Advertisement

ಪರಪ್ಪನ ಜೈಲು ಅಕ್ರಮ ತನಿಖೆ ಸಿಬಿಐಗೆ ವಹಿಸಿ: ರವಿಕುಮಾರ

03:41 PM Jul 19, 2017 | |

ರಾಯಚೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿರುವ ಅಕ್ರಮಗಳ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು. ಈ ಕೂಡಲೇ ಐಪಿಎಸ್‌ ಅಧಿಕಾರಿ ಡಿ.ರೂಪಾ ಅವರ ವರ್ಗಾವಣೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಜು.19ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ತಿಳಿಸಿದರು.

Advertisement

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಜೈಲುಗಳು ಮೋಜಿನ ತಾಣಗಳಾಗುತ್ತಿವೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಶಶಿಕಲಾ, ತೆಲಗಿಯಂಥ ಪ್ರಭಾವಿ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಿದ್ದರ ಬಗ್ಗೆ ಬಂಧೀಖಾನೆ ಡಿಐಜಿ ಡಿ.ರೂಪಾ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಿದ್ದು, ಐಷಾರಾಮಿ ಸೌಲಭ್ಯ ಒದಗಿಸಲು ಎರಡು ಕೋಟಿ ರೂ. ಲಂಚ ಪಡೆಯಲಾಗಿದೆ ಎಂದು ಉಲ್ಲೇಖೀಸಲಾಗಿದೆ. ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಿಬಿಐಗೆ ವಹಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ
ಮುಂದಾಗಬೇಕಿತ್ತು. ಆದರೆ, ಉತ್ತಮ ಕೆಲಸ ಮಾಡಿದ ರೂಪಾರನ್ನು ವರ್ಗಾವಣೆ ಮಾಡುವ ಮೂಲಕ ಪ್ರಭಾವಿ ಕೈದಿಗಳ ಬೆನ್ನಿಗೆ ನಿಂತಿರುವುದು ನಾಚಿಕೆಗೇಡು ಎಂದು ಟೀಕಿಸಿದರು.

ರಾಜ್ಯ ಸರ್ಕಾರ ದಕ್ಷ ಅಧಿಕಾರಿಗಳಿಗೆ ರಕ್ಷಣೆ ನೀಡುವಲ್ಲಿ ವಿಫಲವಾಗಿದೆ. ಪ್ರಾಮಾಣಿಕ ಅ ಧಿಕಾರಿಗಳ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ. ದಕ್ಷರನ್ನೇ ಮೂಲೆಗುಂಪು ಮಾಡಿ ಭ್ರಷ್ಟರ ಪರ ಆಡಳಿತ ನಡೆಸುತ್ತಿದೆ. ಅಕ್ರಮ ಮರಳುಗಾರಿಕೆಯಲ್ಲೂ ರಾಜ್ಯ ಸರ್ಕಾರ ನಂ.1 ಇದೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಎಸಿಬಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರೆಲ್ಲರಿಗೂ ಕ್ಲೀನ್‌ ಚೀಟ್‌ ನೀಡುತ್ತಿದೆ. ಅದಕ್ಕಾಗಿಯೇ ಎಸಿಬಿ ರಚಿಸಿದೆ ಎಂದು ವ್ಯಂಗ್ಯವಾಡಿದರು. ಪರಪ್ಪನ ಅಗ್ರಹಾರದಂತೆ ರಾಜ್ಯದ ಇತರೆ ಜೈಲುಗಳಲ್ಲಿ ಇಂಥ ಅಕ್ರಮ ನಡೆಯುತ್ತಿವೆ. ಈ ಕುರಿತು ವರದಿ ತರಿಸಿಕೊಂಡು ತನಿಖೆ ನಡೆಸಬೇಕು. ವರ್ಗಾವಣೆ ಮಾಡಿದ ಐಪಿಎಸ್‌ ಅ ಧಿಕಾರಿ ಡಿ.ರೂಪಾರನ್ನು
ರಜೆ ಮೇಲೆ ಕಳುಹಿಸಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ರಾಜ್ಯ ಸರ್ಕಾರದ ಇಂಥ ನಡೆಯನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ಶಂಕ್ರಪ್ಪ, ಜಿಲ್ಲಾಧ್ಯಕ್ಷ ಜೆ.ಶರಣಪ್ಪಗೌಡ, ಮುಖಂಡರಾದ ಕೆ.ಎಂ.ಪಾಟೀಲ, ದೊಡ್ಡ ಮಲ್ಲೇಶ, ಶಶಿರಾಜ್‌ ಮಸ್ಕಿ, ಎ.ಚಂದ್ರಶೇಖರ, ರಾಘವೇಂದ್ರ, ರಾಜೇಶ ಜೈನ ಇತರರು ಇದ್ದರು.

ಆರ್‌ಎಸ್‌ಎಸ್‌ ಮುಖಂಡ ಶರತ್‌ ಮಡಿವಾಳರ ಕೊಲೆ ಪ್ರಕರಣವನ್ನು ಸರ್ಕಾರ ಹಗುರವಾಗಿ ಪರಿಗಣಿಸಿದೆ. ಈವರೆಗೂ ಕೊಲೆ ಆರೋಪಿ ಪತ್ತೆಯಾಗಿಲ್ಲ. ಕೊಲೆ ಹಿಂದೆ ಎಂಥ ಪ್ರಭಾವಿಗಳೇ ಇದ್ದರೂ ಅವರನ್ನು ಶೀಘ್ರ ಬಂಧಿಸಿ ಕ್ರಮ ಜರುಗಿಸಬೇಕು.
ವಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪರ ಪಿಎರಿಂದ ಅಪಹರಣ ಪ್ರಕರಣ ಕಾಂಗ್ರೆಸ್‌ ನಡೆಸಿದ ಹುನ್ನಾರ. ಇದು ಒಂದು ಷಡ್ಯಂತ್ರವಾಗಿದ್ದು,
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪರ ಮುಖಕ್ಕೆ ಬಣ್ಣ ಬಳಿಯುವ ಕುತಂತ್ರ.  

Advertisement

ರವಿಕುಮಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next