Advertisement

Paris Olympics; ಅರ್ಶದ್‌ ಕೂಡಾ ನನ್ನ ಮಗ..; ಮನ ಗೆದ್ದ ನೀರಜ್‌ ಚೋಪ್ರಾ ತಾಯಿ

12:10 PM Aug 09, 2024 | Team Udayavani |

ಪ್ಯಾರಿಸ್:‌ ಪ್ಯಾರಿಸ್‌ ಒಲಿಂಪಿಕ್ಸ್‌ 2024ರ (Paris Olympics 2024) ಜಾವೆಲಿನ್‌ ಥ್ರೋ (Javelin Throw) ಸ್ಪರ್ಧೆಯಲ್ಲಿ ಪಾಕಿಸ್ತಾನದ ಅರ್ಶದ್‌ ನದೀಂ (Arshad Nadeem) ಒಲಿಂಪಿಕ್‌ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್‌ ಚೋಪ್ರಾ (Neeraj Chopra) ಅವರು ಬೆಳ್ಳಿ ಗೆದ್ದಿದ್ದಾರೆ.

Advertisement

ಅರ್ಶದ್‌ ನದೀಂ ಅವರು 92.77 ಮೀಟರ್‌ ಜಾವೆಲಿನ್‌ ಎಸೆದು ದಾಖಲೆ ನಿರ್ಮಿಸಿದರು. ಕೇವಲ ಒಲಿಂಪಿಕ್‌ ದಾಖಲೆ ಮುರಿದಿದ್ದು ಮಾತ್ರವಲ್ಲದೆ, ಸಾರ್ವಕಾಲಿಕ ಜಾವೆಲಿನ್‌ ಎಸೆತದಲ್ಲಿ ಆರನೇ ಸ್ಥಾನಕ್ಕೇರಿದರು.

ಅರ್ಹತಾ ಸುತ್ತಿನಲ್ಲಿ ಮೊದಲ ಎಸೆತದಲ್ಲೇ ಭರ್ಜರಿ ಪ್ರದರ್ಶನ ನೀಡಿದ್ದ ನೀರಜ್‌, ಫೈನಲ್‌ ನಲ್ಲಿ ಕಷ್ಟಪಟ್ಟರು. ಆರು ಅವಕಾಶಗಳಲ್ಲಿ ನೀರಜ್‌ ಐದು ಬಾರಿ ಫೌಲ್‌ ಆದರು. ಎರಡನೇ ಪ್ರಯತ್ನದಲ್ಲಿ ಅವರು 89.45 ಮೀಟರ್‌ ದೂರ ಈಟಿ ಎಸೆದರು. ಗ್ರೆನೆಡಾದ ಆಂಡರ್ಸನ್‌ ಪೀಟರ್ಸ್‌ ಅವರು 88.54 ಮೀಟರ್‌ ಎಸೆದು ಮೂರನೇ ಸ್ಥಾನಕ್ಕೇರಿದರು.

ಪಂದ್ಯದ ಬಳಿಕ ಮಾತನಾಡಿದ ನೀರಜ್‌ ಚೋಪ್ರಾ ತಾಯಿ ಸರೋಜ್‌ ದೇವಿ ಭಾರತ ಮಾತ್ರವಲ್ಲದೆ ಪಾಕಿಸ್ತಾನದ ಅಭಿಮಾನಿಗಳ ಪ್ರೀತಿ ಪಡೆದರು.

Advertisement

“ನಾವು ಬೆಳ್ಳಿಯಿಂದ ಸಂತೋಷವಾಗಿದ್ದೇವೆ, ಚಿನ್ನ ಪಡೆದ ಅರ್ಶದ್ ನದೀಂ ಕೂಡಾ ನನ್ನ ಮಗ” ಎಂದು ಸರೋಜ್ ದೇವಿ ಹೇಳಿದರು.

ನೀರಜ್ ಅವರ ತಾಯಿಯ ಮಾತುಗಳನ್ನು ಭಾರತ ಮತ್ತು ಪಾಕಿಸ್ತಾನಿ ಅಭಿಮಾನಿಗಳು ಅವರ ಪ್ರೀತಿ ಮತ್ತು ಕ್ರೀಡಾ ಮನೋಭಾವಕ್ಕಾಗಿ ವ್ಯಾಪಕವಾಗಿ ಹೊಗಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ನೀರಜ್‌ ಚೋಪ್ರಾ ಇಂದು ದೇವರ ಆಶೀರ್ವಾದ ಅರ್ಶದ್‌ ಮೇಲಿತ್ತು ಎಂದರು.

“ಅವರು ಅತ್ಯುತ್ತಮವಾಗಿ ಎಸೆದರು. ಕ್ರೀಡೆಯಲ್ಲಿ ಕೆಲವೊಮ್ಮೆ ನಿಮ್ಮ ದಿನ, ಕೆಲವೊಮ್ಮೆ ಬೇರೆಯವರ ದಿನವಿರುತ್ತದೆ. ಬಹುಶಃ ದೇವರ ಆಶೀರ್ವಾದವು ಇಂದು ಅರ್ಶದ್‌ ಗೆ ಹೆಚ್ಚಿತ್ತು. ನಾನು ನನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡಿದ್ದೇನೆ, ನಾನು ಎಸೆಯಲು ನಿರ್ವಹಿಸಿದ ದೂರದಿಂದ ನನಗೆ ಸಂತೋಷವಾಗಿದೆ” ಎಂದು ನೀರಜ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next