸಂಗತಿ ಎಂದರು.

ಪ್ರತಿಯೊಬ್ಬರು ತಮ್ಮ ನೆರೆಹೊರೆಯವರನ್ನು ಪ್ರೀತಿ ಮತ್ತು ಗೌರವದಿಂದ ಕಂಡಾಗ ಉತ್ತಮ ಬಾಂಧವ್ಯ ಬೆಳೆಯುವುದ ರೊಂದಿಗೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದರು. ಈ ಸಂದರ್ಭದಲ್ಲಿ ಥಾಮಸ್‌ ಶಾಲೆಯ ಸಂಯೋಜಕಿ ಪೂರ್ಣಿಮಾ, ಶಿಕ್ಷಕರಾದ ಪ್ರಭಾವತಿ, ಸಿಬ್ಬಂದಿ ಎಸ್ತೇರ್‌, ಮರ್ಲಿನ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next