Advertisement
ಈ ಕ್ರೀಡಾಕೂಟ ಪ್ಯಾರಿಸ್ ಆತಿಥ್ಯ ದಲ್ಲೇ ಆ. 28ರಿಂದ ಸೆ. 8ರ ತನಕ ನಡೆಯಲಿದೆ. ಇದರ ಜ್ಯೋತಿಯನ್ನು ಶನಿವಾರ ಲಂಡನ್ ಸಮೀಪದ ಬಕಿಂಗ್‌ಹ್ಯಾಮ್‌ಶೈರ್‌ನ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ಬೆಳಗಿಸಲಾಯಿತು. ಇದು ಪ್ಯಾರಾಲಿಂಪಿಕ್ಸ್ ಜನ್ಮಸ್ಥಳ. ಇಲ್ಲಿಂದ ಈ ಜ್ಯೋತಿ 4 ದಿನಗಳ ಕಾಲ ಇಂಗ್ಲಿಷ್ ಕಾಲುವೆ ಮೂಲಕ ಪ್ಯಾರಿಸ್‌ಗೆ ಆಗಮಿಸಲಿದೆ. ಅಟ್ಲಾಂಟಿಕ್ ಮಹಾ ಸಾಗರದಿಂದ ಮೆಡಿಟರೇನಿಯನ್ ಕಿನಾರೆ, ಪೈರಿನೀಸ್-ಆಲ್ಫ್ ಪರ್ವತ ಶ್ರೇಣಿಯನ್ನು ಹಾದು ಬರಲಿದೆ. ಕ್ರೀಡಾಕೂಟದ ಆರಂಭದ ದಿನವಾದ ಬುಧವಾರ ಪ್ಯಾರಾಲಿಂಪಿಕ್ಸ್ ಜ್ಯೋತಿ ಪ್ಯಾರಿಸ್ ತಲುಪಲಿದೆ.
Related Articles
Advertisement
ಈ ಕ್ರೀಡಾಕೂಟದ ಕಲ್ಪನೆಯ ಹಿಂದಿ ರುವ ವ್ಯಕ್ತಿ ಲುಡ್ವಿಂಗ್ ಗಟ್‌ಮ್ಯಾನ್. ಯಹೂದಿ ಶಸ್ತ್ರಚಿಕಿತ್ಸಕರಾಗಿದ್ದ ಇವರು ಜರ್ಮನಿಯ ನಾಝಿ ಶಿಬಿರದಿಂದ ಪಲಾಯನಗೈದು, ಸ್ಟೋಕ್ ಮ್ಯಾಂಡೆವಿಲ್ಲೆ ಆಸ್ಪತ್ರೆಯಲ್ಲಿ ಕೆಲಸ ಮಾಡಿದರು.
ಬಳಿಕ ಈ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್ ಗೇಮ್ಸ್ ಎಂದು ಕರೆಯಲ್ಪಟ್ಟಿತು. 1960ರಲ್ಲಿ ಮೊದಲ ಸಲ ರೋಮ್‌ನಲ್ಲಿ ನಡೆಯಿತು. 2012ರ ಲಂಡನ್ ಪ್ಯಾರಾಲಿಂಪಿಕ್ಸ್ ವೇಳೆ ಸ್ಟೋಕ್ ಮ್ಯಾಂಡೆವಿಲ್ಲೆಯಲ್ಲಿ ಮೊದಲ ಸಲ ಕ್ರೀಡಾಜ್ಯೋತಿಯನ್ನು ಬೆಳಗಿಸಲಾಯಿತು.