Advertisement

ಪಾರ್ಟ್‌ ಟೈಮ್‌ ಜಾಬ್‌ ಟಾಸ್ಕ್: 1.04 ಲ.ರೂ. ವಂಚನೆ

09:22 PM Apr 21, 2023 | Team Udayavani |

ಮಂಗಳೂರು: ಪಾರ್ಟ್‌ ಟೈಂ ಜಾಬ್‌ ಬಗ್ಗೆ ಜಾಹೀರಾತು ನೀಡಿ ಟಾಸ್ಕ್ಗಳನ್ನು ಕೊಟ್ಟು 1.04 ಲ.ರೂ. ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರ ವ್ಯಕ್ತಿ ಎ. 7ರಂದು ಇನ್‌ಸ್ಟಾಗ್ರಾಂನಲ್ಲಿ ಪಾರ್ಟ್‌ಟೈಂ ಜಾಬ್‌ ಬಗ್ಗೆ ಜಾಹೀರಾತು ನೋಡಿದ್ದರು. ಅದರ ಮೇಲೆ ಕ್ಲಿಕ್‌ ಮಾಡಿದಾಗ ವಾಟ್ಸ್‌ ಆ್ಯಪ್‌ನಲ್ಲಿ ಅದು ತೆರೆದುಕೊಂಡಿತ್ತು. ಅದರಲ್ಲಿ 10 ಟಾಸ್ಕ್ಗಳನ್ನು ಆಡುವಂತೆ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಗೆ ತಿಳಿಸಿದ್ದ. ಅದರಂತೆ ದೂರುದಾರ ವ್ಯಕ್ತಿ ಒಂದರ ಅನಂತರ ಇನ್ನೊಂದು ಟಾಸ್ಕ್ ಆಡಿದ್ದರು. ಮೊದಲ ಟಾಸ್ಕ್ 200 ರೂ.ಗಳದ್ದಾಗಿತ್ತು. ಹೀಗೆ ಅಪರಿಚಿತ ವ್ಯಕ್ತಿ ದೂರುದಾರ ವ್ಯಕ್ತಿಯಿಂದ ಹಂತ ಹಂತವಾಗಿ ಪೋನ್‌ ಪೇ ಮೂಲಕ 81,995 ರೂ. ಹಾಗೂ ನೆಫ್ಟ್ ಮೂಲಕ 22,512 ಹೀಗೆ ಒಟ್ಟು 1,04,707 ರೂ.ಗಳನ್ನು ಆತನ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾನೆ ಎಂದು ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next