Advertisement

ಪರಪ್ಪನ ಅಗ್ರಹಾರಕ್ಕೆ ಸಿದ್ದರಾಮಯ್ಯರಿಂದ ಹಲವು ಭಾಗ್ಯ,ಅದು ಜೈಲಲ್ಲ!

03:14 PM Jul 15, 2017 | |

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲು ಜೈಲಾಗಿ ಉಳಿದಿಲ್ಲ , ಅಲ್ಲಿನ ಖೈದಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಭಾಗ್ಯಗಳನ್ನು ಕರುಣಿಸಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ, ಮಾಜಿ ಗೃಹ ಸಚಿವ ಆರ್‌.ಅಶೋಕ್‌ ಕಿಡಿ ಕಾರಿದ್ದಾರೆ. 

Advertisement

ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ಕಾರದ ವಿರುದ್ಧ ಕಿಡಿ ಕಾರಿದರು. ಡಿಐಜಿ ರೂಪಾ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ಐಷಾರಾಮಿ ಜೀವನ ನಡೆಸಲು 2 ಕೋಟಿ ರೂಪಾಯಿ ಲಂಚ ಪಡೆದಿರುವ ಕುರಿತು ವರದಿ ನೀಡಿದ್ದಾರೆ ಹೊರತು ಆರೋಪ ಮಾಡಿಲ್ಲ ಎಂದರು.

ಗೃಹ ಇಲಾಖೆಯೂ ಸಿದ್ದರಾಮಯ್ಯ ಅವರಂತೆ ನಿದ್ದೆ ಮಾಡುತ್ತಿದ್ದು , ಜೈಲಿನಲ್ಲಿ ಮದ್ಯಪಾನಕ್ಕೆ ಅವಕಾಶ ಇದೆ. ರೇವ್‌ ಪಾರ್ಟಿ ಮಾಡಲು ಅವಕಾಶ ಇದೆ. ಪ್ರಕರಣದ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಿ ತಪ್ಪು ಮಾಡಿದವರನ್ನು ಶಿಕ್ಷಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ರೂಪಾ ಅವರಿಗೆ ನೊಟೀಸ್‌ ನೀಡಿರುವ ಕ್ರಮವನ್ನು ವಿರೋಧಿಸಿದ ಅವರು ಸರ್ಕಾರ ನೊಟೀಸ್‌ ನೀಡುವುದನ್ನು ಬಿಟ್ಟು ಆಕ್ರಮಗಳ ವಿರುದ್ಧ ಕ್ರಮಕೈಗೊಳ್ಳಲಿ ಎಂದು ಕಿಡಿ ಕಾರಿದರು. 

Advertisement

Udayavani is now on Telegram. Click here to join our channel and stay updated with the latest news.

Next