Advertisement

ಪಕ್ಷಪಾತ ನಡೆಸಿದರೆ ಕಠಿಣ ಕ್ರಮ

11:42 AM Mar 27, 2019 | Lakshmi GovindaRaju |

ನವದೆಹಲಿ: ರಾಜ್ಯ ಚುನಾವಣಾ ಆಯುಕ್ತರು, ಅಧಿಕಾರಿಗಳು ಹಾಗೂ ಚುನಾವಣಾ ಪರಿವೀಕ್ಷಕರು ಪಕ್ಷಪಾತ ನಿಲುವು ವ್ಯಕ್ತಪಡಿಸಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್‌ ಅರೋರಾ ಹೇಳಿದ್ದಾರೆ.

Advertisement

ಈ ಹಿಂದೆ ಐದು ರಾಜ್ಯಗಳ ಚುನಾವಣೆ ವೇಳೆ ಕೆಲವು ಪ್ರಕರಣಗಳು ವರದಿಯಾಗಿದ್ದವು. ನೇಮಕಗೊಂಡ ಅಧಿಕಾರಿಗಳ ಮೇಲೆ ಚುನಾವಣಾ ಆಯೋಗ ಸಂಪೂರ್ಣ ವಿಶ್ವಾಸ ಹೊಂದಿದೆ. ಆದರೆ ಪಕ್ಷಪಾತ ಮನೋಭಾವ ವ್ಯಕ್ತಪಡಿಸಿದ ಸುಳಿವು ಸಿಕ್ಕರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅರೋರಾ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next