Advertisement

4 ತಿಂಗಳಾದ್ರೂ ಅಂತಿಮ ವರದಿ ಸಲ್ಲಿಕೆಯಾಗಿಲ್ಲ!

06:25 AM Oct 23, 2017 | Team Udayavani |

ಬೆಂಗಳೂರು:ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಪರಪ್ಪನ ಅಗ್ರಹಾರ ಕಾರಾಗೃಹ ಹಗರಣದ ಬಗ್ಗೆ ತನಿಖೆಗೆ ವಹಿಸಿ ನಾಲ್ಕು ತಿಂಗಳಾದರೂ ಇನ್ನೂ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿಲ್ಲ.

Advertisement

ಹಿರಿಯ ಮತ್ತು ಕಿರಿಯ ಅಧಿಕಾರಿಗಳ ಪರಸ್ಪರ ಕೆಸರೆರಚಾಟದಿಂದ ತೀವ್ರ ಮುಜುಗರಕ್ಕೊಳಗಾದ ರಾಜ್ಯ ಸರ್ಕಾರದ ಹಗರಣದ ಸಂಪೂರ್ಣ ತನಿಖೆಗೆ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಿ ವಾರದೊಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸೂಚಿಸಿತ್ತು.  ಅಂತಿಮ ವರದಿಯನ್ನು ಮೂರು ತಿಂಗಳೊಳಗೆ ನೀಡುವಂತೆ ಆದೇಶಿಸಿತ್ತು. ಜುಲೈ 16ರಿಂದ ವಿನಯಕುಮಾರ್‌ ನೇತೃತ್ವದ ತಂಡ ತನಿಖೆ ಆರಂಭಿಸಿ 10 ದಿನಗಳಲ್ಲಿ ಪ್ರಾಥಮಿಕ ವರದಿ ಸಲ್ಲಿಸಿತ್ತು. ಪ್ರಾಥಮಿಕ ತನಿಖೆಯಿಂದ  ರೂಪಾ ಅವರು ಆರೋಪಿಸಿದ್ದಂತೆ ಜೈಲಿನಲ್ಲಿ ಯಾವುದೇ ರೀತಿಯ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ, ಸಂಪೂರ್ಣ ತನಿಖೆಯ ಬಳಿಕ ಎಲ್ಲವು ತಿಳಿಯಲಿದೆ ಎಂದು ಹೇಳಲಾಗಿತ್ತು.

ಅದರಂತೆ ತನಿಖಾ ತಂಡ ಡಿಜಿ ಸತ್ಯನಾರಾಯಣರಾವ್‌, ಡಿಐಡಿ ರೂಪಾ, ಜೈಲು ಅಧೀಕ್ಷಕ ಕೃಷ್ಣಕುಮಾರ್‌, ಉಪಾಧೀಕ್ಷಕಿ ಅನಿತಾ ಸೇರಿದಂತೆ ಹತ್ತಾರು ಮಂದಿ ಅಧಿಕಾರಿಗಳು ಹಾಗೂ ಕೆಲ ಕೈದಿಗಳಿಂದ ಹೇಳಿಕೆ ದಾಖಲಿಸಕೊಳ್ಳಲಾಗಿತ್ತು. ಆದರೆ, ಅಂತಿಮ ವರದಿ ಮಾತ್ರ ಇನ್ನು ಸಲ್ಲಿಕೆಯಾಗಿಲ್ಲ.

ವಿನಯ್‌ಕುಮಾರ್‌ಗೆ ಅನಾರೋಗ್ಯ
ಈ ಮಧ್ಯೆ, ಹಗರಣ ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ಗೆ ಹೃದಯ ಸಂಬಂಧಿ ಕಾಯಿಲೆ ಉಂಟಾಗಿ, ಅಸ್ವಸ್ಥಗೊಂಡಿದ್ದರು. ಹೀಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತನಿಖೆ ಮುಕ್ತಾಯಗೊಂಡಿದ್ದರೂ ವಿನಯಕುಮಾರ್‌ಗೆ ಅನಾರೋಗ್ಯ ಹಿನ್ನೆಲೆಯಲ್ಲಿ ವರದಿ ಸಲ್ಲಿಕೆಯಾಗಿಲ್ಲ. ಅವರು ಗುಣಮುಖರಾಗಿ ಬಂದ ನಂತರ ಸಲ್ಲಿಕೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಮೂಲಗಳ ಪ್ರಕಾರ ಹಗರಣದ ಕುರಿತ ಆರೋಪಿತ ಅಧಿಕಾರಿಗಳ ವಿಚಾರಣೆ ಮುಕ್ತಾಯವಾಗಿದೆಯೇ ಹೊರತು, ವರದಿ ಸಿದ್ಧವಾಗಿಲ್ಲ.

ಜುಲೈ 12ರಂದು ಡಿಐಜಿ ರೂಪಾ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆಯುತ್ತಿದ್ದ ಹಗರಣಗಳ ಬಗ್ಗೆ ಕಾರಾಗೃಹದ ಅಂದಿನ ಡಿಜಿ ಸತ್ಯನಾರಾಯಣರಾವ್‌ ಅವರಿಗೆ ಸಲ್ಲಿಸಿದ್ದರು. ಇದರಲ್ಲಿ ಸ್ವತಃ ಡಿಜಿ ಸತ್ಯನಾರಾಯಣರಾವ್‌ ಸೇರಿದಂತೆ ಕೆಲ ಅಧಿಕಾರಿಗಳ ವಿರುದ್ದ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ ಎಂದು ರೂಪಾ ವರದಿಯಲ್ಲಿ ಉಲ್ಲೇಖೀಸಿದ್ದರು. ಇದಲ್ಲದೇ ಜುಲೈ 14 ರಂದು ಮತ್ತೂಂದು ವರದಿಯನ್ನು ಸಲ್ಲಿಸಿದ್ದರು. ನಂತರ ಸರ್ಕಾರ ತನಿಖೆಗೆ ತಂಡ ರಚಿಸಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next