ಕೊರಟಗೆರೆ: ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೋರ್ವಳು ಪ್ರಿಯತಮನೊಂದಿಗೆ ರಾತ್ರಿ ಮದ್ಯದ ಪಾರ್ಟಿ ಮಾಡಿದ್ದು, ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ಕೋಟೆ ಬೀದಿಯ ದಿವಂಗತ ನಾಗರಾಜು ರ ಪತ್ನಿ ಲಕ್ಷ್ಮೀ (36) ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದು, ಪ್ರಿಯಕರ ಮನೋಹರ ಎಂಬಾತನೊಂದಿಗೆ ರಾತ್ರಿ ಮದ್ಯ, ಮಾಂಸದ ಪಾರ್ಟಿ ಮಾಡಿ ಮಲಗಿದ್ದವಳು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ.
ಲಕ್ಷ್ಮೀ ಪತಿ ಮರಣ ಹೊಂದಿದ ನಂತರ ಅನೈತಿಕ ಸಂಬಂಧ ಇಟ್ಕೊಂಡಿದ್ದು,ಎರಡು ವರ್ಷಗಳಿಂದಲೂ ಇವರಿಬ್ಬರೂ (ಲೀವ್ ಇನ್ ರಿಲೇಷನ್ ಶಿಪ್) ಒಂದೇ ಮನೆಯಲ್ಲಿ ಜೀವನ ನಡೆಸುತ್ತಿದ್ದರು ಎನ್ನಲಾಗಿದ್ದು, ಆಕೆ ಮದ್ಯ ಪಾನದ ಚಟ ಹೊಂದಿದ್ದು, ಕೊಣೆಯಲ್ಲಿ ಮದ್ಯದ ಬಾಟಲುಗಳು ಕಂಡುಬಂದಿದ್ದು,ಬೆಳಗ್ಗೆ ಮಲಗಿದ ಜಾಗದಲ್ಲಿಯೇ ಶವವಾಗಿ ಪತ್ತೆಯಾಗಿದ್ದಾಳೆ ಎನ್ನಲಾಗಿದೆ.
ಮೃತ ಲಕ್ಷ್ಮೀಯ ತಾಯಿ ಮಂಜಮ್ಮ ನನ್ನ ಮಗಳ ಸಾವಿನ ಹಿಂದೆ ಅನುಮಾನವಿದ್ದು, ಕೊಲೆಯಾಗಿರಬಹುದು ಎಂದು ಅನುಮಾನಗೊಂಡು ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೇಲ್ನೋಟಕ್ಕೆ ಅನುಮಾನಾಸ್ಪದ ಸಾವು ಎಂದು ಕಂಡುಬರುತ್ತಿದ್ದು ಪೊಲೀಸ್ ತನಿಖೆ ನಂತರ ನಿಜಾಂಶ ಹೊರ ಬೀಳಬೇಕಿದೆ.
Related Articles
ಸ್ಥಳಕ್ಕೆ ಡಿವೈಎಸ್ಪಿ ವೆಂಕಟೇಶ್ ನಾಯ್ಡು, ಸಿಪಿಐ ಸುರೇಶ್ ಕೆ, ಪಿಎಸ್ಐ ಚೇತನ್ ಗೌಡ ಹಾಗೂ ಸಿಬಂದಿಗಳಾದ ಧರ್ಮಪಾಲ್ ನಾಯಕ್, ಸಂಜೀವ್, ದೊಡ್ಡಲಿಂಗಯ್ಯ ರಂಗರಾಜು ಭೇಟಿ ನೀಡಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.