Advertisement

ಕಾರ್ಕಳ: ಇಂದು ಪರಶುರಾಮ ಪ್ರತಿಮೆ ಅನಾವರಣ

12:41 AM Jan 27, 2023 | Team Udayavani |

ಕಾರ್ಕಳ: ಬೈಲೂರು ಉಮಿಕ್ಕಳ ಬೆಟ್ಟವು ತುಳುನಾಡಿನ ಸೃಷ್ಟಿಕರ್ತ ಪರಶುರಾಮನ ಕಂಚಿನ ಪ್ರತಿಮೆ ಲೋಕಾರ್ಪಣೆಗೆ ಸಜ್ಜಾಗಿದೆ.

Advertisement

ಜ. 27ರಂದು ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಚಿವರಾದ ಎಸ್‌. ಅಂಗಾರ, ಆನಂದ್‌ ಸಿಂಗ್‌, ಕೋಟ ಶ್ರೀನಿವಾಸ ಪೂಜಾರಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೆ. ಜಯಪ್ರಕಾಶ್‌ ಹೆಗ್ಡೆ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಬಿ.ಎಂ. ಸುಕುಮಾರ ಶೆಟ್ಟಿ, ಮಂಜುನಾಥ್‌, ಎಸ್‌.ಎಲ್‌. ಭೋಜೇಗೌಡ, ಡಾ| ತೇಜಸ್ವಿನಿ ಗೌಡ, ಮಂಜುನಾಥ ಭಂಡಾರಿ, “ಕಾಂತಾರ’ ಖ್ಯಾತಿಯ ರಿಷಬ್‌ ಶೆಟ್ಟಿ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ, ದಿ ಮೈಸೂರು ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಣಿಲ ತಿಮ್ಮಪ್ಪ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌, ಬೈಲೂರು ಗ್ರಾ.ಪಂ. ಅಧ್ಯಕ್ಷ ಜಗದೀಶ್‌ ಪೂಜಾರಿ, ನೀರೆ ಗ್ರಾ.ಪಂ. ಅಧ್ಯಕ್ಷೆ ಶಾಲಿನಿ ರವೀಂದ್ರ ಸುವರ್ಣ, ಯರ್ಲಪಾಡಿ ಗ್ರಾ.ಪಂ. ಅಧ್ಯಕ್ಷ ಪ್ರಮೀಳಾ ಪೂಜಾರಿ ಮೊದಲಾದ ಗಣ್ಯರು ಉಪಸ್ಥಿತರಿರುವರು.

ಕುತೂಹಲಿಗರ ದಂಡು
ಬೆಟ್ಟ ಆಕರ್ಷಣೆಯ ಕೇಂದ್ರವಾಗಿ ಮಾರ್ಪಟ್ಟಿದ್ದು ವಿವಿಧೆಡೆಗಳಿಂದ ಪ್ರತಿಮೆ ನೋಡಲು ಜನ ಆಗಮಿಸುತ್ತಿ ದ್ದಾರೆ. ಮುಂದಿನ 3 ದಿನಗಳಲ್ಲಿ ಲಕ್ಷಾಂತರ ಮಂದಿ ಬೆಟ್ಟಕ್ಕೆ ಆಗಮಿಸುವ ನಿರೀಕ್ಷೆಯಿದೆ. ಬೈಲೂರು ಪರಿಸರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಪರಿಸರ ಸ್ನೇಹಿ ಶೌಚಾಲಯ ಇಂದು ಉದ್ಘಾಟನೆ
ಪರಶುರಾಮ ಥೀಂ ಪಾರ್ಕ್‌ನಲ್ಲಿ ಪರಿಸರ ಸ್ನೇಹಿ ಶೌಚಾಲಯವನ್ನು ಅಳ ವಡಿಸಲಾಗಿದ್ದು ಮುಖ್ಯಮಂತ್ರಿಗಳು ಜ. 27ರಂದು ಉದ್ಘಾಟಿಸಲಿದ್ದಾರೆ.

ಯಶಸ್ವೀ ರಂಗಪಯಣ
ಪ್ರತಿಮೆ ನಿರ್ಮಾಣಕ್ಕೆ ಪೂರಕವಾಗಿ ಕಾರ್ಕಳ ಯಕ್ಷ ರಂಗಾಯಣದ ಸಂಚಾರಿ ತಂಡದ ಕಲಾವಿದರು ಅಭಿನಯಿಸುವ, ಶಶಿರಾಜ್‌ ಕಾವೂರು ರಚಿಸಿದ, ಡಾ| ಜೀವನ್‌ ರಾಂ ಸುಳ್ಯ ನಿರ್ದೇಶಿಸಿದ “ಪರಶುರಾಮ’ ನಾಟಕ ರಾಜ್ಯಾದ್ಯಂತ ಪ್ರದರ್ಶನಗೊಳ್ಳುತ್ತಿದೆ. ಕಾರ್ಕಳ, ಸುಳ್ಯ, ಮಂಗಳೂರು, ತೀರ್ಥಹಳ್ಳಿ, ಮೂಡುಬಿದಿರೆ, ಹೆಬ್ರಿ ಮುಂತಾದೆಡೆ ಯಶಸ್ವೀ ಪ್ರದರ್ಶನ ಕಂಡ ನಾಟಕ ಫೆ. 1ರಂದು ಪುತ್ತೂರು, 4ರಂದು ಉಡುಪಿ, 7ರಂದು ಮಂಡ್ಯ, 8ರಂದು ಮೈಸೂರು, 10ರಂದು ಚಾಮರಾಜ ನಗರದಲ್ಲಿ ಪ್ರದರ್ಶನಗೊಳ್ಳಲಿದೆ. ಅನಂತರ ತಂಡ ಬೆಂಗಳೂರು ಹಾಗೂ ಉತ್ತರ ಕರ್ನಾಟಕದಲ್ಲಿ ಸಂಚರಿಸಲಿದೆ.

Advertisement

2 ಸಾವಿರ ಮಂದಿಯ ಶಂಖನಾದ
ಸಂಜೆ 4 ಗಂಟೆಗೆ ಏಕಕಾಲಕ್ಕೆ 2 ಸಾವಿರ ಮಂದಿಯ ಶಂಖನಾದದೊಂದಿಗೆ ಪರಶುರಾಮ ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next