Advertisement
ಹೊಸದಿಲ್ಲಿ: ಅ.2ರ ನಂತರ ಇನ್ನು ಪಾರ್ಸೆಲ್ ಊಟ ತರಿಸಬೇಕಾದರೆ ದುಪ್ಪಟ್ಟು ದರ ಪಾವತಿಸಬೇಕಾಗಬಹುದು. ಅಥವಾ ಆಹಾರಕ್ಕಿಂತಲೂ ಪಾರ್ಸೆಲ್‌ಗೆ ಹೆಚ್ಚಿನ ದರ ಇರಬಹುದು. ಇದಕ್ಕೆ ಕಾರಣ ಏನೆಂದರೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧ. ದೇಶಾದ್ಯಂತ ಏಕಬಳಕೆಯ ಪ್ಲಾಸ್ಟಿಕ್ ವಿರುದ್ಧ ಸಂಪೂರ್ಣ ನಿಷೇಧ ಜಾರಿಗೊಳ್ಳಲಿದ್ದು, ಇದರಿಂದ ಇನ್ನು ಪಾರ್ಸೆಲ್ ಆಹಾರ ದುಬಾರಿಯಾಗಲಿದೆ.
Related Articles
ಈಗಿರುವ ವ್ಯವಸ್ಥೆಯಲ್ಲಿ ಪ್ಲಾಸ್ಟಿಕ್ ಹೊರತಾದ ಆಹಾರ ಪಾರ್ಸೆಲ್‌ಗೆ ಖರ್ಚು ಮೂರುಪಟ್ಟಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರೆಸ್ಟೋರೆಂಟ್‌ಗಳು ಪಾರ್ಸೆಲ್‌ಗೆ ಹೆಚ್ಚುವರಿ ದರವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ. ಆದ್ದರಿಂದ ಸದ್ಯ ಪಾರ್ಸೆಲ್‌ನಲ್ಲಿ ನೀಡುವುದನ್ನು ಅವುಗಳು ಬಂದ್ ಮಾಡುವ ಸಾಧ್ಯತೆ ಇದೆ. ಗ್ರಾಹಕರೇ ಪಾತ್ರೆಗಳನ್ನು ತೆಗೆದುಕೊಂಡು ಹೋದರೆ ಮಾತ್ರ ಅವುಗಳು ಪಾರ್ಸೆಲ್ ಕೊಡುವ ಸಾಧ್ಯತೆ ಇದೆ.
Advertisement
ಪರ್ಯಾಯವೇನು? ಸದ್ಯ ಕಂಪೆನಿಗಳು ಆಹಾರವನ್ನು ಬಿದಿರಿನಿಂದ ಮಾಡಿದ ವಸ್ತುಗಳು, ಪೇಪರ್, ಗಾಜಿನ ಪಾತ್ರೆ, ಹಾಳೆ ಪಾತ್ರೆ ಇತ್ಯಾದಿಗಳನ್ನು ಪೂರೈಸಬಹುದು. ಆದರೆ ಇದು ವೆಚ್ಚದಾಯಕ. ಜೈವಿಕ ಪ್ಲಾಸ್ಟಿಕ್ ಕೂಡ ದುಬಾರಿ. ಪ್ಲಾಸಿಕ್ ಆದಾಯಕ್ಕೆ ಬರೆ
ದೇಶಾದ್ಯಂತ ಪ್ಲಾಸ್ಟಿಕ್ ತಯಾರಿಕೆಯಿಂದ ವಾರ್ಷಿಕ 3.5 ಕೋಟಿ ರೂ. ಆದಾಯವಿದೆ. 2017-18ರಲ್ಲಿ ದಿನಕ್ಕೆ 26 ಸಾವಿರ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗಿತ್ತು. ಇವುಗಳಲ್ಲಿ ಶೇ.60ರಷ್ಟನ್ನು ಮರುಬಳಕೆ ಮಾಡಲಾಗಿತ್ತು.