Advertisement

PARIHAR: ಪರಿಹಾರ್‌ನಲ್ಲಿ ಕೌಟುಂಬಿಕ ಕಲಹಗಳಿಗೆ ನೆರವು

12:33 PM May 15, 2023 | Team Udayavani |

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಲಹಗಳಿಗೆ ಸಂಬಂಧಿಸಿದ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಮಾನಸಿಕ ಕಿರುಕುಳ, ಮದ್ಯ ಸೇವನೆ, ಹೊಂದಾಣಿಕೆ ಇಲ್ಲದೇ ಗಂಡ ಮತ್ತು ಹೆಂಡತಿ ಬೇರ್ಪಟ್ಟಿರುವ ಪ್ರಕರಣಗಳೇ ಅಧಿಕ.

Advertisement

ಕೌಟುಂಬಿಕ ಕಲಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಕಳೆದ ವರ್ಷದಿಂದ(ಏಪ್ರಿಲ್‌ 2022- ಮಾರ್ಚ್‌ 2023) ಸುಮಾರು 1469 ಪ್ರಕರಣಗಳು ಪರಿಹಾರ ಕೇಂದ್ರದಲ್ಲಿ ದಾಖಲಾಗಿವೆ.  ಇದರಲ್ಲಿ 45 ವಿವಾಹ ಪೂರ್ವ ಸಮಸ್ಯೆಗಳ ಪ್ರಕರಣಗಳು, ಲೀವ್‌-ಇನ್‌ ಸಂಬಂಧ ಪ್ರಕರಣಗಳು, 594 ಕೌಟುಂಬಿಕ ಕಲಹ, 436 ಹೊಂದಾಣಿಕೆ ಇಲ್ಲದೇ ಬೇರ್ಪಟ್ಟ ಪ್ರಕರಣಗಳು, 180 ವಿವಾಹೇತರ ಸಂಬಂಧ, 69 ವರದಕ್ಷಿಣೆ ಕಿರುಕುಳ, 109 ಮಾದಕ ವಸ್ತುವಿನಿಂದ ಹಾಗೂ ಮಾನಸಿಕ ಹಿಂಸೆಯ ಪ್ರಕರಣಗಳು ಮತ್ತು 28 ಇನ್ನಿತರೆ ಪ್ರಕರಣಗಳು “ಪರಿಹಾರ’ ಕೇಂದ್ರದಲ್ಲಿ ದಾಖಲಾಗಿರುವುದು ವರದಿಯಲ್ಲಿ ಕಂಡು ಬಂದಿದೆ.

“ಪರಿಹಾರ್‌’ನಲ್ಲಿ ದಾಖಲಾಗಿರುವ ಹೆಚ್ಚು ಪ್ರಕರಣಗಳಲ್ಲಿ ಒಬ್ಬರಿಗೊಬ್ಬರು ಅಥೆìçಸಿಕೊಳ್ಳದೇ ಇರುವುದು, ಮದ್ಯಸೇವಿಸಿ ಹೆಂಡತಿ-ಮಕ್ಕಳನ್ನು ಹೊಡೆಯುವುದು, ಇಬ್ಬರಲ್ಲೂ ನಂಬಿಕೆ ಇಲ್ಲದಿರು ವುದು, ಸ್ವಾರ್ಥತೆಯುಳ್ಳ ಪ್ರಕರಣಗಳೇ ಅಧಿಕ. ಇಂತಹ ವೇಳೆ ಇಬ್ಬರಲ್ಲೂ ಹೊಂದಾಣಿಕೆ ಮೂಡಲು, ಇಗೋವನ್ನು ಕಡಿಮೆ ಮಾಡಲು ವನಿತಾ ಸಹಾಯ ವಾಣಿಯಿಂದ ನಾನಾ ರೀತಿಯ ಥೆರಪಿಗಳನ್ನು ನಡೆಸಲಾಗುತ್ತದೆ. ಆದರೂ ಕೆಲವೊಮ್ಮೆ ಪ್ರಯತ್ನಗಳು ವಿಫ‌ಲಾಗುತ್ತವೆ. ಇನ್ನೂ ಕೆಲವು ಪ್ರಕರಣಗಳಲ್ಲಿ ಗಂಡ, ಹೆಂಡತಿಗೆ ಷರತ್ತುಗಳನ್ನು ವಿಧಿಸಲಾಗುತ್ತದೆ. ಈ ಷರತ್ತುಗಳಿಗೆ ಹೆಂಡತಿ ಒಪ್ಪದ್ದಿದ್ದಾಗ, ಅವರಿಬ್ಬರನ್ನೂ ಕೂಡಿಸಲು ಸಾಧ್ಯವಾಗುವುದಿಲ್ಲ. ಈ ರೀತಿ ಪ್ರಕರಣಗಳೂ ಸಾಕಷ್ಟಿವೆ. ಈ ಎಲ್ಲವುಗಳ ಮಧ್ಯೆಯೂ ಪರಿಹಾರ್‌-ವನಿತಾ ಸಹಾಯವಾಣಿ ಬಹುತೇಕ ಜೋಡಿಗಳನ್ನು ಒಂದುಮಾಡುವಲ್ಲಿ ಯಶ ಕಂಡಿದೆ.

