Advertisement

ನೈಟ್‌ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ

01:05 PM Jan 02, 2022 | Team Udayavani |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಕೊರೊನಾ, ರೂಪಾಂತರಿ ಒಮಿಕ್ರಾನ್‌ ಸೋಂಕು ತಡೆಗಟ್ಟಲು ರಾಜ್ಯ ಸರ್ಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆವರೆಗೆ ನೈಟ್‌ ಕರ್ಫ್ಯೂವಿಧಿಸಿ ಆದೇಶ ಹೊರಡಿಸಿದೆ. ಈ ಮಧ್ಯೆ ನಿಯಮ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

Advertisement

ತಾಲೂಕಿನ ಅಗಲಗುರ್ಕಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಹೋಂ ಸ್ಟೇನಲ್ಲಿ ತಡರಾತ್ರಿ ಡಿ.ಜೆ. ಹಾಕಿ ಯುವಕರು ಮದ್ಯದ ಪಾರ್ಟಿ ಮಾಡುತ್ತಿದ್ದರು. ಈಮಾಹಿತಿಯನ್ನು ಅರಿತು ಚಿಕ್ಕಬಳ್ಳಾಪುರ ಸಿಪಿಐ ಪ್ರಶಾಂತ್‌, ನಂದಿಗಿರಿಧಾಮದ ಪಿಎಸ್‌ಐ ಮತ್ತುಸಿಬ್ಬಂದಿ ರೆಸಾರ್ಟ್‌ಗೆ ತೆರಳಿದ್ದಾರೆ. ಆದರೆ,ಗೇಟ್‌ಗೆ ಬೀಗ ಹಾಕಿದ್ದ ರೆಸಾರ್ಟ್‌ ಮಾಲಿಕರುಸಾಕಷ್ಟು ಸಮಯ ಬೀಗ ತೆಗೆದಿಲ್ಲ, ನಂತರಬೀಗ ತೆಗೆದಾಗ ಕೆಲ ಪಾನಮತ್ತ ಯುವಕರುಹೊರ ಬಂದು ಪೊಲೀಸರ ಜೊತೆ ವಾಗ್ವಾದಕ್ಕೆಇಳಿದಿದ್ದಾರೆ. ಮಾತಿಗೆ ಮಾತು ಬೆಳೆದು ಗೇಟ್‌ಬಳಿಯೇ ಪೊಲೀಸರು ಹಾಗೂ ಯುವಕರನಡುವೆ ತಳ್ಳಾಟ, ನೂಕಾಟ ಆಗಿದೆ. ಈ ವೇಳೆ ಪೊಲೀಸರ ಮೇಲೆಯೇ ಪಾನಮತ್ತಯುವಕರ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಇದನ್ನು ಪ್ರಶ್ನೆ ಮಾಡಿದ ಚಿಕ್ಕಬಳ್ಳಾಪುರ ಇನ್ಸ್‌ಪೆಕ್ಟರ್‌ ಅವರೊಂದಿಗೆ ಗಲಾಟೆ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಲಾಗಿದೆ.

ಯುವಕರು ಪೊಲೀಸ್‌ ವಶಕ್ಕೆ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್‌ ಹಾಗೂ ಡಿವೈಎಸ್ಪಿ ವಾಸುದೇವ್‌ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.ನಂತರ ಪಾನಮತ್ತ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಂದಿಗಿರಿಧಾಮ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕ್ರಮಕೈಗೊಳ್ಳಲಾಗಿದೆ.

ಷರತ್ತುಬದ್ಧ ಜಾಮೀನು: ನೈಟ್‌ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಹೋಂ ಸ್ಟೇಮೇಲೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಹಲ್ಲೆಪ್ರಕರಣ ಸಂಬಂಧ ಬಂಧಿ ತರಾಗಿದ್ದ 8 ಮಂದಿಆರೋಪಿಗಳಿಗೂ ಚಿಕ್ಕಬಳ್ಳಾಪುರನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಮಂಜೂರಾಗಿದೆ.

ಬೆಂಗಳೂರು ಮೂಲದ ಪ್ರತಿಷ್ಠಿತ ವ್ಯಕ್ತಿಗಳಮಕ್ಕಳು ಪಾರ್ಟಿ ಮಾಡಿ ಮೋಜು ಮಸ್ತಿಮಾಡುತ್ತಿದ್ದರು ಎನ್ನಲಾಗಿದೆ. ಆರೋಪಿಗಳವಿರುದ್ಧ ಐಪಿಸಿ ಸೆಕ್ಷೆನ್‌ 353, ವಿಪತ್ತುನಿರ್ವಹಣಾ ಕಾಯ್ದೆ-188, 269, 271 ಅಡಿ ಪ್ರಕರಣ ದಾಖಲಿಸಲಾಗಿತ್ತು. ನ್ಯಾಯಾಲಯಆರೋಪಿಗಳಿಗೆ ಜಾಮೀನು ನೀಡಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next