Advertisement
1.4 ಅಂಕ ಕಡಿಮೆಯಾಗಿ ಕಂಚು ಕೈಚೆಲ್ಲಿದ ಅರ್ಜುನ್ ಬಬುತಪ್ಯಾರಿಸ್ ಒಲಿಂಪಿಕ್ಸ್ ಆರಂಭದಲ್ಲಿ ಶೂಟರ್ ಅರ್ಜುನ್ ಬಬುತ ಪದಕದಾಸೆ ಮೂಡಿಸಿದ್ದರು. ಪುರುಷರ 10 ಮೀ. ಏರ್ ರೈಫಲ್‌ನಲ್ಲಿ ಫೈನಲ್‌ಗೇರಿದ್ದ ಅವರ ಬಗ್ಗೆ ಪದಕ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಅಂತಿಮವಾಗಿ 208.4 ಅಂಕ ಗಳಿಸಿದ 25 ವರ್ಷದ ಅರ್ಜುನ್, 4ನೇ ಸ್ಥಾನ ಗಳಿಸಿ ನಿರಾಸೆಗೀಡಾಗಿದ್ದರು. ಇನ್ನು ಕೇವಲ 1.4 ಅಂಕ ಗಳಿಸಿದ್ದರೆ ಅರ್ಜುನ್ ತೃತೀಯ ಸ್ಥಾನಿಯಾಗಿ ಕಂಚಿನ ಪದಕಕ್ಕೆ ಮುತ್ತಿಕ್ಕಬಹುದಿತ್ತು. ಆದರೆ ಫೈನಲ್‌ನಲ್ಲಿ 209.4 ಅಂಕ ಗಳಿಸಿದ ಕ್ರೊವೇಶಿಯಾದ ಮಾರಿಸಿಸ್‌ಗೆ ಕಂಚು ಒಲಿಯಿತು. ಇತ್ತ ನಿರೀಕ್ಷೆ ಯಲ್ಲಿದ್ದ ಭಾರತೀಯರು ನಿರಾಸೆ ಅನುಭವಿಸುವಂತಾಯಿತು.
Related Articles
Advertisement
ಐತಿಹಾಸಿಕ ಸಾಧನೆ ತಪ್ಪಿಸಿಕೊಂಡ ಶೂಟರ್ ಭಾಕರ್ಮಹಿಳೆಯರ ವೈಯಕ್ತಿಕ ವಿಭಾಗದ 10 ಮೀ. ಏರ್ ಪಿಸ್ತೂಲ್ ಮತ್ತು ಸರಬೊjàತ್ ಸಿಂಗ್ ಜತೆ ಸೇರಿ 10 ಮೀ. ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 2 ಕಂಚಿನ ಪದಕಗಳನ್ನು ಗೆದ್ದಿದ್ದ ಮನು ಭಾಕರ್‌ಗೆ ಮತ್ತೂಂದು ಕಂಚು ಗೆಲ್ಲುವ ಅವಕಾಶವಿತ್ತು. ಆದರೆ ಮಹಿಳೆಯರ 25 ಮೀ. ಪಿಸ್ತೂಲ್ ವಿಭಾಗದಲ್ಲಿ ಫೈನಲ್‌ಗೇರಿದ್ದ ಭಾಕರ್, ಕಂಚು ಗೆಲ್ಲುವಲ್ಲಿ ವಿಫಲರಾದರು. 28 ಅಂಕ ಗಳಿಸಿ 4ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 31 ಅಂಕ ಗಳಿಸಿದ ಹಂಗೆರಿಯ ವೆರೋನಿಕಾಗೆ ಕಂಚು ಲಭಿಸಿತು. ಭಾಕರ್ ಈ ಪದಕ ಗೆದ್ದಿದ್ದರೆ ಒಂದೇ ಒಲಿಂಪಿಕ್ಸ್‌ನಲ್ಲಿ 3 ಪದಕಗಳನ್ನು ಗೆದ್ದ ಭಾರತದ ಮೊದಲ ಆ್ಯತ್ಲೀಟ್ ಆಗುತ್ತಿದ್ದರು. 1 ಅಂಕದಿಂದ ಶೂಟಿಂಗ್‌ನ ಮತ್ತೂಂದು ಪದಕ ಜಸ್ಟ್ ಮಿಸ್!
ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಭಾರತದ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ 3 ಕಂಚಿನ ಪದಕಗಳು ಕೈತಪ್ಪಿ ಹೋಗಿವೆ. ಅದೂ ಕೂಡ ಗೆಲುವಿಗೆ ಒಂದು ಹೆಜ್ಜೆ ಬಾಕಿಯಿರುವಾಗ ಪದಕ ಕೈಜಾರಿರುವುದು ವಿಪರ್ಯಾಸ. ಈ ಸೋಲಿನ ಸಾಲಿಗೆ ಶೂಟಿಂಗ್ ಸ್ಕೀಟ್ ಮಿಶ್ರ ತಂಡ ವಿಭಾಗದಲ್ಲಿ ಮಹೇಶ್ವರಿ ಚೌಹಾಣ್, ಅನಂತ್‌ಜೀತ್ ನರುಕ ಕಳೆದುಕೊಂಡ ಕಂಚೂ ಸೇರಿದೆ. ಆರಂಭದಲ್ಲಿ ಅಗ್ರ 3ರೊಳಗೆ ಸ್ಥಾನ ಕಾಯ್ದುಕೊಂಡಿದ್ದ ಭಾರತ ಜೋಡಿ ಅಂತಿಮವಾಗಿ 43 ಅಂಕ ಗಳಿಸಿ ನಾಲ್ಕನೇ ಸ್ಥಾನಕ್ಕೇ ಜಾರಿತು. ಮಹೇಶ್ವರಿ-ಅನಂತ್‌ಜೀತ್‌ಗಿಂತ 1 ಹೆಚ್ಚಿಗೆ ಅಂಕ, ಅಂದರೆ 44 ಅಂಕ ಗಳಿಸಿದ ಚೀನ ಜೋಡಿ ಕಂಚು ಜಯಿಸಿತು. ಇದ್ದರೂ ನಿರಾಸೆ ಮೂಡಿಸಿದ ಲಕ್ಷ್ಯ ಸೇನ್
ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಕೂಟದಿಂದ ಹೊರ ಬಿದ್ದ ಬಳಿಕ ಭಾರತಕ್ಕೆ ಪದಕದ ಆಸೆ ಮೂಡಿಸಿದ್ದವರೆಂದರೆ ಅದು 22 ವರ್ಷದ ಲಕ್ಷ್ಯ ಸೇನ್. ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆಕ್ಸೆಲ್‌ಸನ್ ವಿರುದ್ಧ 22-20, 21-14 ಅಂತರದಿಂದ ಸೋತರೂ ಕೂಡ ಅವರು ಕಂಚು ಗೆಲ್ಲುವ ಭರವಸೆ ಮೂಡಿಸಿದ್ದರು. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಮಲೇಷ್ಯಾದ ಲೀ ಜೀ ಜಿಯಾ ವಿರುದ್ಧ ಲಕ್ಷ್ಯಆರಂಭಿಕ ಸೆಟ್ ಅನ್ನು 13-21ರಿಂದ ಗೆದ್ದರು. ಆದರೆ ಎರಡನೇ ಸೆಟ್‌ನಲ್ಲಿ ಆರಂಭಿಕ ಮುನ್ನಡೆ ಸಾಧಿಸಿದ್ದರೂ ಕೂಡ ಅಂತಿಮವಾಗಿ 21-16ರಿಂದ ಸೋತು ಆಘಾತ ಮೂಡಿಸಿದರು. ವೇಟ್‌ಲಿಫ್ಟರ್ ಮೀರಾಗೆ 1 ಕೆ.ಜಿ.ಯಿಂದ ಕೈಜಾರಿದ ಕಂಚು
ಕಳೆದ ಟೋಕಿಯೊ ಒಲಿಂಪಿಕ್ಸ್‌ನ ವೇಟ್ ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಬೆಳ್ಳಿಯ ಮೆರಗು ತಂದಿದ್ದ ಮೀರಾಬಾಯಿ ಚಾನು ಕೂಡ ಈ ಒಲಿಂಪಿಕ್ಸ್‌ನಲ್ಲಿ ಪದಕ ತರುವ ನಿರೀಕ್ಷೆಯಿತ್ತು. ಆದರೆ ಕಂಚಿನ ಪದಕಕ್ಕೆ ಸನಿಹ ತೆರಳಿದ್ದ ಮೀರಾಬಾಯಿ, ಕೇವಲ 1 ಕೆಜಿ ಕಡಿಮೆ ಭಾರ ಎತ್ತಿ ಪದಕ ಕೈತಪ್ಪಿಸಿಕೊಂಡರು. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೀರಾ, ಸ್ನ್ಯಾಚ್ 88 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜರ್ಕ್ 111 ಕೆಜಿ ಸೇರಿ ಒಟ್ಟು 199 ಕೆಜಿ ಭಾರ ಎತ್ತಿ 4ನೇ ಸ್ಥಾನ ಪಡೆದರು. ಈ ವಿಭಾಗದಲ್ಲಿ ಒಟ್ಟು 200 ಕೆಜಿ ತೂಕ ಎತ್ತಿದ ಥಾಯ್ಲೆಂಡ್‌ನ ಸುರೋಚನಾ ಕಾಂಬಾವೊ ಕಂಚು ತನ್ನದಾಗಿಸಿಕೊಂಡರು.