Advertisement

ಮನುಷ್ಯನ ಮಾತುಗಳೇ ಆತನ ಸಂಸ್ಕೃತಿಯನ್ನು ತೋರಿಸುತ್ತದೆ : ಶಾಸಕ ಪರಣ್ಣ ಮುನವಳ್ಳಿ

01:00 PM Sep 04, 2021 | Team Udayavani |

ಗಂಗಾವತಿ : ಪ್ರತಿಯೊಬ್ಬ ಮನುಷ್ಯನ ಮಾತುಗಳು ಆತನ ನಡೆ ನುಡಿ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

Advertisement

ಅವರು ಜೂನಿಯರ್ ಕಾಲೇಜಿನ ನೂತನ ಕೊಠಡಿಗಳ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತ ವ್ಯಕ್ತಿ ಇದೀಗ ಎಚ್ಚರಗೊಂಡು ತಮ್ಮ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಪತ್ರಕರ್ತರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ವಿಧಾನಸಭೆ ಚುನಾವಣೆ ಇನ್ನೂ 20 ತಿಂಗಳಿದೆ. ಕ್ಷೇತ್ರದ ಜನರು ಯಾರಿಗೆ ಬುದ್ಧಿ ಕಲಿಸುತ್ತಾರೋ ಕಾಯ್ದು ನೋಡಬೇಕಿದೆ. ಕ್ಷೇತ್ರದಲ್ಲಿ ಹಗಲು ರಾತ್ರಿ ರಸ್ತೆ ಕುಡಿಯುವ ನೀರು ಶಾಲಾ ಕಾಲೇಜು ಅಭಿವೃದ್ಧಿ ಪಡಿಸಲು ಕಾರ್ಯ ಮಾಡಲಾಗುತ್ತಿದೆ. ರಾಜಕೀಯ ಉದ್ದೇಶಕ್ಕಾಗಿಯೇ ಮಾಜಿ ಸಚಿವರು ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಮಾಡಿ ಜನರನ್ನು ರೊಚ್ಚಿಗೆಬ್ಬಿಸು ತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕರಾದ ಬಯ್ಯಾಪೂರು ಅಮರೇಗೌಡ, ಕೆ.ರಾಘವೆಂದ್ರ ಹಿಟ್ನಾಳ ಸೇರಿದಂತೆ ಎಲ್ಲಾ ಸಂಸದರು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಭೂಮಿ ಪೂಜೆ ಸೇರಿದಂತೆ ಸರ್ಕಾರಿ ಕಾರ್ಯಕ್ರಮಗಳನ್ನು ಅದರಂತೆ ತಾವು ಸಹ ಸರ್ಕಾರಿ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿ ಅನುಸರಿಸಿ ಮಾಡುತ್ತಿದ್ದು ಇದನ್ನು ಮಾಜಿ ಸಚಿವರು ಟೀಕೆ ಮಾಡುತ್ತಿದ್ದಾರೆ.

ಇದನ್ನೂ ಓದಿ :ಚೊಚ್ಚಲ ಸ್ವದೇಶಿ ನಿರ್ಮಿತ “ಸೂಪರ್‌ ಪವರ್‌ ಧ್ರುವ್‌”; ಭಾರತಕ್ಕೆ ಏನು ಲಾಭ?

ಅನ್ಸಾರಿ ಕಾರ್ಯಕ್ರಮ ನಡೆಸಲು ಯಾರೂ ಸಹ ಆಕ್ಷೇಪ ವ್ಯಕ್ತಪಡಿಸಿಲ್ಲ ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸಮಾನ ಹಕ್ಕು ಮತ್ತು ಕರ್ತವ್ಯಗಳಿವೆ ಕೊರೋನಾ ಮೂಲನೆಯ ಅಲೆ ತಡೆಯಲು ಮಾಜಿ ಸಚಿವ ಅನ್ಸಾರಿ ಜಿಲ್ಲಾಡಳಿತಕ್ಕೆ ಸಹಕಾರ ನೀಡದೆ 100 ಜನರಿಗೆ ಪರವಾನಿಗೆ ಪಡೆದು ಸಾವಿರಾರು ಜನರನ್ನು ಸೇರಿಸಿ ಅನ್ಸಾರಿ ನಡಿಗೆ ಜನಾಶೀರ್ವಾದದ ಕಡೆಗೆ ಕಾಂಗ್ರೆಸ್ ಕಾರ್ಯಕ್ರಮ ಮಾಡುವುದು ಸರಿಯಲ್ಲ.

ಕೊರೋನಾ ಮೂರನೇ ಅಲೆ ತಡೆಯಲು ಅನ್ಸಾರಿ ಕಾರ್ಯಕ್ರಮನ ರದ್ದುಪಡಿಸಿದ್ಧನ್ನು ಅನ್ಸಾರಿ ಹಾಗೂ ಅವರ ಬೆಂಬಲಿಗರು ವ್ಯಾಪಕವಾಗಿ ಟೀಕೆ ಮಾಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ.ಮೊದಲಿಗೆ ಜಿಲ್ಲಾಡಳಿತ ನೀಡಿದ್ದ ಪರವಾನಗಿ ಪ್ರಕಾರ ಕಡಿಮೆ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಕಾರ್ಯಕ್ರಮ ಮಾಡೋದನ್ನು ಅನ್ಸಾರಿ ಕಡೆಯೋರು ಕಲಿಯಲಿ ಅದನ್ನು ಬಿಟ್ಟು ಬಿಜೆಪಿ ಮತ್ತು ಪತ್ರಕರ್ತರ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಿ ಎಂದರು.

Advertisement

ಒಳ್ಳೆಯದನ್ನು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶಪ್ಪ ನಾಯಕ,ಬಿಟ್ಟು ಹಲವು ಚಂದ್ರಪ್ಪ ಉಪ್ಪಾರ್, ಮಳಗಿ ಚನ್ನಪ್ಪ ,ವಾಸುದೇವ ನವಲಿ, ವೆಂಕಟರಾವ್ ಕುಲಕರ್ಣಿ ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next