ಕಾರ್ಕಳ: ಬೈಲೂರಿನಲ್ಲಿ ಜ.27ರಿಂದ 29ರ ತನಕ ನಡೆಯುವ ಪರಶುರಾಮನ ಕಂಚಿನ ಪ್ರತಿಮೆಯ ಥೀಂ ಪಾರ್ಕ್ ಲೋಕಾರ್ಪಣೆ ಹಲವು ವೈಶಿಷ್ಟ್ಯತೆಗಳಿಂದ ಕೂಡಿದೆ. ಸಾಮೂಹಿಕ ಶಂಖನಾದ, ಬೃಹತ್ ಕುಣಿತ ಭಜನೆ ಮೆರವಣಿಗೆ, ಮೈಸೂರು ದಸರಾ ಮಾದರಿಯಲ್ಲಿ ಪೊಲೀಸರಿಂದ ಪಂಜಿನ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ, ಆಹಾರ ಮೇಳ, ಕರಕುಶಲ ವಸ್ತು ಪ್ರದರ್ಶನ, ಅಮ್ಯೂಸ್‌ಮೆಂಟ್ ಗೇಮ್ಸ್ ಪಾರ್ಕ್ ಮೊದಲಾದ ಹಲವು ವೈಶಿಷ್ಟ್ಯತೆಗಳು ಉದ್ಘಾಟನೆ ಒಳಗೊಳ್ಳಲಿದೆ.
ಶಂಖನಾದದಿಂದ ಮೂರ್ತಿ ಲೋಕಾರ್ಪಣೆ
27ರಂದು ಮೂರ್ತಿಯ ಲೋಕಾರ್ಪಣೆ ನಡೆಯ ಲಿದೆ. ಸಂಜೆ 4ಕ್ಕೆ ನಡೆಯುವ ಕಾರ್ಯಕ್ರಮಕ್ಕೆ ಯಾವುದೇ ಗಣ್ಯರನ್ನು ಆಹ್ವಾನಿಸದೆ ಏಕಕಾಲದಲ್ಲಿ ಸಾರ್ವಜನಿಕರ ಸಾಮೂಹಿಕ ಶಂಖನಾದದೊಂದಿಗೆ ಮೂರ್ತಿಯ ಲೋಕಾರ್ಪಣೆ ನೆರವೇರಲಿದೆ. ಆ ಕ್ಷಣದಿಂದ ಪರಶುರಾಮ ಸಾರ್ವಜನಿಕರಿಗೆ ಪ್ರವೇಶಕ್ಕೆ ಮುಕ್ತವಾಗಲಿದೆ.
ಮಂದಿರ ಉದ್ಘಾಟನೆಗೆ ಕುಣಿತ ಭಜನೆ
ಜ. 28ರಂದು ಪಾರ್ಕ್‌ನಲ್ಲಿ ಭಜನ ಮಂದಿರದ ಉದ್ಘಾಟನೆ ನಡೆಯಲಿದೆ. ಸಂಜೆ 4ಕ್ಕೆ ಪಳ್ಳಿ ಕ್ರಾಸ್‌ನಿಂದ ಥೀಂ ಪಾರ್ಕ್ ವರೆಗೆ ಭಜನ ಮೆರವಣಿಗೆ ನಡೆಯಲಿದೆ. 250ಕ್ಕೂ ಅಧಿಕ ಭಜನ ತಂಡಗಳಿಂದ ಕುಣಿತ ಭಜನೆ ಮೆರವಣಿಗೆ, ಕೀರ್ತನೆಗಳು ನಡೆಯಲಿವೆ.
3 ದಿನ ಸಾಂಸ್ಕೃತಿಕ ಹಬ್ಬ
ಬೈಲೂರಿನ ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು 6ಕ್ಕೆ ನಿಗದಿತ ಸಮಯಕ್ಕೆ ಆರಂಭಗೊಳ್ಳಲಿದೆ. ಜ.27ರಂದು ಸಂಜೆ 6ಕ್ಕೆ ವಿಟuಲ ನಾಯಕ್ ಕಲ್ಲಡ್ಡ ತಂಡದಿಂದ ತುಳು ಹಾಸ್ಯ ಗಾನ ವೈಭವ, 7ರಿಂದ ಮಾನಸಿ ಸುಧೀರ್ ರವರಿಂದ ನಾರಸಿಂಹ ನೃತ್ಯ ರೂಪಕ, 8.30ಕ್ಕೆ ಚಂದನ್ ಶೆಟ್ಟಿ ಮತ್ತು ತಂಡದವರಿಂದ ಬಿಗ್‌ಬಾಸ್ ಖ್ಯಾತಿಯ ಪ್ರದೀಪ ಬಡೆಕ್ಕಿಲ ನಿರೂಪಣೆಯಲ್ಲಿ ಸಂಗೀತ ಸಂಜೆ, ಜ.28ರಂದು ಸಂಜೆ 6ಕ್ಕೆ ಅರ್ಚನಾ ಉಡುಪ ತಂಡದಿಂದ ಸುಗಮ ಸಂಗೀತ, 7ಕ್ಕೆ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಖ್ಯಾಸ ಹಾಸ್ಯ ತಂಡದಿಂದ ಹಾಸ್ಯ ಸಂಜೆ, 8ಕ್ಕೆ ಮೆಗಾ ಮ್ಯಾಜಿಕ್ ಸ್ಟಾರ್ ಕುದ್ರೋಳಿ ಗಣೇಶ್ ತಂಡದಿಂದ ತುಳುನಾಡ ಜಾದೂ, 9ಕ್ಕೆ ಬೀಟ್ ಗುರೂಸ್ ತಂಡದಿಂದ ಪ್ಯೂಷನ್ ಸಂಗೀತ ಸಂಜೆ ನಡೆಯಲಿದೆ. ಜ.29ರಂದು ಉಭಯ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಸತೀಶ್ ಪಟ್ಲ ಸಾರಥ್ಯದಲ್ಲಿ ಯಕ್ಷ-ಗಾನ- ವೈಭವ, 6ಕ್ಕೆ ಪ್ರಸನ್ನ ಬೈಲೂರು ಹಾಗೂ ಸುನಿಲ್ ನೆಲ್ಲಿಗುಡ್ಡೆ ತಂಡದಿಂದ ಗಮ್ಜಲ್ ಕಾಮಿಡಿ, 7ಕ್ಕೆ ಉಜಿರೆಯ ಎಸ್‌ಡಿಎಂಸಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾ ವೈಭವ, 8ರಿಂದ ಗುರುಕಿರಣ್ ಮತ್ತು ತಂಡದವರಿಂದ, ಖ್ಯಾತ ನಿರೂಪಕಿ ಅನುಶ್ರೀ ನಿರೂಪಣೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ.
Related Articles
ಜ.30ಕ್ಕೆ ಪೊಲೀಸ್ ಕವಾಯತು
ಜ.30ರಂದು ಸ್ವರಾಜ್ ಮೈದಾನದಲ್ಲಿ ಪೊಲೀಸರ ಪಂಜಿನ ಕವಾಯತು ನಡೆಯಲಿದೆ.