Advertisement

ಮದ್ಯದ ಬಾಟಲ್‌ ರಾರಾಜಿಸುತ್ತಿದ್ದ ಪಾರ್ಕ್‌ ಸ್ವಚ್ಛತೆ

01:59 PM Jun 08, 2021 | Team Udayavani |

ತುಮಕೂರು: ನಗರದ 15ನೇ ವಾರ್ಡಿನ ಸರ್ಕಾರಿ ಜೂನಿಯರ್‌ ಕಾಲೇಜು ಮೈದಾನದಲ್ಲಿರುವ ಆಲದಮರದ ಪಾರ್ಕ್‌ ಅನ್ನು ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌ ಅವರ ನೇತೃತ್ವದಲ್ಲಿ ಸೋಮವಾರ ಬೆಳಗ್ಗೆ ಚಕ್ರವರ್ತಿ ಗೆಳೆಯರ ಬಳಗ, ಅಕೇಷನಲ್‌ ಕ್ರಿಕೆಟ್‌ ಅಸೋಸಿಯೇಷನ್‌ ಸದಸ್ಯರ ಸಹಕಾರದೊಂದಿಗೆ ಶುಚಿಗೊಳಿಸುವ ಕಾರ್ಯ ನಡೆಯಿತು.

Advertisement

ಪಾರ್ಕ್‌ ಶುಚಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಸುಮಾರು 99 ಲಕ್ಷ ರೂ.ಗಳಲ್ಲಿ ಜೂನಿಯರ್‌ ಕಾಲೇಜಿನ ಆಲದ ಮರದ ಪಾರ್ಕ್‌ ಅಭಿವೃದ್ಧಿ ಕಾಮಗಾರಿ ನಡೆದಿದ್ದು, ಕೊನೇ ಹಂತದಲ್ಲಿದೆ. ಆದರೆ, ಕೆಲವರು ಉದ್ಯಾನವನದಲ್ಲಿ ಮದ್ಯಪಾನ ಮಾಡಿ, ಎಲ್ಲೆಂದರಲ್ಲಿ ಬಾಟಲ್‌ಗ‌ಳನ್ನು ಎಸೆದಿರುವುದಲ್ಲದೆ, ತಿಂಡಿ ತಿಂದ ಪೊಟ್ಟಣಗಳನ್ನು ಬೇಕಾಬಿಟ್ಟಿಯಾಗಿ ಎಸೆದಿದ್ದರಿಂದ ಇಡೀ ಪಾರ್ಕ್‌ ಕೊಳೆತು ದುರ್ವಾಸನೆ ಬೀರುತ್ತಿತ್ತು. ಚಕ್ರವರ್ತಿ ಗೆಳೆಯರ ಬಳಗದ ಪ್ರಕಾಶ್‌, ಅಕೇಷನಲ್‌ ಕ್ರಿಕೆಟ್‌ ಅಸೋಸಿಯೇಷನ್‌ನ ಲೋಕೇಶ್‌, ಧನಿಯ

ಕುಮಾರ್‌ ಹಾಗೂ ಅವರ ಟೀಮ್‌ನ ಸದಸ್ಯರು, ನಗರಪಾಲಿಕೆ ಪೌರಕಾರ್ಮಿಕ ಸಿಬ್ಬಂದಿಯೊಂದಿಗೆ ಪಾರ್ಕ್‌ ಶುಚಿಗೊಳಿಸಿದರು.

ಭದ್ರತಾ ಸಿಬ್ಬಂದಿ ನಿಯೋಜನೆ: ಕಾರ್ಪೋರೇಟರ್‌ ಗಿರಿಜಾ ಧನಿಯಕುಮಾರ್‌ ಅವರ ಒತ್ತಾಯದ ಮೇರೆಗೆ ಸ್ಥಳಕ್ಕೆ ಆಗಮಿಸಿದ್ದ ಸ್ಮಾರ್ಟ್‌ಸಿಟಿ ಎಂಜಿನಿಯರ್‌ ಚನ್ನವೀರಸ್ವಾಮಿ, ಆಲದಮರದ ಪಾರ್ಕ್‌ ಅಭಿವೃದ್ಧಿ ಕಾರ್ಯ ಕೊನೇ ಹಂತದಲ್ಲಿದೆ. ಜನರಿಗೆ ವಾಕಿಂಗ್‌ ಪಾರ್ಕ್‌, ಲೈಟಿಂಗ್‌ ವ್ಯವಸ್ಥೆ, ಕುಳಿತು ಕೊಳ್ಳಲು ಬೆಂಚ್‌, ಹೀಗೆ ಹತ್ತು ಹಲವು ವ್ಯವಸ್ಥೆ ಇಲ್ಲಿದೆ. ಓರ್ವ ಭದ್ರತಾ ಸಿಬ್ಬಂದಿಯನ್ನು ನೇಮಿ ಸಲು, ಡಸ್ಟ್‌ಬಿನ್‌ ಇಡಲು ಸ್ಮಾರ್ಟ್‌ಸಿಟಿ ಎಂ.ಡಿ. ಹಾಗೂ ಮುಖ್ಯ ಎಂಜಿನಿಯರ್‌ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು ಎಂದರು.

ಕಸ ಬಿಸಾಡಿದರೆ ಠಾಣೆಗೆ ದೂರು ನೀಡುವೆವು:

Advertisement

ಪಾಲಿಕೆ ಸದಸ್ಯೆ ಗಿರಿಜಾ ಧನಿಯಕುಮಾರ್‌ ಮಾತನಾಡಿ, ಇಲ್ಲೇ ಕೇಕ್‌ ಕತ್ತರಿಸಿ, ಹುಟ್ಟು ಹಬ್ಬ ಆಚರಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ. ಅಲ್ಲದೆ ತಿಂಡಿ ತಿಂದ ಮೇಲೆ ಬರುವ ವೆಸ್ಟ್‌ ಅನ್ನು ಡಸ್ಟ್‌ ಬಿನ್‌ ಗಳಲ್ಲಿ ಹಾಕಬೇಕು. ಸಾರ್ವಜನಿಕರಾಗಲಿ, ವಿದ್ಯಾರ್ಥಿಗಳಾಗಲಿ ಪಾರ್ಕ್‌ ನ ಪರಿಸರಕ್ಕೆ ಹಾನಿ ಮಾಡಿದರೆ ಕ್ರಮಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಅಲ್ಲದೇ, ಪೊಲೀಸ್‌ ಇಲಾಖೆ ಇಲ್ಲಿ ಗಸ್ತು ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಲಾಗುವುದೆಂದರು.

Advertisement

Udayavani is now on Telegram. Click here to join our channel and stay updated with the latest news.

Next