Advertisement

Paris Olympics; ವೆಸ್ಟ್‌ ಇಂಡೀಸ್‌ ನ ಮಾಜಿ ವೇಗಿ ಪುತ್ರ ಅಮೆರಿಕದ ಹರ್ಡಲ್ಸ್‌ ಹೀರೋ

11:32 PM Aug 11, 2024 | Team Udayavani |

ಪ್ಯಾರಿಸ್‌: ಅಮೆರಿಕದ ರಾಯ್‌ ಬೆಂಜಮಿನ್‌ ಪ್ಯಾರಿಸ್‌ ಒಲಿಂಪಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಚಾಂಪಿಯನ್‌ ಆದದ್ದು ಈಗ ಇತಿಹಾಸ. ಇವರ ಸಾಧನೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಕಾರಣ, ಈ ರಾಯ್‌ ಬೆಂಜಮಿನ್‌ ಬೇರೆ ಯಾರೂ ಅಲ್ಲ, ವಿಂಡೀಸ್‌ನ ಮಾಜಿ ವೇಗಿ ವಿನ್‌ಸ್ಟನ್‌ ಬೆಂಜಮಿನ್‌ ಅವರ ಪುತ್ರ!

Advertisement

“ಮಗನ ಸಾಧನೆಯಿಂದ ಬಹಳ ಹೆಮ್ಮೆಯಾಗಿದೆ. ಇದಕ್ಕಾಗಿ ಅವನು ಅದೆಷ್ಟು ಕಷ್ಟಪಟ್ಟಿದ್ದಾನೆಂಬುದು ನನಗೆ ಗೊತ್ತು. ಇವನ ಚಿನ್ನದ ಸಾಧನೆಯಿಂದ ಆ್ಯಂಟಿಗುವಾದಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ರಾಯ್‌ ಬೆಂಜಮಿನ್‌ ಅಮೆರಿಕನ್‌. ಹೀಗಾಗಿ ಅಮೆರಿಕದವರಷ್ಟೇ ಸಡಗರ, ಖುಷಿ ನಮ್ಮದೂ ಆಗಿದೆ’ ಎಂಬುದಾಗಿ 59 ವರ್ಷದ ವಿನ್‌ಸ್ಟನ್‌ ಬೆಂಜಮಿನ್‌ ಹೇಳಿದರು. ಇವರ 6 ಮಕ್ಕಳಲ್ಲಿ ರಾಯ್‌ ಒಬ್ಬರು. ಈಗ 27 ವರ್ಷ. ಟೋಕಿಯೊ ಒಲಿಂಪಿಕ್ಸ್‌ನ 400 ಮೀ. ಹರ್ಡಲ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಪ್ಯಾರಿಸ್‌ನಲ್ಲಿ ಇದು ಚಿನ್ನಕ್ಕೆ ಪರಿವರ್ತನೆಗೊಂಡಿದೆ.

ರಾಯ್‌ ಬೆಂಜಮಿನ್‌ ಆರಂಭದಲ್ಲಿ ಕ್ರಿಕೆಟ್‌, ಬಳಿಕ ಅಮೆರಿಕನ್‌ ಫುಟ್‌ಬಾಲ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದರು. ಅಂತಿಮವಾಗಿ ಟ್ರ್ಯಾಕ್‌ ಸ್ಪರ್ಧೆಗಳಿಗೆ ಧುಮುಕಿದರು.

ಕೆರಿಬಿಯನ್‌ ಕ್ರಿಕೆಟ್‌ನ “ವೇಗದ ಬೌಲಿಂಗ್‌ ಯುಗ’ದ ಕೊನೆಯ ದಿನಗಳಲ್ಲಿ ವಿನ್‌ಸ್ಟನ್‌ ಬೆಂಜಮಿನ್‌ ವಿಂಡೀಸ್‌ ತಂಡದ ಪ್ರಮುಖ ಬೌಲರ್‌ ಆಗಿದ್ದರು. 1980-1990ರ ಅವಧಿ ಯಲ್ಲಿ 21 ಟೆಸ್ಟ್‌ ಹಾಗೂ 85 ಏಕದಿನ ಪಂದ್ಯಗಳನ್ನಾಡಿದ್ದರು. ಒಮ್ಮೆ ಇವರ ಎಸೆತಕ್ಕೆ ಸಂಜಯ್‌ ಮಾಂಜ್ರೇಕರ್‌ ಅವರಿಗೆ ಗಂಭೀರ ಏಟು ಬಿದ್ದಿತ್ತು.

Advertisement

ಮಗನ ಸಾಧನೆಯನ್ನವರು ಸ್ಟೇಡಿಯಂನಲ್ಲಿ ಕುಳಿತು ವೀಕ್ಷಿಸಿದ್ದರು. ತನ್ನ ಪಾಲಿಗೆ ಒಲಿಂಪಿಕ್ಸ್‌ ಅಂದರೆ ವಿಶ್ವಕಪ್‌ ಕ್ರಿಕೆಟ್‌ ಫೈನಲ್‌ ಇದ್ದಂತೆ ಎಂಬುದಾಗಿ ಹೋಲಿಕೆ ಮಾಡಿ ದ್ದಾರೆ. ಸದ್ಯ ಆ್ಯಂಟಿಗುವಾದಲ್ಲಿ ಕ್ರಿಕೆಟ್‌ ಅಕಾ ಡೆಮಿಯೊಂದನ್ನು ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next