Advertisement

Constitution Day: ಸಂವಿಧಾನ ದಿನದಲ್ಲಿ ಭಾಗವಹಿಸಿ ಫೋಟೋ ಹಂಚಿಕೊಳ್ಳಿ: ಪ್ರಹ್ಲಾದ್‌ ಜೋಶಿ

11:17 PM Nov 17, 2023 | Pranav MS |

ಹೊಸದಿಲ್ಲಿ: ಪ್ರಸಕ್ತ ಸಾಲಿನ ಸಂವಿಧಾನ ದಿನವನ್ನು ನ.26ರಂದು ಆಚರಿಸಲಾಗುತ್ತದೆ. ಈ ನಿಟ್ಟಿನಲ್ಲಿ ದೇಶವಾಸಿಗಳು ಭಾಗವಹಿಸಲು ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅವಕಾಶ ಮಾಡಿಕೊಟ್ಟಿದೆ. 73ನೇ ಸಂವಿಧಾನ ದಿನದಂದು ಕುಟುಂಬ ಸದಸ್ಯರು, ಸ್ನೇಹಿತರ ಜತೆ ಸೇರಿ ದೇಶದ ಸಂವಿಧಾನ ಓದುವ ಫೋಟೋ ಅಥವಾ ವೀಡಿಯೋ ತೆಗೆಸಿಕೊಂಡು ಅದನ್ನು ಜಾಲತಾಣ ಗಳಲ್ಲಿ ಹಂಚಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅದನ್ನು #SamvidhanDiwas ಎಂಬ ಹೆಸರಿನಲ್ಲಿ ಹಂಚಿಕೊಳ್ಳಬೇಕು.

Advertisement

ಜತೆಗೆ //@mpa_india ಕ್ಕೆ ಟ್ಯಾಗ್‌ ಮಾಡಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಟ್ವೀಟ್‌ ಮಾಡಿದ್ದಾರೆ. https://constitutionquiz.nic.in ಅಥವಾ  https://readpreamble.nic.in ವೆಬ್‌ಸೈಟ್‌ಗಳಿಂದ ಸಂವಿಧಾನ ದಿನದಲ್ಲಿ ಭಾಗವಹಿಸಿದ ಬಗ್ಗೆ ಪ್ರಮಾಣ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಸಂವಿಧಾನದ ದಿನದಂದು ಸಂವಿಧಾನದ ಮೂಲಕವೇ ದೇಶದ ಅಸ್ತಿತ್ವ ಅರಿಯಬೇಕು. ಅದಕ್ಕಾಗಿ ಎಲ್ಲರೂ ಈ ಅಭಿಯಾನದಲ್ಲಿ ಭಾಗವಹಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next