ಪರಿಹಾರ್‌ ಎಂಬ ಬಾಳ ದಾರಿ: ನಗರ ವಾಸಿಯಾದ ಹರೀಶ್‌(ಹೆಸರು ಬದಲಿಸಿದೆ) ಅವರು ಚಿಕ್ಕವಯಸ್ಸಿ ನಿಂದ ಅಜ್ಜ-ಅಜ್ಜಿ ಮನೆಯಲ್ಲಿ ಬೆಳೆದರು. ಬಾಲ್ಯ ದಿಂದಲೇ ಶ್ರೀಮಂತಿಕೆ ಕಂಡಿದ್ದ ಹರೀಶ್‌ 3ನೇ ತರಗತಿ ಯಲ್ಲಿರುವಾಗಲೇ ಕ್ರಿಕೆಟ್‌ ಬೆಟ್ಟಿಂಗ್‌ ಗೀಳು ಅಂಟಿಸಿ ಕೊಂಡರು. ಮುಂದೆ ಎಂಜಿನಿಯರಿಂಗ್‌ ಕೋರ್ಸ್‌ನ ಶುಲ್ಕವನ್ನು ಇದೇ ಕ್ರಿಕೆಟ್‌ ಬೆಟ್ಟಿಂಗ್‌ನಿಂದ ನಿಭಾಯಿಸಿದರು. ಫೇಲ್‌ ಆಗಿದ್ದರೂ ಮರುಪರೀಕ್ಷೆಯಲ್ಲಿ ಪಾಸ್‌ ಆದ ಹರೀಶ್‌ ಪ್ರತಿಷ್ಠಿತ ಕಂಪೆನಿ ಸೇರಿದರು.

ಈ ನಡುವೆ ಕೋವಿಡ್‌ ಪರಿಣಾಮ ವರ್ಕ್‌ ಫ್ರಂ ಹೋಮ್‌ ಸಮಯದಲ್ಲಿ ಆನ್‌ಲೈನ್‌ ಗೇಮಿಂಗ್‌ ಮತ್ತಷ್ಟು ಹೆಚ್ಚಿತು. ತಿಂಗಳಿಗೆ ಅಂದಾಜು 6ರಿಂದ 7 ಲಕ್ಷ ಸಂಪಾದಿಸುತ್ತಿದ್ದರು. ಈ ಮಧ್ಯೆ ಗ್ಯಾಮ್ಲಿಂಗ್‌ನಲ್ಲಿ ಹರೀಶ್‌ 70 ಲಕ್ಷ ರೂ. ಕಳೆದುಕೊಳ್ಳುತ್ತಾರೆ. ಅದಕ್ಕೆ ಬೇಸತ್ತ ಪತ್ನಿ ಮಕ್ಕಳ ಜತೆ ತವರು ಸೇರಿದ್ದಾಳೆ. ಇದ ರಿಂದ ಹರೀಶ್‌ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ. ಇದಕ್ಕಾಗಿ ಪತ್ನಿ ಪರಿಹಾರ-ವನಿತಾ ಸಹಾಯವಾಣಿ ಮೊರೆ ಹೋಗುತ್ತಾರೆ. ಗಂಡನನ್ನು ಕರೆಸಿ ಆಪ್ತಸಮಾ ಲೋಚನೆ ನಡೆಸಿದ್ದು, ವಿವಿಧ ಥೆರಪಿಗಳನ್ನು ಸೂಚಿಸ ಲಾಯಿತು. 6 ತಿಂಗಳ ಬಳಿಕ ಹರೀಶ್‌ಗೆ ತನ್ನ ತಪ್ಪಿನ ಅರಿವಾಗಿ ಗೀಳಿನಿಂದ ಹೊರ ಬಂದು ಒಂದಾಗಿದ್ದಾರೆ.

Advertisement

ಕೌಟುಂಬಿಕ ದೌರ್ಜನ್ಯ, ಮಾನಸಿಕ ಕಿರುಕುಳ, ಮದ್ಯ ಸೇವನೆಯ ಪ್ರಕರಣಗಳು ಹೆಚ್ಚಾಗಿ ಬರುತ್ತವೆ. ಆಪ್ತಸಮಾಲೋಚನೆ ವೇಳೆ ಇಬ್ಬರ ಸಮಸ್ಯೆಗಳನ್ನು ಗಮನವಿಟ್ಟು ಆಲಿಸಿ, ತಾಳ್ಮೆಯಿಂದ ಪರಿಹಾರ ನೀಡಲಾಗುತ್ತದೆ. ಕೆಲವೊಂದು ಪ್ರಕರಣ ತುಂಬಾ ಸವಾಲು ಆಗಿರುತ್ತವೆ. 30 ವರ್ಷಗಳ ಅನುಭವದಲ್ಲಿ ದೂರವಾಗಿದ್ದ ದಂಪತಿಗಳನ್ನು ಒಂದು ಮಾಡಿದ ಪ್ರಕರಣಗಳೇ ಹೆಚ್ಚು. ಇದರಿಂದ ನನಗೆ ಸಂತಸ ತಂದಿದೆ. -ರಾಣಿಶೆಟ್ಟಿ, ಪರಿಹಾರ್‌-ವನಿತಾ ಸಹಾಯವಾಣಿ ಮುಖ್ಯಸ್ಥೆ

-ಭಾರತಿ ಸಜ್ಜನ್‌

Advertisement

Udayavani is now on Telegram. Click here to join our channel and stay updated with the latest news.

Next