ಸಂಸತ್‌ನ ಚಳಿಗಾಲದ ಅಧಿವೇಶನ ಬುಧವಾರದಿಂದ ಡಿ.29ರ ವರೆಗೆ ನಡೆಯಲಿದೆ. ವಿತ್ತೀಯ ವಿಚಾರಕ್ಕೆ ಸಂಬಂಧಿಸಿದ ಪ್ರಮುಖ ಮಸೂದೆಯನ್ನು ಅಧಿವೇಶನದ ಅವಧಿಯಲ್ಲಿ ಚರ್ಚೆಗಾಗಿ ಕೈಗೆತ್ತಿಕೊಳ್ಳಲು ಉದ್ದೇಶಿಸಿಲ್ಲ ಎನ್ನುವುದೇ ಈ ಬಾರಿಯ ವಿಶೇಷ. ಈ ರೀತಿ ಆಗುತ್ತಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಈ ಅಧಿವೇಶನದ ವಿವರಗಳ ಮುನ್ನೋಟ ಇಲ್ಲಿದೆ.
ಡಿ.7ರಿಂದ ಡಿ.29- ಅಧಿವೇಶನ ನಡೆಯುವ ಅವಧಿ
17- ಕಲಾಪದ ದಿನಗಳು
16- ಮಂಡಿಸಲು ಉದ್ದೇಶಿಸಿರುವ ಹೊಸ ಮಸೂದೆಗಳು
23- ಅನುಮೋದನೆ ಪಡೆಯಬೇಕಾಗಿರುವ
ಒಟ್ಟು ಮಸೂದೆಗಳು
35- ಸಂಸತ್‌ನಲ್ಲಿ ಅಂಗೀಕಾರಕ್ಕೆ ಬಾಕಿ ಇರುವ ಮಸೂದೆಗಳು
ಮಂಡನೆಗೆ “ಉದ್ದೇಶಿಸದ’ ಮಸೂದೆ
ದತ್ತಾಂಶ ಸಂರಕ್ಷಣ ಮಸೂದೆ (ಡೇಟಾ ಪೊ›ಟೆಕ್ಷನ್ ಬಿಲ್)
ಸ್ಪರ್ಧಾತ್ಮಕ ಆಯೋಗ ಮಸೂದೆ
ಬ್ಯಾಂಕಿಂಗ್ ತಿದ್ದುಪಡಿ ಮಸೂದೆ
ದಿವಾಳಿ ಮಸೂದೆ
ಕರ್ನಾಟಕಕ್ಕೆ ಸಂಬಂಧಿಸಿ ಏನಿರಲಿದೆ?
ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಕೆಲವು ಜಾತಿಗಳ ಸೇರ್ಪಡೆಗಾಗಿ ಇರುವ ನಾಲ್ಕನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಲಾಗುತ್ತದೆ.
Related Articles
ಇತರ ಪ್ರಮುಖ ಮಸೂದೆಗಳು
ರಾಷ್ಟ್ರೀಯ ದಂತ ಆಯೋಗ ಮಸೂದೆ- ದಂತ ವೈದ್ಯಕೀಯ ಶಿಕ್ಷಣ ಬಲಪಡಿಸುವ ನಿಟ್ಟಿನಲ್ಲಿ ಮಂಡಿಸಲಾಗಿರುವ ಮಸೂದೆ
ಬಹು ರಾಜ್ಯ ಸಹಕಾರ ಸಂಘಗಳ (ತಿದ್ದುಪಡಿ) ಕಾಯ್ದೆ- ಹಲವು ರಾಜ್ಯಗಳಲ್ಲಿ ವ್ಯವಹಾರ ನಡೆಸುವ ಸಹಕಾರ ಸಂಘಗಳಲ್ಲಿನ ಹಲವು ವಿಭಾಗಗಳಲ್ಲಿ ಸುಧಾರಣೆ ತರಲು ಉದ್ದೇಶ
ಅರಣ್ಯ ಸಂರಕ್ಷಣೆ (ತಿದ್ದುಪಡಿ) ಮಸೂದೆ- ಯಾವ ಹಂತದಲ್ಲಿ ಕಾಯ್ದೆಯ ನಿಯಮಗಳನ್ನು ಬಳಕೆ ಮಾಡಬೇಕು ಎಂಬ ಗೊಂದಲ ನಿವಾರಣೆ ನಿಟ್ಟಿನಲ್ಲಿ ಈ ಮಸೂದೆ ನೆರವಾಗಲಿದೆ. ಅರಣ್ಯೇತರ ಪ್ರದೇಶಗಳಲ್ಲಿ ಅರಣ್ಯ ಬೆಳೆಸುವ ಉದ್ದೇಶ.