Advertisement

ಸಹೋದ್ಯೋಗಿಯಿಂದ ಗುಂಡಿನ ದಾಳಿ: ಕರ್ತವ್ಯದಲ್ಲಿದ್ದ ಇಬ್ಬರು ಐಆರ್‌ಬಿ ಯೋಧರ ಸಾವು

09:02 AM Nov 27, 2022 | Team Udayavani |

ಅಹ್ಮದಾಬಾದ್ : ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ ಪರಿಣಾಮ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಇಬ್ಬರು ಯೋಧರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿರುವ ಘಟನೆ ಗುಜರಾತ್ ನ ಪೋರಬಂದರ್ ನಲ್ಲಿ ಶನಿವಾರ ಸಂಜೆ ನಡೆದಿದೆ.

Advertisement

ಪೊಲೀಸ್ ವರದಿಯ ಪ್ರಕಾರ ಆರೋಪಿಯನ್ನು ಕಾನ್‌ಸ್ಟೆಬಲ್ ಎಸ್. ಇನೌಚಾಸಿಂಗ್ ಎಂದು ಗುರುತಿಸಲಾಗಿದ್ದು, ಕೊಲೆಯಾದ ಇಬ್ಬರು ಜವಾನರಾದ ತೊಯ್ಬಾ ಸಿಂಗ್ ಮತ್ತು ಜಿತೇಂದ್ರ ಸಿಂಗ್. ಗಾಯಗೊಂಡವರು ಕಾನ್‌ಸ್ಟೆಬಲ್‌ಗಳಾದ ಚೋರಜಿತ್ ಮತ್ತು ರೋಹಿಕಾನಾ. ಇವರೆಲ್ಲರೂ ಮಣಿಪುರಕ್ಕೆ ಸೇರಿದವರು.

ಶನಿವಾರ ಸಂಜೆ ಸಹೋದ್ಯೋಗಿಗಳ ನಡುವೆ ಯಾವುದೋ ವಿಚಾರಕ್ಕೆ ಜಗಳವಾಗಿದೆ ಅದು ವಿಕೋಪಕ್ಕೆ ತಿರುಗಿ ತನ್ನಲ್ಲಿದ್ದ ಎಕೆ – 47 ರೈಫಲ್ ನಿಂದ ಸಹೋದ್ಯೋಗಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.

ಗಾಯಾಳುಗಳನ್ನು ಪೋರಬಂದರ್ ನ ಆಸ್ಪತ್ರೆಗೆ ದಾಖಲಿಸಲಾಗಿದ್ದು ಸದ್ಯ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ಆರೋಪಿ ಎಸ್. ಇನೌಚಾಸಿಂಗ್ ನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಗುಜರಾತ್ ನಲ್ಲಿ ಡಿಸೆಂಬರ್ ತಿಂಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು ಅದಕ್ಕಾಗಿ ಭದ್ರತಾ ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.

Advertisement

ಇದನ್ನೂ ಓದಿ: ಬಣಕಲ್: 800 ಕಿ.ಮೀ. ಕ್ರಮಿಸಿ ಶಬರಿಮಲೆಗೆ ಪಾದಯಾತ್ರೆ ಮಾಡಲು ಭಕ್ತನ ಪಣ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next