Advertisement

ನೀತಿ ಆಯೋಗದ ನೂತನ ಸಿಇಒ ಆಗಿ ಪರಮೇಶ್ವರನ್ ಅಯ್ಯರ್ ನೇಮಕ

09:01 PM Jun 24, 2022 | Team Udayavani |

ನವದೆಹಲಿ: ನೀತಿ ಆಯೋಗಕ್ಕೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮಾಜಿ ಕಾರ್ಯದರ್ಶಿ ಪರಮೇಶ್ವರ್‌ ಅಯ್ಯರ್‌ ಅವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಆಗಿ ನೇಮಕ ಮಾಡಲಾಗಿದೆ.

Advertisement

ಕೇಂದ್ರ ಸರ್ಕಾರವು ಈ ಕುರಿತು ಶುಕ್ರವಾರ ಪ್ರಕಟಣೆ ಹೊರಡಿಸಿದೆ. ಪರಮೇಶ್ವರ್‌ ಅವರು ಉತ್ತರ ಪ್ರದೇಶ ಕೇಡರ್‌ನ 1981ನೇ ಐಎಎಸ್‌ ಬ್ಯಾಚ್‌ ಅಧಿಕಾರಿ.

ಪರಮೇಶ್ವರ್‌ ಅವರು ನೈರ್ಮಲ್ಯ ತಜ್ಞರಾಗಿಯೇ ಪ್ರಸಿದ್ಧರಾದವರು. 2016ರಿಂದ 2020ರವರೆಗೆ ಪ್ರಧಾನಿ ಮೋದಿ ಸರ್ಕಾರದ “ಸ್ವತ್ಛ ಭಾರತ ಅಭಿಯಾನ’ವನ್ನು ಮುನ್ನಡೆಸುವ ಮೂಲಕ ಹೆಸರುವಾಸಿಯಾಗಿದ್ದರು. ವಿಶ್ವಸಂಸ್ಥೆಯಲ್ಲಿ ಗ್ರಾಮೀಣ ಜಲ ನೈರ್ಮಲ್ಯ ತಜ್ಞರಾಗಿಯೂ ಕೆಲಸ ನಿರ್ವಹಿಸಿದ್ದಾರೆ.

ಇದೇ ವೇಳೆ ಭಾರತದ ಗುಪ್ತಚರ ಇಲಾಖೆಗೆ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್‌ ಅಧಿಕಾರಿ ತಪನ್‌ ಕುಮಾರ್‌ ದೇಕ ಅವರನ್ನು ನೇಮಕ ಮಾಡಲಾಗಿದೆ. ಈವರೆಗೆ ಇಲಾಖೆಯ ವಿಂಗ್‌ ಆಪರೇಷನ್‌ಗಳನ್ನು ನಿರ್ವಹಿಸುತ್ತಿದ್ದ ತಪನ್‌ ಅವರು 2 ವರ್ಷಗಳ ಕಾಲ ಇಲಾಖೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅವರು ಹಿಮಾಚಲದ 1988ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

ಹಾಗೆಯೇ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ(ರಾ)ದ ಮುಖ್ಯಸ್ಥಾಗಿರುವ ಸಮಂತ್‌ ಗೋಯೆಲ್‌ ಅವರ ಅಧಿಕಾರಾವಧಿಯನ್ನು ಒಂದು ವರ್ಷದ ಕಾಲ ವಿಸ್ತರಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next