ನವದೆಹಲಿ: ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ಆಪ್ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ಆ ಮೂಲಕ ಪ್ರೀತಿಯ ವಿಚಾರವಾಗಿ ಹಬ್ಬುತ್ತಿದ್ದ ವದಂತಿಗೆ ತೆರೆಬಿದ್ದಿದೆ.
ಕಳೆದ ಕೆಲ ಸಮಯದಿಂದ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಪ್ ಸಂಸದ ರಾಘವ್ ಚಡ್ಡಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ. ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಗಾಸಿಪ್ ಬಿಟೌನ್ ನಲ್ಲಿ ಹರಿದಾಡುತ್ತಿತ್ತು. ಇಬ್ಬರು ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಪ್ರೀತಿಯ ವಿಚಾರದಲ್ಲಿ ಯಾರೂ ಕೂಡ ಪ್ರತಿಕ್ರಿಯೆ ನೀಡದೆ, ಗೌಪ್ಯವಾಗಿದ್ದರು. ಇದೀಗ ಶನಿವಾರ (ಮೇ.13 ರಂದು) ಎಂಗೇಜ್ ಮೆಂಟ್ ಆಗುವ ಮೂಲಕ ಹರಿದಾಡುತ್ತಿದ್ದ ಗಾಸಿಪ್ ಗಳಿಗೆ ಕೊನೆ ಎಳೆದಿದ್ದಾರೆ.
ನವದೆಹಲಿಯ ಕಪುರ್ತಲಾ ಹೌಸ್ ನಲ್ಲಿ ಎರಡು ಕುಟುಂಬಗಳ ಸಮ್ಮುಖದಲ್ಲಿ ಎಂಗೇಜ್ ಮೆಂಟ್ ನೆರವೇರಿದ್ದು, ಉಂಗುರ ಬದಲಾಯಿಸಿಕೊಂಡು ತಮ್ಮ ನಿಶ್ಚಿತಾರ್ಥದ ಫೋಟೋಗಳನ್ನು ಇಬ್ಬರೂ ಹಂಚಿಕೊಂಡಿದ್ದಾರೆ.
“Everything I prayed for .. She said yes! ಎಂದು ರಾಘವ್ ಚಡ್ಡಾ ಫೋಟೋ ಹಂಚಿಕೊಂಡು ಬರೆದಿದ್ದಾರೆ. ಇನ್ನು ನಟಿ ಪರಿಣಿತಿ ಚೋಪ್ರಾ “Everything I prayed for .. I said yes! ಎಂದು ಬರೆದುಕೊಂಡು ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Related Articles
ಆತ್ಮೀಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ತನ್ನ ನೆಚ್ಚಿನ ನಟಿಗೆ ಶುಭಾಶಯವನ್ನು ಕೋರಿದ್ದಾರೆ.