Advertisement

Paralympics;ನಿರಾಶ್ರಿತ ತಂಡದ ಪರ ಮೊದಲ ಪದಕ ಗೆದ್ದ ಅಫ್ಘಾನ್‌ ಕ್ರೀಡಾಪಟು

12:26 AM Aug 31, 2024 | Team Udayavani |

ಪ್ಯಾರಿಸ್‌: ವನಿತೆಯರ ಪ್ಯಾರಾ ಟೇಕ್ವಾಂಡೊ 47 ಕೆಜಿ ವಿಭಾಗದಲ್ಲಿ ಕಂಚು ಗೆದ್ದಿರುವ ಅಫ್ಘಾನಿಸ್ಥಾನದ ಆ್ಯತ್ಲೀಟ್‌ ಝಕಿಯಾ ಖುದಾದಾದಿ ಇತಿಹಾಸ ನಿರ್ಮಿಸಿ ದ್ದಾರೆ. ಅವರು ಈ ಕೂಟದಲ್ಲಿ ಪದಕ ಗೆದ್ದ ನಿರಾಶ್ರಿತರ ತಂಡದ ಮೊದಲ ಕ್ರೀಡಾಪಟು ಆಗಿದ್ದಾರೆ. ಝಕಿಯಾ ಟರ್ಕಿಯ ಎಕಿನಿಕ್‌ ನುರ್ಸಿಹಾನ್‌ ವಿರುದ್ಧ ಜಯ ಗಳಿದರು. ಒಂದು ಕೈಯಿಲ್ಲದೆ ಜಯಿಸಿದ ಝಕಿಯಾ, 11ನೇ ವರ್ಷದಿಂದಲೇ ತನ್ನ ಊರು ಹೇರತ್‌ನ ಜಿಮ್‌ನಲ್ಲಿ ಗುಟ್ಟಾಗಿ ಅಭ್ಯಾಸ ನಡೆಸಿ ಈಗ ಪದಕ ಗೆಲ್ಲುವ ವರೆಗೆ ಬೆಳೆದಿದ್ದಾರೆ ಎನ್ನುವುದು ವಿಶೇಷ. ತಾಲಿಬಾನ್‌ ಆಡಳಿತವಿರುವ ಅಫ್ಘಾನ್‌ನಲ್ಲಿ ಮಹಿಳೆಯರು ಕ್ರೀಡೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲವಾದ್ದರಿಂದ ಝಕಿಯಾ ನಿರಾಶ್ರಿತರ ತಂಡದಿಂದ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next