Advertisement

Olympics ನಲ್ಲಿ ಭಾರತ; ಮಂಗಳವಾರದ ಸ್ಪರ್ಧೆಗಳ ವಿವರ:ಮನು-ಸರಬ್ಜೊತ್‌ ಕಂಚಿನ ನಿರೀಕ್ಷೆ

10:59 PM Jul 29, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ನಲ್ಲಿ ಭಾರತದ ಪದಕದ ಖಾತೆ ತೆರೆದ ಶೂಟರ್‌ ಮನು ಭಾಕರ್‌, ಇನ್ನೊಂದು ಕಂಚಿನ ನಿರೀಕ್ಷೆ ಮೂಡಿಸಿದ್ದಾರೆ. ಅವರು 10 ಮೀಟರ್‌ ಏರ್‌ ಪಿಸ್ತೂಲ್‌ ಮಿಶ್ರ ತಂಡ ಸ್ಪರ್ಧೆಯಲ್ಲಿ ಸರಬ್ಜೊತ್‌ ಸಿಂಗ್‌ ಜತೆಗೂಡಿ ಕಂಚಿನ ಪದಕದ ಪ್ಲೇ ಆಫ್ ಸುತ್ತು ತಲುಪಿದ್ದಾರೆ. ಮಂಗಳವಾರ ಈ ಸ್ಪರ್ಧೆ ನಡೆಯಲಿದೆ.

Advertisement

ಆದರೆ ಮೊದಲ ಪ್ರವೇಶದಲ್ಲೇ ಭಾರೀ ಸಂಚಲನ ಮೂಡಿಸಿದ ರಮಿತಾ ಜಿಂದಾಲ್‌ ಅವರ ಪದಕ ನಿರೀಕ್ಷೆ ಹುಸಿಯಾಗಿದೆ. ವನಿತೆಯರ 10 ಮೀ. ಏರ್‌ ರೈಫ‌ಲ್‌ ಫೈನಲ್‌ನಲ್ಲಿ ರಮಿತಾ 7ನೇ ಸ್ಥಾನಿಯಾದರು. ಹಾಗೆಯೇ ಅರ್ಜುನ್‌ ಬಬುತಾ ಒಂದೇ ಹೆಜ್ಜೆ ಹಿಂದುಳಿದು ಕಂಚಿನ ಪದಕದಿಂದ ವಂಚಿತರಾದರು.

ಭಾರತದ ಜೋಡಿಗೆ 580 ಅಂಕ
ಸೋಮವಾರದ ಮಿಶ್ರ ತಂಡ ಸ್ಪರ್ಧೆಯಲ್ಲಿ ಮನು ಭಾಕರ್‌-ಸರಬೊjàತ್‌ ಸಿಂಗ್‌ ಒಟ್ಟು 580 ಅಂಕ ಸಂಪಾದಿಸಿ ಕಂಚಿನ ಸ್ಪರ್ಧೆಗೆ ಅಣಿಯಾದರು. ಮಂಗಳವಾರ ಭಾರತದ ಜೋಡಿ ಕೊರಿಯಾದ ಒಹ್‌ ಯೆ ಜಿನ್‌-ಲೀ ವೊನ್ಹೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ಕೊರಿಯಾದ ಜೋಡಿ 579 ಅಂಕ ಗಳಿಸಿತು.

ಮನು ಭಾಕರ್‌ ಮೊದಲೆರಡು ಸುತ್ತಿನಲ್ಲಿ ತಲಾ 98 ಅಂಕ ಗಳಿಸಿ ಭರವಸೆ ಮೂಡಿಸಿದರು. ಆದರೆ 3ನೇ ಸುತ್ತಿನಲ್ಲಿ ಹಿನ್ನಡೆಯಾಯಿತು. ಇಲ್ಲಿ ಲಭಿಸಿದ್ದು 95 ಅಂಕ. ಸರಬ್ಜೊತ್‌ ಸಿಂಗ್‌ ಕ್ರಮವಾಗಿ 95, 97 ಹಾಗೂ 97 ಅಂಕ ಗಳಿಸಿದರು. ಇವರು ಪುರುಷರ 10 ಮೀ. ಏರ್‌ ಪಿಸ್ತೂಲ್‌ ಸ್ಪರ್ಧೆಯಲ್ಲಿ ಗುರಿ ತಪ್ಪಿದ್ದರು.

Advertisement

ರಮಿತಾ ವಿಫ‌ಲ
ಯುವ ಶೂಟರ್‌ ರಮಿತಾ ಜಿಂದಾಲ್‌ 8 ಮಂದಿಯ ಫೈನಲ್‌ನಲ್ಲಿ 7ನೇ ಸ್ಥಾನಿಯಾದರು. ಅವರ ಗಳಿಕೆ 145.3 ಅಂಕ. ಎಲಿಮಿನೇಶನ್‌ ಸುತ್ತು ಆರಂಭವಾದಾಗ ಎರಡನೆಯವರಾಗಿ ಹೊರಬಿದ್ದರು.

