ಆಲಮಟ್ಟಿ: ಮಹಾಮಾರಿ ಕೊರೊನಾ ಎರಡನೇ ಅಲೆನಿರ್ಮೂಲನೆಗಾಗಿ ಮುಂಜಾಗ್ರತಾ ಕ್ರಮವಾಗಿ ಕಿರಾಣಿ,ಅಂಗಡಿ, ಔಷಧ ಅಂಗಡಿಗಳನ್ನು ಹೊರತುಪಡಿಸಿ ಎಲ್ಲಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದಘಟನೆ ಶುಕ್ರವಾರ ನಡೆಯಿತು.
ರಾಜ್ಯ ಸರ್ಕಾರದ ನಿರ್ದೇಶನದಂತೆ ಶುಕ್ರವಾರಬೆಳಗ್ಗೆಯಿಂದಲೇ ಆಲಮಟ್ಟಿಯಲ್ಲಿರುವ ಚಹಾ ಅಂಗಡಿ, ಬಟ್ಟೆಅಂಗಡಿ, ಡಾಬಾಗಳು ಸೇರಿದಂತೆ ವಿವಿಧ ಅಂಗಡಿಗಳಿಗೆ ಭೇಟಿನೀಡಿದ ಪೊಲೀಸ್ ಅ ಧಿಕಾರಿಗಳು ಬಂದ್ ಮಾಡಿಸಿದರು.
ಆಲಮಟ್ಟಿಯಲ್ಲಿ ರಾಕ್ ಉದ್ಯಾನ, ಮೊಘಲ್ ಉದ್ಯಾನ,ಲೇಷರ್ ಶೋ, ಸಂಗೀತ ನೃತ್ಯ ಕಾರಂಜಿ, ಲವಕುಶ ಉದ್ಯಾನ,ಗೋಪಾಲಕೃಷ್ಣ ಉದ್ಯಾನ, ಆಲಮಟ್ಟಿ ಲಾಲ್ ಬಹಾದ್ದೂರ್‌ಶಾಸ್ತ್ರಿ ಜಲಾಶಯ ಹೀಗೆ ಹಲವಾರು ಉದ್ಯಾನಗಳನ್ನುಹೊಂದಿದೆ.
ಇನ್ನು ಪ್ರವಾಸಿಗರ ಆಗಮನಕ್ಕೆ ರೈಲು ನಿಲ್ದಾಣ, ರಾಷ್ಟ್ರೀಯಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ ಹೊಂದಿದೆ. ಈಗಾಗಲೇಆಲಮಟ್ಟಿಯಲ್ಲಿರುವ ಎಲ್ಲ ಉದ್ಯಾನಗಳಿಗೆ ಪ್ರವಾಸಿಗರಪ್ರವೇಶವನ್ನು ನಿಷೇಧಿ ಸಲಾಗಿದ್ದರೂ ಕೂಡ ಬೇರೆ ಸ್ಥಳಗಳಿಂದಜನ ಬರುವ ನಿರೀಕ್ಷೆಯಿದೆ.
ಆದ್ದರಿಂದ ಅಂಗಡಿಕಾರರು ತಮ್ಮಅಂಗಡಿಗಳನ್ನು ಸ್ವಯಂಕೃತವಾಗಿ ಬಂದ್ ಮಾಡಿ ಕೊರೊನಾನಿಯಂತ್ರಣಕ್ಕೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕುಎಂದು ಕೋರಿದರು.