Advertisement

ಗೋವಾ ಉಪ ಚುನಾವಣೆ ನಂತರ ಪರಿಕ್ಕರ್‌ ಭೇಟಿ

07:50 AM Aug 16, 2017 | Team Udayavani |

ಹುಬ್ಬಳ್ಳಿ: ಗೋವಾ ಉಪ ಚುನಾವಣೆ ನಂತರ ಪಕ್ಷದ ರಾಜ್ಯ ಮುಖಂಡರ ನಿಯೋಗ ಗೋವಾ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮಹದಾಯಿ ವಿವಾದ ಬಗೆಹರಿಸುವ ದಿಸೆಯಲ್ಲಿ ಚರ್ಚಿಸಲಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ
ಶೆಟ್ಟರ್‌ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಆ.28ರಂದು ಗೋವಾದಲ್ಲಿ ಉಪ ಚುನಾವಣೆಯಿದೆ. ಅದು ಮುಗಿದ ನಂತರ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಪಕ್ಷದ ಮುಖಂಡರು ಗೋವಾಕ್ಕೆ ಹೋಗಲಿದ್ದೇವೆ ಎಂದರು. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸೋಮವಾರ ಸರ್ವಪಕ್ಷಗಳ ಸಭೆ ನಡೆದಿದೆ. ಮಹದಾಯಿ ವಿಷಯದಲ್ಲಿ ಗೋವಾ ರಾಜ್ಯದ ಪ್ರತಿಪಕ್ಷಗಳ ಮುಖಂಡರ ಮನವೊಲಿಸಲು ಸಿಎಂ ಸಿದ್ದರಾಮಯ್ಯ ಒಪ್ಪಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಪ್ರಯತ್ನಿಸಲಿವೆ.

ಗೋವಾದಲ್ಲಿನ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರು ಕರ್ನಾಟಕದ ಸ್ಥಿತಿಯನ್ನು ಗಮನಿಸಿ ಪರಸ್ಪರ ಸಹಕರಿಸಿದರೆ
ವಿವಾದ ಇತ್ಯರ್ಥಗೊಳ್ಳಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next