Advertisement
ಈ ಯೋಜನೆ ಕಡತ ಈಗ ಮಂಗಳೂರು ಪಾಲಿಕೆ-ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸದ್ಯ ಸ್ಮಾರ್ಟ್‌ಸಿಟಿಯ ಮಧ್ಯೆ ಅತ್ತಿಂದಿತ್ತ ಕೈ ಬದಲಾಗುತ್ತಿದೆಯೇ ಹೊರತು ಯೋಜನೆ ಸಾಕಾರಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ! ಹಂಪನಕಟ್ಟೆಯಲ್ಲಿ ಸುಮಾರು 1.50 ಎಕರೆ ಸರಕಾರಿ ಮತ್ತು ಉಳಿದ ಖಾಸಗಿ ಜಾಗ ಸೇರಿ ಅಂದಾಜು 2.10 ಎಕ್ರೆ ಪ್ರದೇಶ ದಲ್ಲಿ ಬಹುಮಹಡಿ ವಾಣಿಜ್ಯ/ವಾಹನ ನಿಲು ಗಡೆ ಕಾಂಪ್ಲೆಕ್ಸ್ ನಿರ್ಮಿಸುವ ಯೋಜನೆ ಯಾಗಿ ದೆ. ಪಾಲಿಕೆಯೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಈ ಹಿಂದೆ ಯೋಚಿಸಿ ತ್ತಾದರೂ ಅದು ಕಾರ್ಯಗತವಾಗದ ಕಾರಣದಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ಈ ಯೋಜನೆ ಮುಂ ದುವರಿಸುವ ಬಗ್ಗೆ ಚಿಂತಿಸಲಾಗಿತ್ತು. ಅದೂ ಈಡೇರದೆ ಮೂರು ವರ್ಷದ ಹಿಂದೆ ಇದನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 91 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆ ಯನ್ನು ಅನುಷ್ಠಾನಗೊಳಿಸುವುದಕ್ಕೆ ಉದ್ದೇಶಿ ಸಲಾಗಿದೆ.
Related Articles
Advertisement
ಮಂಗಳೂರಿನಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹತ್ತು ಕಡೆಗಳಲ್ಲಿ ಬಹು ಅಂತಸ್ತು (ಮಲ್ಟಿಲೆವೆಲ…) ವಾಹನ ನಿಲುಗಡೆ ತಾಣಗಳನ್ನು ನಿರ್ಮಿಸುವ ಇಂಗಿತವನ್ನು 2009ರ ನ. 25ರಂದು ಅಂದಿನ ರಾಜ್ಯ ನಗರಾಭಿವೃದ್ದಿ ಸಚಿವ ಸುರೇಶ್ ಕುಮಾರ್ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಮೊದಲ ತಾಣವನ್ನು ಹಂಪನಕಟ್ಟೆಯ ಹಳೆ ಬಸ್ ತಂಗುದಾಣವನ್ನು ಗುರುತಿಸಲಾಗಿತ್ತು. ಆದರೆ ಅನಂತರ ಯಾವ ಕಾರ್ಯವೂ ಆಗಲಿಲ್ಲ.
ಬೆಂಗಳೂರಿನಲ್ಲಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ :
ಹೊಸದಿಲ್ಲಿ, ಬೆಂಗಳೂರು, ಮುಂಬಯಿ ಸಹಿತ ಮಹಾನಗರಗಳಲ್ಲಿ ಬಹು ಅಂತಸ್ತು ವಾಹನ ಪಾರ್ಕಿಂಗ್ ವ್ಯವಸ್ಥೆ ಜಾರಿಯಲ್ಲಿದೆ. ಬೆಂಗಳೂರಿನ ಮೂರು ಕಡೆಗಳಲ್ಲಿ ಜಾರಿಯಲ್ಲಿರುವ ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ ಅಲ್ಲಿನ ಒಟ್ಟು ವಾಹನ ದಟ್ಟಣೆ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಪರಿಕಲ್ಪನೆಗೆ ಬೆಳೆಯುತ್ತಿರುವ ಮಂಗಳೂರಿಗೆ ಅನಿವಾರ್ಯ.
ಹಂಪನಕಟ್ಟೆ ಹಳೆ ಬಸ್ ನಿಲ್ದಾಣದ ಜಾಗದಲ್ಲಿ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯನ್ನು ಸ್ಮಾರ್ಟ್‌ಸಿಟಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಇದರ ಟೆಂಡರ್ ಪೂರ್ಣಗೊಂಡು ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ. ಸದ್ಯ ಹಂಪನಕಟ್ಟದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್ ಪಾರ್ಕಿಂಗ್ ಕಾಮಗಾರಿಯನ್ನೂ ಕೂಡ ಒಮ್ಮೆಲೆ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಈ ಕಾಮಗಾರಿ ಪೂರ್ಣವಾದ ಬಳಿಕ ಪಾರ್ಕಿಂಗ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. –ಅಕ್ಷಯ್ ಶ್ರೀಧರ್, ಆಯುಕ್ತರು, ಮನಪಾ