Advertisement

Parliament: ಸಂಸತ್‌ ದಾಳಿ ಪ್ರಜಾಸತ್ತೆಗೆ ಧಕ್ಕೆ ತರುವ ಯತ್ನ- ಜೋಷಿ

11:54 PM Dec 16, 2023 | Team Udayavani |

ಹುಬ್ಬಳ್ಳಿ: ಸಂಸತ್ತಿನೊಳಗೆ ದಾಳಿ ಕೇವಲ ತಿಳಿಗೇಡಿಗಳು ಮಾಡಿರುವಂತಹ ಕೃತ್ಯವಲ್ಲ, ಭಾರತದ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರಲು ಮಾಡಿರುವ ಯತ್ನ. ಇದರಲ್ಲಿ ರಾಜಕೀಯ ಮಾಡಬೇಕಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಷಿ ಆರೋಪಿಸಿದರು.

Advertisement

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸತ್‌ ಮೇಲೆ ದಾಳಿಯ ಸಾಕಷ್ಟು ಪ್ರಕರಣಗಳು ಈ ಹಿಂದೆಯೂ ನಡೆದಿವೆ. ಪಿಸ್ತೂಲ್‌ ಮತ್ತು ಡ್ರ್ಯಾಗರ್‌ ತೆಗೆದುಕೊಂಡೂ ಪ್ರವೇಶಿಸಿದ್ದರು. ಒಂದೇ ವ್ಯಕ್ತಿ ಎರಡು ದಿನ ಒಂದೇ ಪಾಸ್‌ನಲ್ಲಿ ಸಂಸತ್ತಿಗೆ ಪ್ರವೇಶಿಸಿದ್ದ. ಇದಕ್ಕೆ ಯಾವ ಸಂಸದರು ಪಾಸ್‌ ನೀಡಿದ್ದರು ಎಂಬುದೂ ಗೊತ್ತಿದೆ. ಆದರೆ ಇದನ್ನೆಲ್ಲ ನಾವು ಚರ್ಚಿಸುವುದಿಲ್ಲ. ಮುಂದೆ ಇಂತಹ ಘಟನೆ ನಡೆಯದಂತೆ ಕಠಿನ ಕ್ರಮಕ್ಕೆ ಚಿಂತನೆ ನಡೆದಿದೆ ಎಂದರು.

ಸಂಸತ್‌ ಮೇಲಿನ ದಾಳಿ ಪ್ರಕರಣವನ್ನು ಸ್ಪೀಕರ್‌ ನೇತೃತ್ವದಲ್ಲಿ ತನಿಖೆ ಮಾಡಲಾಗುತ್ತಿದೆ ಸಂಸತ್‌ಗೆ ಸ್ಪೀಕರ್‌, ರಾಜ್ಯಸಭಾ ಅಧ್ಯಕ್ಷರು ವಾರಸುದಾರರು. ಗಂಭೀರವಾಗಿ ತನಿಖೆ ಮಾಡುತ್ತಿದ್ದೇವೆ . ರಾಷ್ಟ್ರೀಯ ತನಿಖಾ ದಳದ ಏಜೆನ್ಸಿಗಳು ಸಂಸತ್‌ದೊಳಗಿನ ಭದ್ರತಾ ವ್ಯವಸ್ಥೆ ಬಗ್ಗೆ ತನಿಖೆ ನಡೆಸುತ್ತಿವೆ. ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಎಲ್ಲರ ಮೊಬೈಲ್‌ ಸಂಗ್ರಹಿಸಿ ಓಡಿ ಹೋಗಿದ್ದ ಝಾ ಎಂಬಾತನನ್ನೂ ಬಂಧಿಸಲಾಗಿದೆ. ಶೀಘ್ರವೇ ಘಟನೆ ಹಿಂದಿನ ಶಕ್ತಿ ಹಾಗೂ ಷಡ್ಯಂತ್ರ ಹೊರಬರಲಿದೆ . –ಶೋಭಾ ಕರಂದ್ಲಾಜೆ , ಕೇಂದ್ರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next