ಒಂದು ಹಂತದಲ್ಲಿ ರಮಿತಾ 4ನೇ ಸ್ಥಾನದಲ್ಲಿದ್ದರು. ಆದರೆ ಇದೇ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ವಿಫ‌ಲರಾದರು. 10 ಶಾಟ್‌ಗಳ ಬಳಿಕ ರಮಿತಾ 7ನೇ ಸ್ಥಾನಕ್ಕೆ ಇಳಿದರು (104). ಕಳೆದ ಏಷ್ಯಾಡ್‌ನ‌ಲ್ಲಿ ಕಂಚಿನ ಪದಕ ಜಯಿಸಿದ್ದ ರಮಿತಾ ಜಿಂದಾಲ್‌, ಅರ್ಹತಾ ಸುತ್ತಿನಲ್ಲಿ 5ನೇ ಸ್ಥಾನದೊಂದಿಗೆ ಫೈನಲ್‌ ಪ್ರವೇಶಿಸಿದ್ದರು.

ಬ್ಯಾಡ್ಮಿಂಟನ್‌
ಪುರುಷರ ಸಿಂಗಲ್ಸ್‌: ಎಚ್‌.ಎಸ್‌. ಪ್ರಣಯ್‌, ಲಕ್ಷ್ಯ ಸೇನ್‌.
ವನಿತಾ ಸಿಂಗಲ್ಸ್‌: ಪಿ.ವಿ. ಸಿಂಧು.
ಪುರುಷರ ಡಬಲ್ಸ್‌: ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌.
ವನಿತಾ ಡಬಲ್ಸ್‌: ತನಿಷಾ ಕ್ರಾಸ್ಟೊ-ಅಶ್ವಿ‌ನಿ ಪೊನ್ನಪ್ಪ.
ಸಮಯ: ಅ. 12.00

 ಶೂಟಿಂಗ್‌
ಪುರುಷರ ಟ್ರ್ಯಾಪ್‌ ಅರ್ಹತಾ ಸುತ್ತು: ಪೃಥ್ವಿರಾಜ್‌ ತೊಂಡೈಮಾನ್‌.
ವನಿತಾ ಟ್ರ್ಯಾಪ್‌ ಅರ್ಹತಾ ಸುತ್ತು: ರಾಜೇಶ್ವರಿ ಕುಮಾರಿ, ಶ್ರೇಯಸಿ ಸಿಂಗ್‌.
ಸಮಯ: ಅ. 12.30
10 ಮೀ. ಏರ್‌ ಪಿಸ್ತೂಲ್‌ ಮಿಶ್ರ ತಂಡ, ಪದಕ ಸುತ್ತು: ಮನು ಭಾಕರ್‌-ಸರಬೊjàತ್‌ ಸಿಂಗ್‌.
ಸಮಯ: ಅ. 1.00
ಪುರುಷರ ಟ್ರ್ಯಾಪ್‌ ಫೈನಲ್‌
ಸಮಯ: ರಾತ್ರಿ 7.00

 ಟೇಬಲ್‌ ಟೆನಿಸ್‌
ಪುರುಷರ ಸಿಂಗಲ್ಸ್‌: ಹರ್ಮೀತ್‌ ದೇಸಾಯಿ.
ವನಿತಾ ಸಿಂಗಲ್ಸ್‌: ಮಣಿಕಾ ಬಾತ್ರಾ, ಶ್ರೀಜಾ ಅಕುಲಾ.
ಸಮಯ: ಅ. 1.30

 ರೋವಿಂಗ್‌
ಪುರುಷರ ಸಿಂಗಲ್‌ ಸ್ಕಲ್‌ ಕ್ವಾರ್ಟರ್‌ ಫೈನಲ್‌: ಬಲ್ರಾಜ್‌ ಪನ್ವರ್‌.
ಸಮಯ: ಅ. 1.40

 ಬಾಕ್ಸಿಂಗ್‌
ಪುರುಷರ 51 ಕೆಜಿ, 16ರ ಸುತ್ತು.
ಸಮಯ: ಅ. 2.30
ವನಿತೆಯರ 57 ಕೆಜಿ ವಿಭಾಗ, 32ರ ಸುತ್ತು: ಜಾಸ್ಮಿನ್‌ ಲಾಂಬೋರಿಯ.
ಸಮಯ: ಸಂಜೆ 4.38

 ಈಕ್ವೇಸ್ಟ್ರಿಯನ್‌
ಡ್ರೆಸ್ಸೇಜ್‌ ವೈಯಕ್ತಿಕ ಸ್ಪರ್ಧೆ: ಅನುಶ್‌ ಅಗರ್ವಾಲ್‌.
ಸಮಯ: ಅ. 2.30

 ಆರ್ಚರಿ
ಪುರುಷರ ಹಾಗೂ ವನಿತೆಯರ ವೈಯಕ್ತಿಕ 64ರ ಸುತ್ತು.
ಬಿ. ಧೀರಜ್‌, ತರುಣ್‌ದೀಪ್‌ ರಾಯ್‌, ಪ್ರವೀಣ್‌ ಜಾಧವ್‌.
ದೀಪಿಕಾ ಕುಮಾರಿ, ಅಂಕಿತಾ ಭಕತ್‌, ಭಜನ್‌ ಕೌರ್‌.
ಸಮಯ: ಅ. 3.30
ಪುರುಷರ ಹಾಗೂ ವನಿತೆಯರ ವೈಯಕ್ತಿಕ 32ರ ಸುತ್ತು.
ಸಮಯ: ಸಂಜೆ 4.15

 ಹಾಕಿ: ಭಾರತ-ಐರ್ಲೆಂಡ್‌
ಸಮಯ: ಸಂಜೆ 4.45

Advertisement

Udayavani is now on Telegram. Click here to join our channel and stay updated with the latest news.

Next