Advertisement
ಶುಕ್ರವಾರ ನಡೆದ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಮಿಶ್ರ ತಂಡ ಅಮೆರಿಕ ವಿರುದ್ಧ ಸೋತು ಪದಕವನ್ನು ತಪ್ಪಿಸಿಕೊಂಡಿತು. ಶುಕ್ರವಾರ ಸತತ 2 ಪಂದ್ಯಗಳನ್ನು ಗೆದ್ದ ಭಾರತ ತಂಡ, ಬಳಿಕ ಸತತ 2 ಪಂದ್ಯ ಸೋಲುವ ಮೂಲಕ ಪದಕ ವಂಚಿತವಾಯಿತು.
Related Articles
ಬಿಲ್ಗಾರಿಕೆಯಲ್ಲಿ ಭಾರತದ ಈವರೆಗಿನ ಗರಿಷ್ಠ ಸಾಧನೆ ಕ್ವಾರ್ಟರ್ ಫೈನಲ್ ಆಗಿತ್ತು. 5 ಒಲಿಂಪಿಕ್ಸ್‌ನಲ್ಲಿ ಭಾರತ ಕ್ವಾರ್ಟರ್ ಫೈನಲ್‌ನಲ್ಲಿ ತನ್ನ ಅಭಿಯಾನವನ್ನು ಅಂತ್ಯಗೊಳಿಸಿತ್ತು.
Advertisement
ಪ್ಯಾರಿಸ್ ಒಲಿಂಪಿಕ್ಸ್ ಅರ್ಹತೆ ಸಂಪಾದಿಸಿದ್ದ ಭಾರತದ ಏಕೈಕ ರೋವರ್ ಬಲ್ರಾಜ್ ಪನ್ವರ್ ಅಂತಿಮವಾಗಿ 23ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. ಶುಕ್ರವಾರ ನಡೆದ “ಡಿ’ ಸುತ್ತಿನ ಫೈನಲ್‌ನಲ್ಲಿ ಬಲ್ರಾಜ್ 5ನೇ ಸ್ಥಾನಿಯಾದರು. ಅವರು 7:02.37 ಸೆಕೆಂಡ್‌ಗಳಲ್ಲಿ ದೂರವನ್ನು ಕ್ರಮಿಸಿದರು. ಇದು ಪ್ಯಾರಿಸ್ ಒಲಿಂಪಿಕ್ಸ್ ನಲ್ಲೇ ಬಲ್ರಾಜ್ ಅವರ ಅತ್ಯುತ್ತಮ ಸಾಧನೆಯಾಗಿತ್ತು. ಆದರೆ ಇದು ಪದಕ ಸುತ್ತು ಆಗಿರಲಿಲ್ಲ. ಗುರುವಾರವಷ್ಟೇ ಅವರು ಕ್ವಾರ್ಟರ್ ಫೈನಲ್ಸ್ ಹೀಟ್ ರೇಸ್‌ನಲ್ಲಿ 5ನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದ್ದರು. ರವಿವಾರದ ರೆಪಿಶೇಜ್ ಸುತ್ತಿನಲ್ಲಿ ದ್ವಿತೀಯ ಸ್ಥಾನಿ ಆಗುವುದರೊಂದಿಗೆ ಕ್ವಾರ್ಟರ್ ಫೈನಲ್ಸ್‌ಗೆ ಬಂದಿದ್ದರು.ಫೈನಲ್ “ಎ’ ಸುತ್ತಿನಲ್ಲಿ ಮೊದಲ 3 ಸ್ಥಾನ ಪಡೆದವರಿಗೆ ಪದಕ ಒಲಿಯಲಿದೆ. ಜೂಡೋ: ಮಾನ್ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯ
ತೂಲಿಕಾ ಮಾನ್ ಅವರ ಪ್ಯಾರಿಸ್ ಒಲಿಂಪಿಕ್ಸ್ ಜೂಡೋ ಸವಾಲು ಮೊದಲ ಸುತ್ತಿನಲ್ಲೇ ಅಂತ್ಯಗೊಂಡಿದೆ. +78 ಕೆಜಿ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿದ್ದ ಮಾನ್, ಲಂಡನ್ ಗೇಮ್ಸ್ ಚಾಂಪಿಯನ್ ಆಗಿರುವ ಕ್ಯೂಬಾದ ಇದಾಲಿಸ್ ಒರ್ಟಿಝ್ ವಿರುದ್ಧ 0-10 ಅಂತರದಿಂದ ಸೋತುಹೋದರು. 2022ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ, ದಿಲ್ಲಿಯ ಜೂಡೋಪಟು ತೂಲಿಕಾ ಮಾನ್ ಕ್ಯೂಬಾ ಎದುರಾಳಿ ವಿರುದ್ಧ ಯಾವುದೇ ಚಮತ್ಕಾರ ತೋರದಾದರು. ಕೇವಲ 28 ಸೆಕೆಂಡ್‌ಗಳಲ್ಲಿ ಇದಾಲಿಸ್ ಒರ್ಟಿಝ್ ಭಾರತೀಯಳನ್ನು ಕೆಡವಿದರು. ಇದಾಲಿಸ್ ಈಗಾಗಲೇ ಒಲಿಂಪಿಕ್ಸ್‌ನಲ್ಲಿ 4 ಪದಕ ಗೆದ್ದಿದ್ದಾರೆ. 26ನೇ ಸ್ಥಾನ ಪಡೆದ ಅಂಜೀತ್
ಒಲಿಂಪಿಕ್ಸ್ ಶೂಟಿಂಗ್‌ನ ಪುರುಷರ ಸ್ಕೀಟ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಅಂಜೀತ್ ಸಿಂಗ್ ನರುಕ, ಮೊದಲ ಅರ್ಹತಾ ಸುತ್ತಿನಲ್ಲಿ 26ನೇ ಸ್ಥಾನ ಪಡೆದಿದ್ದಾರೆ. ಈ ವಿಭಾಗದಲ್ಲಿ ಅಮೆರಿಕದ ವಿನ್ಸೆಂಟ್ ಹಾಂಕಾಕ್, ಕಾನರ್ ಲಿನ್ ಪ್ರಿನ್ಸ್ ಮತ್ತು ಚೈನೀಸ್ ತೈಪೆಯ ಲೀ ಮೆಂಗ್ ಯುವಾನ್ ಕ್ರಮವಾಗಿ ಅಗ್ರ 3 ಸ್ಥಾನಗಳನ್ನು ಪಡೆದರು. ಶನಿವಾರ ನಡೆಯುವ 2ನೇ ದಿನದ ಅರ್ಹತಾ ಸ್ಪರ್ಧೆಯಲ್ಲಿ ಅಂಜೀತ್ ಸ್ಪರ್ಧಿಸಲಿದ್ದಾರೆ.