Advertisement

ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಗಲ್ಲು

10:08 AM Aug 03, 2019 | mahesh |

ಹೊಸದಿಲ್ಲಿ: ಇನ್ನು ಮುಂದೆ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ ನೀಡಿದರೆ ಗಲ್ಲು ಶಿಕ್ಷೆ ಖಚಿತ. ಇದರ ಜತೆಗೆ ಮಕ್ಕಳು ಇರುವ ಲೈಂಗಿಕ ವೀಡಿಯೋ, ಚಿತ್ರ ಹೊಂದಿರುವುದೂ ಶಿಕ್ಷಾರ್ಹ ಅಪರಾಧ…

Advertisement

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ತಿದ್ದುಪಡಿ) ಮಸೂದೆಗೆ ಲೋಕಸಭೆಯಲ್ಲಿ ಗುರುವಾರ ಅನುಮೋದನೆ ಸಿಕ್ಕಿದೆ. ಜು.29ರಂದು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿರುವುದರಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಅಂಕಿತ ಬಿದ್ದೊಡನೆ ಇದು ಕಾನೂನಾಗಿ ಜಾರಿಯಾಗಲಿದೆ.

ಮಸೂದೆಯ ಮೇಲೆ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮತಿ ಇರಾನಿ, ಪೋಕ್ಸೋ ಮಾಹಿತಿ ಕೋಶದಲ್ಲಿ 6.2 ಲಕ್ಷ ಪ್ರಕರಣಗಳ ಮಾಹಿತಿ ಸಂಗ್ರಹಿಸಲಾಗಿದೆ. 2018ರಿಂದ ಈ ಮಾಹಿತಿ ಕೋಶ ಕಾರ್ಯಾಚರಿಸುತ್ತಿದೆ. ಅಪರಾಧ ಎಸಗಿದ ವ್ಯಕ್ತಿಯನ್ನೇ ಶಿಕ್ಷಿಸುವ ಬಗ್ಗೆ ಎಚ್ಚರಿಕೆಯ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ಲಿಂಗ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಮಹತ್ವದ ಕ್ರಮ ಕೈಗೊಳ್ಳಲಾಗಿದೆ.

ಹೊಸ ಮಸೂದೆಯಿಂದ 43 ಕೋಟಿ ಮಕ್ಕಳಿಗೆ ರಕ್ಷೆ ಸಿಗಲಿದೆ ಎಂದಿದ್ದಾರೆ. ಚರ್ಚೆಯಲ್ಲಿ ಭಾಗವಹಿಸಿದ ಎಲ್ಲ ಸಂಸದರು ವಿಧೇಯಕದಲ್ಲಿನ ತಿದ್ದುಪಡಿ ಪ್ರಸ್ತಾವಕ್ಕೆ ಹೆಚ್ಚಿನ ವಿರೋಧ ಸೂಚಿಸಲಿಲ್ಲ ಎನ್ನುವುದು ಗಮನಾರ್ಹ ಸಂಗತಿ.

ಆರೋಪಿಗೆ 18 ವರ್ಷವಾದರೆ ಮಾತ್ರ ಗಲ್ಲು
ಅತ್ಯಾಚಾರದಂಥ ಘಟನೆಗಳಲ್ಲಿ ಬಾಲಾಪರಾಧಿ ಭಾಗಿಯಾದರೆ ಅಂಥ ಪ್ರಕರಣಗಳು ಬಾಲಪರಾಧ ನ್ಯಾಯ ಮಂಡಳಿ ವ್ಯಾಪ್ತಿಯಲ್ಲಿ ಬರುತ್ತವೆ. ಇಂಥ ಪ್ರಕರಣಗಳಲ್ಲಿ ಕೃತ್ಯವೆಸಗಿದಾತ 18 ವರ್ಷ ವಯೋಮಿತಿಯವನಾಗಿದ್ದರೆ ಮಾತ್ರ ಗಲ್ಲು ಶಿಕ್ಷೆ ನೀಡಲಾಗುತ್ತದೆ ಎಂದರು ಇರಾನಿ. ನಿರ್ಭಯಾ ನಿಧಿ ನೆರವಿನೊಂದಿಗೆ ದೇಶಾದ್ಯಂತ 1,023 ತ್ವರಿತಗತಿಯ ಕೋರ್ಟ್‌ಗಳನ್ನು ಸ್ಥಾಪಿಸಲಾಗುತ್ತದೆ ಎಂದರು.

Advertisement

ಗಲ್ಲು ಕೂಡ ಸಾಲದು
ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌, ಮಕ್ಕಳ ಮೇಲೆ ಲೈಂಗಿಕ ಕಿರುಕುಳ ಎಸಗುವವರಿಗೆ ಗಲ್ಲು ಶಿಕ್ಷೆಯೂ ಕಮ್ಮಿ ಎಂದಿದ್ದಾರೆ.

ಸಾರ್ವಜನಿಕವಾಗಿ ಗಲ್ಲಿಗೇರಿಸಿ
ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದವರಿಗೆ ಕಠಿನಾತಿಕಠಿನ ಶಿಕ್ಷೆ ನೀಡಬೇಕು ಎಂಬ ಬಗ್ಗೆ ಒಕ್ಕೊರಲ ಆಗ್ರಹ ವ್ಯಕ್ತವಾಯಿತು. ಆರ್‌ಎಲ್ಪಿಸಂಸದ ಬೇನಿವಾಲ್, ಇಂಥ ಪ್ರಕರಣದಲ್ಲಿ ಭಾಗಿಯಾದವರನ್ನು ಸಾರ್ವಜನಿಕವಾಗಿ ಗಲ್ಲಿ ಗೇರಿಸಬೇಕು ಎಂದು ಒತ್ತಾಯಿಸಿದರು.

• ಅಪರಾಧ ಎಸಗಿದ ವ್ಯಕ್ತಿಗೆ ಶಿಕ್ಷೆ ನೀಡುವಂತೆ ಜಾಗರೂಕತೆಯ ಕ್ರಮ

• ದೇಶಾದ್ಯಂತ ನಿರ್ಭಯ ನಿಧಿಯನ್ವಯ 1,023 ತ್ವರಿತ ಕೋರ್ಟ್‌ಗಳ ಸ್ಥಾಪನೆ

• ಲಿಂಗ ತಾರತಮ್ಯ ನಿವಾರಣೆ ನಿಟ್ಟಿನಲ್ಲಿ ಮಹತ್ವದ ಕ್ರಮ

• ಹೊಸ ಮಸೂದೆಯಿಂದ 43 ಕೋಟಿ ಮಕ್ಕಳಿಗೆ ಅನುಕೂಲ

• 2018ರಿಂದ ಶುರುವಾದ ಪೋಕ್ಸೋ ಮಾಹಿತಿ ಕೋಶದಲ್ಲಿ 6.2 ಲಕ್ಷ ಪ್ರಕರಣಗಳು ದಾಖಲು

Advertisement

Udayavani is now on Telegram. Click here to join our channel and stay updated with the latest news.

Next