Advertisement

ಮಳೆಗಾಗಿ ಪರ್ಜನ್ಯ ಜಪ-ಹೋಮ

03:05 PM Jul 22, 2017 | Team Udayavani |

ಚಳ್ಳಕೆರೆ: ತಾಲೂಕಿನ ಹಿತಕ್ಕಾಗಿ ಮಳೆಗಾಗಿ ಪ್ರಾರ್ಥಿಸುವ ವಿಶೇಷ ಕಾರ್ಯಕ್ರಮವನ್ನು ಬ್ರಾಹ್ಮಣ ಸಮುದಾಯ ಹಮ್ಮಿಕೊಳ್ಳುವ ಮೂಲಕ ಎಲ್ಲ ವರ್ಗದವರಿಗೂ ಮಾರ್ಗದರ್ಶಿಯಾಗಿದ್ದಾರೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.

Advertisement

ಇಲ್ಲಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ತಾಲೂಕು ಬ್ರಾಹ್ಮಣ ಸಂಘದಿಂದ ಮಳೆರಾಯನ ಕೃಪೆಗಾಗಿ ಪರ್ಜನ್ಯ ಜಪ, ಹೋಮ ಮತ್ತು ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ಕೆಲವು ವರ್ಷಗಳಿಂದ ಈ ಸಮುದಾಯದ ಅನೇಕ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೂ ಯಾವುದೇ ಬೇಡಿಕೆ ಈಡೇರಿಕೆಗಾಗಿ ಮನವಿ ಸಲ್ಲಿಸಿಲ್ಲ. ಹೀಗಾಗಿ ಸಮಾಜದ ಸರ್ವರ ಹಿತ ಬಯಸುವ ಈ ಸಮುದಾಯದ ಅಭ್ಯುದಯಕ್ಕೆ ನಾನು ಸಹ ಆರ್ಥಿಕ ನೆರವು ನೀಡಲು ಬಯಸಿದ್ದೇನೆ ಎಂದರು.

ಸಮಾಜದ ಚಿಂತಕ ಅನಂತರಾಮ್‌ ಗೌತಮ್‌ ಮಾತನಾಡಿ, ಯಾವುದೇ ವ್ಯಕ್ತಿ ತನ್ನ ದಿನನಿತ್ಯ ಜೀವನಲ್ಲಿ ಏನಾದರೂ ಒಂದು ಲೋಪವನ್ನು ಅನಿವಾರ್ಯವಾಗಿ ಅರಿವಿಲ್ಲದಂತೆ ಎಸಗುತ್ತಾನೆ. ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಲೋಪಕ್ಕೆ ಪ್ರಾಯಚ್ಚಿತ ಪಡೆಯಲು ಅನುಕೂಲವಾಗುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಟಿ.ಎಸ್‌. ಗುಂಡೂರಾವ್‌ ಮಾತನಾಡಿ, ಪರ್ಜನ್ಯ ಜಪ ಮತ್ತು ಹೋಮ ಕಾರ್ಯಕ್ರಮಗಳು ಈ ಪ್ರದೇಶದ ಕಷ್ಟ ಜೀವಿಗಳಿಗೆ ನೆರವಾಗಿ ಸುಖದ ಹಾದಿ ಹಿಡಿಯುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿರುವೆ. ನಾವುಗಳು ಎಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಹ ದೇವರ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳಬಾರದು. ಕಾರಣ ನಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಭಗವಂತನಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ತಾಪಂ ಅಧ್ಯಕ್ಷ ಜಿ. ವೀರೇಶ್‌, ನಗರಸಭಾ ಅಧ್ಯಕ್ಷೆ ಬೋರಮ್ಮ, ತಹಶೀಲ್ದಾರ್‌ ಟಿ.ಸಿ. ಕಾಂತರಾಜು, ಪೌರಾಯುಕ್ತ ಜೆ.ಟಿ. ಹನುಮಂತರಾಜು, ಕೆಡಿಪಿ ಸದಸ್ಯರಾದ ಡಿ.ಸುರೇಂದ್ರ, ಬಡಗಿ ಪಾಪಣ್ಣ, ಹನುಮಂತಪ್ಪ, ಪಿ. ತಿಪ್ಪೇಸ್ವಾಮಿ, ಮೂಡಲಗಿರಿಯಪ್ಪ ಇತರರು ಇದ್ದರು. ಪ್ರರ್ಜನ್ಯ ಹೋಮ ಕಾರ್ಯಕ್ರಮವನ್ನು ವೇದಬ್ರಹ್ಮ ಸಿ.ಎನ್‌. ನಾಗಶಯನಗೌತಮ್‌, ಮುರಳಿ, ಪ್ರದೀಪ್‌ ಶರ್ಮ, ಗೋಪಿನಾಥ, ಪ್ರವೀಣ್‌ ಶರ್ಮ, ನಾಗೇಶ್‌, ರಾಮಣ್ಣ, ಸಿ.ಎಸ್‌. ಗೋಪಿನಾಥ ಇತರರು ನಡೆಸಿಕೊಟ್ಟರು.

