Advertisement
ಇಲ್ಲಿನ ನಿವಾಸಿಗಳು ಬೇರೆ ಮಾರ್ಗದ ಮೂಲಕ ಸಾಲಿಗ್ರಾಮ, ಕೋಟ ತಲುಪಬೇಕಾದರೆ 8 ಕಿ.ಮೀ. ಸುತ್ತುವರಿಯಬೇಕು. ಆದರೆ ಈ ಮರದ ಸೇತುವೆ ಮೂಲಕ ಕೇವಲ 2 ಕಿ.ಮೀ. ಪ್ರಯಾಣಿಸಿ ಈ ಪ್ರದೇಶಗಳನ್ನು ತಲುಪಬಹುದು. ಹೀಗಾಗಿ ಈ ಸೇತುವೆ ಪ್ರಾಮುಖ್ಯತೆ ಪಡೆದಿದೆ.
ಸೇತುವೆ ಸಂಪೂರ್ಣ ಶಿಥಿಲಗೊಂಡಿರುವುದು ಇದರಿಂದ ಮಳೆಗಾಲದಲ್ಲಿ ಸ್ಥಳೀಯರು ಜೀವ ಕೈಯಲ್ಲಿ ಹಿಡಿದು ಸಂಚರಿಸುತ್ತಾರೆ ಹಾಗೂ ನೀರು ನಿಂತಾಗ ಸೇತುವೆ ಜಾರುಬಂದಿಯಂತೆ ಜಾರುತ್ತದೆ. ಶಾಲೆಗಳಿಗೆ ತೆರಳುವ ಪುಟ್ಟ ಮಕ್ಕಳನ್ನ ಹೆತ್ತವರೇ ಸೇತುವೆ ದಾಟಿಸಿ ಬರುತ್ತಾರೆ. ರೈತರು ನೇಜಿ ಮುಂತಾದವುಗಳನ್ನು ಸೇತುವೆಯ ಇನ್ನೊಂದು ಕಡೆ ಸಾಗಿಸಲು ಹರಸಾಹಸ ಪಡುತ್ತಾರೆ ಹಾಗೂ ಈ ಸಂದರ್ಭ ಸ್ವಲ್ಪ ಎಚ್ಚರ ತಪ್ಪಿದರು ದೊಡ್ಡ ಅನಾಹುತ ಘಟಿಸುತ್ತದೆ. ಶಾಶ್ವತ ಸೇತುವೆ ನಿರ್ಮಿಸುವಂತೆ ಇಲ್ಲಿನ ನಿವಾಸಿಗಳು ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರು. ಇವರ ಮನವಿಗೆ ಸರಿಯಾದ ಪುರಸ್ಕಾರ ದೊರೆತಿಲ್ಲ. ಒಟ್ಟಾರೆ ಮರದ ಸೇತುವೆ ಜಾಗದಲ್ಲಿ ಕಾಂಕ್ರೇಟ್ ಸೇತುವೆ ಯಾವಾಗ ನಿರ್ಮಾಣಗೊಳ್ಳುತ್ತದೆ? ನಮ್ಮ ಈ ಸರ್ಕಸ್ ಯಾವಾಗ ಅಂತ್ಯಗೊಳ್ಳುತ್ತದೆ ಎನ್ನುವ ನಿರೀಕ್ಷೆಯಲ್ಲಿ ಇಲ್ಲಿನ ನಿವಾಸಿಗಳಿದ್ದಾರೆ.