Advertisement
ಮಾಸಿಕ ಜನಸಂಪರ್ಕ ಸಭೆ ಹಿನ್ನೆಲೆಯಲ್ಲಿ ಶನಿವಾರ ಕೋರಮಂಗಲ ಠಾಣೆ ಆವರಣದಲ್ಲಿ ಆಯೋಜಿಸಿದ್ದಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಸಭೆಯಲ್ಲಿ ವೈದ್ಯರು, ಸರ್ಕಾರೇತರ ಸಂಸ್ಥೆಗಳು, ಎಂಜಿನಿಯರ್‌ಗಳು ಸೇರಿ ಸುಮಾರು 150ಕ್ಕೂ ಅಧಿಕ ಮಂದಿ ಪಾಲ್ಗೊಂಡು, ಆಯುಕ್ತರಿಗೆ ಪ್ರಶ್ನೆಗಳನ್ನು ಕೇಳಿದರು.
Related Articles
Advertisement
ಟೋಯಿಂಗ್ ಸಿಬ್ಬಂದಿ ವಿರುದ್ಧ ದೂರು: ಪಾರ್ಕಿಂಗ್‌ಸ್ಥಳದಲ್ಲಿಯೂ ಟೋಯಿಂಗ್ ಸಿಬ್ಬಂದಿ ವಾಹನ ಎತ್ತೂಯ್ಯುತ್ತಿದ್ದಾ. ಕೇವಲ ಐದು ಅಥವಾ ಹತ್ತು ನಿಮಿಷದ ಕೆಲಸಕ್ಕಾಗಿ ವಾಹನ ನಿಲ್ಲಿಸಿ ಕಚೇರಿಯೊಳಗೆ ಹೋಗಿ ಬರುವಷ್ಟರಲ್ಲೇ ವಾಹನ ಟೋಯಿಂಗ್ ಮಾಡಿರುತ್ತಾರೆ ಎಂದು ಸಾರ್ವಜನಿಕರು ಕೇಳಿದರು.
ಅದಕ್ಕೆ ಉತ್ತರಿಸಿ ಆಯುಕ್ತರು, ಸಂಚಾರ ನಿಯಮ ಉಲ್ಲಂಘಿಸಿ ನೋ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೇ ವಾಹನ ಟೋಯಿಂಗ್ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸಂಚಾರ ನಿಯಮ ಮಾಡಲಾಗಿದೆ ಎಂದರು.
ಸಿಬ್ಬಂದಿ ಕುಂದು-ಕೊರತೆ ಪರಿಶೀಲನೆ: ಸಾರ್ವಜನಿಕ ಸಭೆ ಬಳಿಕ ಕೋರಮಂಗಲ ಪೊಲೀಸ್ ಠಾಣೆಯ ಅಧಿಕಾರಿ-ಸಿಬ್ಬಂದಿ ಜತೆ ಕೆಲ ಹೊತ್ತು ಚರ್ಚಿಸಿದಆಯುಕ್ತರು, ಅವರ ಕುಂದು-ಕೊರತೆಗಳನ್ನು ಆಲಿಸಿದರು. ಬಳಿಕ ರಾತ್ರಿ ಮತ್ತು ಹಗಲು ಸಂದರ್ಭದಲ್ಲಿ ಬೀಟ್ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ, ಮಡಿವಾಳ ಉಪವಿಭಾಗ ಎಸಿಪಿ ಶ್ರೀಧರ್ ಎಂ. ಹೆಗಡೆ, ಕೋರಮಂಗಲ ಠಾಣೆ ಇನ್‌ಸ್ಪೆಕ್ಟರ್ ಇತರರಿದ್ದರು.