Advertisement

ಮಳೆಗಾಗಿ ವಿವಿಧ ದೇಗುಲಗಳಲ್ಲಿ ಪೂಜೆ
ಚಳ್ಳಕೆರೆ: ತಾಲೂಕಿನಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆ ಬಾರದ ಹಿನ್ನೆಲೆಯಲ್ಲಿ ಜನರಲ್ಲಿ ಆತ್ಮವಿಶ್ವಾಸ ತುಂಬಲು ಇಲ್ಲಿನ ನಗರಸಭೆ ವತಿಯಿಂದ ಗ್ರಾಮ ದೇವತೆ ಶ್ರೀ ಚಳ್ಳಕೆರೆಯಮ್ಮ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ಅನಾದಿ ಕಾಲದಿಂದಲೂ ನಾವು ನಮ್ಮ ಸಂಕಷ್ಟಗಳಿಗೆ ದೇವರಗಳು ಮೊರೆ ಹೋಗುವುದು ವಾಡಿಕೆ. ಇಂದಿನ ಕಷ್ಟಕರ ಪರಿಸ್ಥಿತಿಯನ್ನು ನಿವಾರಿಸಲು ಇಂತಹ ಪೂಜಾ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ. ನಗರಸಭೆ ಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದರು. ನಗರಸಭೆ ಅಧ್ಯಕ್ಷೆ ಬೋರಮ್ಮ ಮಾತನಾಡಿ, ದಿನದಿಂದ
ದಿನಕ್ಕೆ ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗುತ್ತಿದ್ದು, ತಾತ್ಕಾಲಿಕವಾಗಿ ವಾಣಿ ವಿಲಾಸ ಸಾಗರದ ನೀರು ಇಲ್ಲಿನ ಜನರಿಗೆ ಲಭ್ಯವಿದೆ. ಕೇವಲ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಆದರೆ, ಸಾವಿರಾರು ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳಿಗೆ ಮಳೆ ಬೇಕೇ ಬೇಕು. ಈ ಹಿನ್ನೆಲೆಯಲ್ಲಿ ನಗರಸಭೆ ಎಲ್ಲ ಸದಸ್ಯರು ಪಕ್ಷ ಭೇದ ಮರೆತು ಮಳೆಗಾಗಿ ಪ್ರಾರ್ಥಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ
ಎಂದರು.

ತಾಪಂ ಅಧ್ಯಕ್ಷ ಜಿ. ವೀರೇಶ್‌, ದೇವಸ್ಥಾನದ ಆಡಳಿತ ಮಂಡಳಿತ ನಿರ್ದೇಶಕರಾದ ಪಿ.ತಿಪ್ಪೇಸ್ವಾಮಿ, ಚಿತ್ರಯ್ಯನಹಟ್ಟಿ ನಾಗರಾಜು, ಎ. ಅನಂತಪ್ರಸಾದ್‌, ಬಡಗಿ ಪಾಪಣ್ಣ, ಮಡಿವಾಳ ಯುವಕ ಸಂಘದ ಅಧ್ಯಕ್ಷ ಕರೀಕೆರೆ ನಾಗರಾಜು, ಕಾರ್ಯದರ್ಶಿ ಹಾಲಿನಬಾಬು, ಮೈಲಾರಿ, ಮಾಜಿ ಸದಸ್ಯ ಪಾಪಣ್ಣ ಇತರರು ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next