Advertisement

ಒಲಿಂಪಿಕ್ಸ್‌ನಲ್ಲಿ ಚೀನಾ ಅಥ್ಲೀಟ್ಸ್‌ಗೆ ಅವಕಾಶವಿಲ್ಲ? ಸಂಘಟಕರು ಹೇಳುವುದೇನು?

11:35 AM Feb 23, 2020 | keerthan |

ಟೋಕೊಯೋ (ಜಪಾನ್‌): ಚೀನಾದಲ್ಲಿ ಹಬ್ಬಿರುವ ಕೊರೊನಾ ವೈರಸ್‌, ಜಗತ್ತಿನ ಇತರೆಡೆಗಳಲ್ಲೂ ಭೀತಿಗೆ ಕಾರಣವಾಗಿದೆ. ಅತಿಹೆಚ್ಚು ಆತಂಕ ಎದುರಿಸಿರುವುದು ಜಪಾನಿನಲ್ಲಿ ನಡೆಯಬೇಕಿರುವ ಟೋಕೊಯೋ ಒಲಿಂಪಿಕ್ಸ್‌. ಆದರೆ ಸಂಘಟಕರು ಕೂಟವನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Advertisement

ಸದ್ಯ ಶನಿವಾರ ನಡೆಯಬೇಕಿದ್ದ ಸ್ವಯಂ ಸೇವಕರ ತರಬೇತಿ ಕಾರ್ಯಾಗಾರವನ್ನು ಸಂಘಟಕರು ಮುಂದೂಡಿದ್ದಾರೆ.

ಇದೇ ವೇಳೆ ಚೀನಾ ಅಥ್ಲೀಟ್‌ಗಳಿಗೆ ಟೋಕೊಯೋದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೋ, ಇಲ್ಲವೋ ಇನ್ನೂ ಖಾತ್ರಿಯಾಗಿಲ್ಲ. ಬಹುಶಃ ಅಲ್ಲಿನ ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ವಿಶ್ವದ ಬಲಿಷ್ಠ ಕ್ರೀಡಾರಾಷ್ಟ್ರ ಎನಿಸಿಕೊಂಡಿರುವ ಚೀನಾ ಕೂಟಕ್ಕೆ ಗೈರಾಗುವುದು ಅನಿವಾರ್ಯವಾಗಲಿದೆ.

2016ರ ಒಲಿಂಪಿಕ್ಸ್ ನಲ್ಲಿ ಚೀನಾ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿತ್ತು. 26 ಬಂಗಾರ, 18 ಬೆಳ್ಳಿ ಮತ್ತು 26 ಕಂಚಿನ ಪದಕಗಳಿಗೆ ಚೀನಾ ಕ್ರೀಡಾಳುಗಳು ಕೊರಳೊಡ್ಡಿದ್ದಾರೆ. ಚೀನಾ ಪಾಲಿಗೆ ಒಟ್ಟು 70 ಪದಕಗಳು ಲಭಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next