Advertisement

ಅಂದು ಪೇಂಟರ್ -ಪಾರ್ಥ ಸಂಬಂಧಿ ರಾಯ್ ಇಂದು ಹಲವು ಹೋಟೆಲ್ ಗಳ ಒಡೆಯ; ಸಿಬಿಐ ದಾಳಿ

03:16 PM Aug 27, 2022 | Team Udayavani |

ಕೋಲ್ಕತಾ: ಶಾಲಾ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಾರ್ಥ ಚಟರ್ಜಿಯ ಸಂಬಂಧಿ ಪ್ರಸನ್ನ ಕುಮಾರ್ ರಾಯ್ ಯನ್ನು ಸಿಬಿಐ ನ್ಯೂ ಟೌನ್ ನಲ್ಲಿ ವಶಕ್ಕೆ ಪಡೆದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ತನ್ನ ಜೊತೆ ಚಾಟ್ ಮಾಡುತ್ತಿಲ್ಲವೆಂದು 16 ವರ್ಷದ ಬಾಲಕಿಯ ಮೇಲೆ ಗುಂಡು ಹಾರಿಸಿದ ಗೆಳೆಯ

ಶಿಕ್ಷಕರ ನೇಮಕಾತಿ ಹಗರಣದಲ್ಲಿ ಕೋಟ್ಯಂತರ ರೂಪಾಯಿ ಹಣ, ಚಿನ್ನ, ಆಸ್ತಿ ಪಾಸ್ತಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದಲ್ಲಿ ಪಾರ್ಥ ಚಟರ್ಜಿ ಮತ್ತು ಚಟರ್ಜಿ ನಿಕಟವರ್ತಿ ಅರ್ಪಿತಾ ಮುಖರ್ಜಿ ಬಂಧನದಲ್ಲಿದ್ದಾರೆ.

ಒಂದು ಕಾಲದಲ್ಲಿ ಪೇಂಟರ್ ಆಗಿದ್ದಾತ ಈಗ ಹಲವು ಹೋಟೆಲ್ ಗಳ ಮಾಲೀಕ:

ಸಿಬಿಐ ಮೂಲಗಳ ಪ್ರಕಾರ, ಪಾರ್ಥ ಚಟರ್ಜಿ ನಿಕಟ ಸಂಬಂಧಿ ಪ್ರಸನ್ನ ಕುಮಾರ್ ರಾಯ್ ದುಬೈ, ದಾರ್ಜಿಲಿಂಗ್, ಉತ್ತರಾಖಂಡ್ ಮತ್ತು ಪುರಿಯಲ್ಲಿ ಐಶಾರಾಮಿ ಹೋಟೆಲ್ ಗಳನ್ನು ಹಾಗೂ ಫಾರ್ಮ್ ಹೌಸ್ ಗಳನ್ನು ಹೊಂದಿರುವುದಾಗಿ ತಿಳಿಸಿದೆ.

Advertisement

ಕುತೂಹಲದ ಸಂಗತಿ ಏನೆಂದರೆ ಸ್ಥಳೀಯರ ಮಾಹಿತಿ ಪ್ರಕಾರ, ಪ್ರಸನ್ನ ಕುಮಾರ್ ಈ ಹಿಂದೆ ಮನೆಗಳಿಗೆ ಪೇಂಟ್ ಹೊಡೆಯುವ ಕೆಲಸ ಮಾಡಿಕೊಂಡಿದ್ದು, ನಂತರ ಪೇಂಟಿಂಗ್ ಗುತ್ತಿಗೆದಾರರಾಗಿದ್ದ. ಇಂದು ಹಲವು ಹೋಟೆಲ್, ಫಾರ್ಮ್ ಹೌಸ್ ಗಳ ಮಾಲೀಕನಾಗಿ ಬೆಳೆದಿರುವುದಾಗಿ ವರದಿ ವಿವರಿಸಿದೆ.

ಉತ್ತರ ಬಂಗಾಳ ಪ್ರದೇಶದಲ್ಲಿ ಪ್ರಸನ್ನ ಕುಮಾರ್ ಹೆಸರಿನಲ್ಲಿ ಎಕರೆಗಟ್ಟಲೇ ಜಾಗ ಇದ್ದಿರುವುದನ್ನು ಸಿಬಿಐ ಪತ್ತೆ ಹಚ್ಚಿದೆ. ಇಷ್ಟೊಂದು ದೊಡ್ಡ ಪ್ರಮಾಣದ ಆಸ್ತಿ ಮಾಡಿಕೊಳ್ಳಲು ಶಿಕ್ಷಕರ ನೇಮಕಾತಿ ಹಗರಣದ ಹಣವನ್ನು ಹೂಡಿಕೆ ಮಾಡಿರಬಹುದೇ ಅಥವಾ ಇಲ್ಲವೇ ಎಂಬ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿರುವುದಾಗಿ ಮೂಲಗಳು ಹೇಳಿವೆ.

ಪ್ರಸನ್ನ ಕುಮಾರ್ ರಾಯ್ ಗೆ ಸೇರಿದ್ದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಶನಿವಾರ ಪ್ರಸನ್ನ ಕುಮಾರ್ ರಾಯ್ ಯನ್ನು ಕೋಲ್ಕತಾದ ಸಿಬಿಐ ವಿಶೇಷ ಕೋರ್ಟ್ ಗೆ ಹಾಜರುಪಡಿಸಲಾಗುವುದು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next