Advertisement

ಗ್ರಾಪಂ ಸಭೆಗಳಲ್ಲಿ ಮಹಿಳೆಯರು ತಪ್ಪದೆ ಪಾಲ್ಗೊಳ್ಳಿ

08:40 PM Mar 24, 2021 | Team Udayavani |

ಯಾದಗಿರಿ: ಗ್ರಾಪಂಯಲ್ಲಿ ನಡೆಯುವ ಅಭಿವೃದ್ಧಿಗೆ ಸಂಬಂಧಿಸಿದ ಮಹತ್ವದ ಸಭೆಗಳಲ್ಲಿ ತಪ್ಪದೆ ಭಾಗವಹಿಸಬೇಕು ಎಂದು ಜಿಪಂ ಸಿಇಒ ಶಿಲ್ಪಾ ಶರ್ಮಾ ಹೇಳಿದರು. ನಗರದ ಖಾಸಗಿ ಹೋಟೆಲ್‌ ನಲ್ಲಿ ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಶಕ್ತಿ ಕೇಂದ್ರ ಯೋಜನೆ, ಶಿಶು ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಗ್ರಾಪಂ ಮಹಿಳಾ ಚುನಾಯಿತ ಪ್ರತಿನಿಧಿ ಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪ್ರತಿಯೊಂದು ಜಿಲ್ಲೆಯಲ್ಲಿ 3 ಹಂತದಲ್ಲಿ ಮಹಿಳಾ ಸಬಲೀಕರಣ ಕುರಿತು ಕಾರ್ಯಾಗಾರ ನಡೆಸಲಾಗುತ್ತದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಮಹಿಳಾ ಶಕ್ತಿ ಕೇಂದ್ರದಲ್ಲಿ ನಡೆಸಲಾಗುತ್ತದೆ ಎಂದು ಮಹಿಳಾ ಮತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಪ್ರಭಾಕರ್‌ ಕವಿತಾಳ ಮಾಹಿತಿ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿ ಕಾರಿ ರಾಧ ಮಣ್ಣೂರ ಮಾತನಾಡಿ, ಮಹಿಳಾ ಶಕ್ತಿ ಪದದ ಮಹತ್ವ ತಿಳಿಸುವ ಜತೆಗೆ ಸ್ತ್ರೀಶಕ್ತಿ ಯೋಜನೆ, ಅಂಗನವಾಡಿ ಕೇಂದ್ರ, ಸಮುದಾಯ ಆಧಾರಿತ ಚಟುವಟಿಕೆ, ಗರ್ಭಿಣಿಯರಿಗೆ ವಿಶೇಷ ಸೌಲಭ್ಯ, ಆದಾಯ ಗಳಿಕೆ ಉದ್ಯೋಗಗಳು ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು.

ಲಿಂಗ ಸೂಕ್ಷ್ಮತೆ ಮತ್ತು ಲಿಂಗ ಸಮಾನತೆ ವಿಷಯ ಕುರಿತು ಮತ್ತು ಜೈವಿಕ ವ್ಯತ್ಯಾಸಗಳ ಬಗ್ಗೆ ಪ.ಪೂ ಕಾಲೇಜು ಉಪನ್ಯಾಸಕ ಡಾ| ಪೀರ್‌ ಪಾಷ ತಿಳಿಸಿದರು. ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಜಿಲ್ಲಾ ಸಂಯೋಜಕ ಯಲ್ಲಪ್ಪ ಕೆ. ಚುನಾಯಿತ ಮಹಿಳಾ ಪ್ರತಿನಿಧಿಗಳಿಗೆ ತರಬೇತಿ ನೀಡಿದರು.

ನಂತರ ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು, ಜನಪರ ಅಭಿವೃದ್ಧಿಗಾಗಿ ವಿವಿಧ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಸದುಪಯೋಗ ಪಡೆದುಕೊಂಡು ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಬಲೀಕರಣವಾಗಬೇಕು. ಚುನಾಯಿತ ಪ್ರತಿನಿಧಿ ಗಳು ಕ್ಷೇತ್ರದ ಜನಸಾಮಾನ್ಯರಿಗೆ ಯೋಜನೆ ತಲುಪಿಸುವ ಮೂಲಕ ಕ್ಷೇತ್ರದ ಅಭಿವೃದ್ಧಿ ಮಾಡಬೇಕು.

ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ, ಭ್ರೂಣ ಹತ್ಯೆ ಮತ್ತು ಅತ್ಯಾಚಾರದಂತಹ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಬೇಕು ಎಂಬುದರ ಕುರಿತು ಅಸಾಧಾರಣ ಸಾಧನೆ ಮಾಡಿದ ಸಾಧಕಿಯರ ವಿಡಿಯೋ ಚಿತ್ರಗಳ ಮೂಲಕ ತರಬೇತಿ ನೀಡಲಾಯಿತು. ಈ ವೇಳೆ ಯಾದಗಿರಿ ಮತ್ತು ಗುರುಮಠಕಲ್‌ ತಾಪಂ ಇಒ ಬಸವರಾಜ ಸೇರಿದಂತೆ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next