Advertisement

ಬಿಜೆಪಿ V/s ಕಾಂಗ್ರೆಸ್: ಪರೇಶ್ ಮೇಸ್ತ್ ಸಾವು ಆಕಸ್ಮಿಕ: ಹೊನ್ನಾವರ ಕೋರ್ಟ್ ಗೆ ಸಿಬಿಐ ವರದಿ

03:05 PM Oct 04, 2022 | Team Udayavani |

ಕುಮಟಾ/ಭಟ್ಕಳ: ಹೊನ್ನಾವರದಲ್ಲಿ 2017ರಲ್ಲಿ ಸಂಭವಿಸಿದ್ದ ಪರೇಶ ಮೇಸ್ತನ ಸಾವು ಹತ್ಯೆಯಲ್ಲ,  ಆಕಸ್ಮಿಕ ಸಾವು ಎಂದು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದೆ ಎನ್ನಲಾಗಿದೆ.

Advertisement

ಇದನ್ನೂ ಓದಿ:ಅ. 17ಕ್ಕೆ ಸಿಇಟಿ ಮೊದಲ ಸುತ್ತಿನ ಸೀಟು ಹಂಚಿಕೆ ಫ‌ಲಿತಾಂಶ : ವೇಳಾಪಟ್ಟಿ ವಿವರ ಇಲ್ಲಿದೆ

ಉತ್ತರ ಕನ್ನಡ ಜಿಲ್ಲೆ ಸಹಿತ ರಾಜ್ಯದಲ್ಲಿ ಭಾರೀ ಸುದ್ದಿ ಮಾಡಿದ್ದು, ಗಲಭೆಗೂ ಕಾರಣವಾಗಿದ್ದ ಈ ಪ್ರಕರಣದಲ್ಲಿ ಪರೇಶ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಇದು ಅಸಹಜ ಸಾವಲ್ಲ, ಕೊಲೆ ಎಂದು ಆತನ ಕುಟುಂಬ ಸದಸ್ಯರು ಆರೋಪಿಸಿದ್ದರು.

ಬಿಜೆಪಿ  ಸಹಿತ ವಿವಿಧ ಸಂಘಟನೆಗಳು ಭಾರೀ ಪ್ರತಿಭಟನೆಯನ್ನೂ ನಡೆಸಿದ್ದವು. ಕೊನೆಗೆ ಒತ್ತಡಕ್ಕೆ ಮಣಿದ ಅಂದಿನ ಕಾಂಗ್ರೆಸ್‌ ಸರ್ಕಾರ ಸಿಬಿಐ ತನಿಖೆಗೆ ವಹಿಸಿತ್ತು. ಕಳೆದ ಐದು ವರ್ಷಗಳ ಕಾಲ ಸಾಕ್ಷ್ಯಾಧಾರ ಸಂಗ್ರಹ, ಸಾಕ್ಷಿಗಳ ವಿಚಾರಣೆ ನಡೆಸಿದ ಬಳಿಕ ಸಿಬಿಐ ತನಿಖಾ ವರದಿ ಸಿದ್ದಪಡಿಸಿ ಕೋರ್ಟ್‌ಗೆ ಸಲ್ಲಿಸಿದ್ದು, ಅದರಲ್ಲಿನ ಅಂಶಗಳು ಇನ್ನಷ್ಟೇ ಖಚಿತವಾಗಬೇಕಿದೆ. ವಿಚಾರಣೆಯನ್ನು ನ.16ಕ್ಕೆ ಮುಂದೂಡಲಾಗಿದೆ.

ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಪರೇಶ್ ಮೇಸ್ತ (19ವರ್ಷ)ನ ಶವ ಡಿಸೆಂಬರ್ 8ರಂದು ದೊರಕಿದ್ದ ನಂತರ ಭಾರೀ ಘರ್ಷಣೆ ನಡೆದಿತ್ತು. ಈ ಘಟನೆಯಲ್ಲಿ ಝಮಾಲ್ ಅಝಾದ್, ಅಶೀಫ್ ರಫೀಖ್, ಫೈಜಲ್, ಸಲೀಂ ಹಾಗೂ ಇಫ್ತಿಯಾಜ್ ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು.

Advertisement

ಪರೇಶ್ ಮೇಸ್ತ ಪ್ರಕರಣದ ಕುರಿತು ಸಿಬಿಐ ಹೊನ್ನಾವರ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಮತ್ತೊಂದೆಡೆ ಬಿಜೆಪಿ ಮುಖಂಡರು ಕೂಡಾ ತಿರುಗೇಟು ನೀಡಿದ್ದು, ವಾಕ್ಸಮರಕ್ಕೆ ಕಾರಣವಾಗಿದೆ.

ಹೊನ್ನಾವರದ ಪರೇಶ್‌ ಮೇಸ್ತನದ್ದು ಹತ್ಯೆ ಅಲ್ಲ. ಆಕಸ್ಮಿಕ ಸಾವು ಎಂದು ಸಿಬಿಐ ವರದಿ ನೀಡಿದೆ. ಇದು ಬಿಜೆಪಿ ಮುಖಕ್ಕೆ ಬಡಿದ ತಪರಾಕಿ. ಬಿಜೆಪಿಗೆ ಮಾನ-ಮರ್ಯಾದೆ ಇದ್ದರೆ ನಮ್ಮ ಮೇಲೆ ಮಾಡಿದ್ದ ಸುಳ್ಳು ಆರೋಪಕ್ಕಾಗಿ ಕ್ಷಮೆ ಕೋರಬೇಕು. ಬಿಜೆಪಿ ಗೆದ್ದಿರುವ ಪ್ರತಿಯೊಂದು ಸ್ಥಾನದ ಹಿಂದೆ ಪರೇಶ್‌ ಮೆಸ್ತನಂತಹ ಅಮಾಯಕ ಯುವಕರ ರಕ್ತ ಅಂಟಿಕೊಂಡಿದೆ.

*ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next