Advertisement
ಸಾಹಸ ಚಟುವಟಿಕೆಗಳು ಪ್ರವಾಸದ ಖುಷಿಯನ್ನು ಇಮ್ಮಡಿಯಾಗಿಸುತ್ತವೆ. ಇಂತಹ ಖುಷಿ ಚಟುವಟಿಕೆಗಳಿಗಾಗಿಯೇ ಸಾಕಷ್ಟು ಮಂದಿ ಪ್ರವಾಸ ಕೈಗೊಳ್ಳುತ್ತಾರೆ. ಟ್ರೆಕ್ಕಿಂಗ್, ಕ್ಯಾಂಪಿಂಗ್ ಹೀಗೆ ಸಾಕಷ್ಟು ಸಾಹಸ ಚಟುವಟಿಕೆಗಳು ಪ್ರವಾಸದ ಖುಷಿ ಹೆಚ್ಚಾಗಿಸುತ್ತವೆ. ಅಂತೆಯೇ, ಇನ್ನೊಂದಷ್ಟು ಮಂದಿ ಪ್ಯಾರಾಗ್ಲೈಂಡಿಂಗ್ ಅವಕಾಶ ತಪ್ಪಿಸಿಕೊಳ್ಳುವುದೇ ಇಲ್ಲ. ಹೀಗೆ ಪ್ರವಾಸಿಗರಿಗೆ ಆನಂದ ನೀಡುವಂತಹ ಸಾಕಷ್ಟು ಅದ್ಭುತ ಪ್ಯಾರಾಗ್ಲೈಂಡಿಂಗ್ ತಾಣಗಳು ವಿಶ್ವದಲ್ಲಿವೆ. ಅಂತೆಯೇ, ಕರ್ನಾಟಕದ ಕಾಶ್ಮೀರ ಎಂಬ ಹೆಸರಿಗೆ ಖ್ಯಾತಿಯಾಗಿರುವ ಸಕಲೇಶಪುರದಲ್ಲಿ ಪ್ರಥಮ ಬಾರಿಗೆ ಪ್ಯಾರಾಗ್ಲೈಂಡಿಂಗ್ ಗೆ ಚಾಲನೆ ನೀಡಲಾಗಿದೆ.
Related Articles
Advertisement
ಪ್ಯಾರಾಗ್ಲೈಂಡಿಂಗ್ ನಲ್ಲಿ ಮೂರು ವಿಭಾಗ: ಪ್ಯಾರಾಗ್ಲೈಂಡಿಂಗ್ ನ್ನು ಮೂರು ವಿಭಾಗ ಮಾಡಲಾಗಿದೆ. 12ರಿಂದ 15 ನಿಮಿಷ, 15ರಿಂದ 20 ನಿಮಿಷ ಹಾಗೂ 20 ನಿಮಿಷಕ್ಕೂ ಹೆಚ್ಚು ಸಮಯ ಆಕಾಶದಲ್ಲಿ ಹಾರಡುವ ಸಮಯ ನಿಗದಿ ಪಡಿಸಲಾಗಿದೆ. ಕ್ರಮವಾಗಿ 3000, 3500 ಹಾಗೂ 4000 ರೂ. ಗಳನ್ನು ಒಬ್ಬ ವ್ಯಕ್ತಿಗೆ ನಿಗದಿ ಮಾಡಲಾಗಿದೆ. ಪ್ಯಾರಾಗ್ಲೈಂಡಿಂಗ್ ವೇಳೆ ಅನಾ ಹುತ ಸಂಭವಿಸಿದರೆ ಅಗತ್ಯ ಕ್ರಮ ವಹಿಸಲಾ ಗಿದ್ದು, ಮತ್ತೂಂದು ಪ್ಯಾರಾಗ್ಲೈಂಡಿಂಗ್ ನ್ನು ಪ್ಯಾರ ಚೂಟ್ ಮೂಲಕ ರಕ್ಷಿಸಲಾಗುವುದು. ನವೆಂಬರ್‌ನಿಂದ ಮೇ ತಿಂಗಳವರೆಗೆ ಮಾತ್ರ ಈ ಚಟುವಟಿಕೆ ನಡೆಸಲಾಗುತ್ತದೆ. ಒಟ್ಟಾರೆಯಾಗಿ ತಾಲೂಕಿನಲ್ಲಿ ಪ್ರಥಮ ಬಾರಿಗೆ ಪ್ಯಾರಾಗ್ಲೈಂಡಿಂಗ್ ಆರಂಭವಾಗಿದ್ದು, ಸಾಹಸಪ್ರಿಯರಿಗೆ ಸಂತೋಷ ತಂದಿದೆ.
ಇಷ್ಟು ದಿನಗಳವರೆಗೂ ಹೊಸಹಳ್ಳಿ ಗುಡ್ಡಕ್ಕೆ ತೆರಳುವ ಪ್ರವಾಸಿಗರಿಗೆ ನಿರ್ಭಂದವಿ ರಲಿಲ್ಲ. ಆದರೆ, ಇನ್ನು ಮುಂದೆ ಅರಣ್ಯ ಇಲಾಖೆ, ಸ್ಥಳೀಯರ ನೆರವಿನಿಂದ ಗುಡ್ಡ ಹತ್ತುವ ಮೊದಲೇ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗುವುದು. ಆದಾಯ ಕ್ರೂಡೀಕರಣಕ್ಕೆ ಗ್ರಾಮ ಅರಣ್ಯ ಸಮಿತಿ ಸಲಹೆ ಪಡೆದು ಪ್ರವಾಸೋದ್ಯಮ ಉತ್ತೇಜನ ನೀಡಲಾಗುವುದು. –ಬಸವರಾಜ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ
ಪ್ಯಾರಾಗ್ಲೈಂಡಿಂಗ್ ಗೆ ಯಾವುದೇ ಇಂದನ ಬಳಸುವುದಿಲ್ಲ. ಜೊತೆಗೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಈ ಯೋಜನೆ ಸಿದ್ಧಪಡಿಸಲಾಗಿದೆ. ಅರಣ್ಯ ಪ್ರದೇಶದ ಮೇಲೆ ಹಾರಿಸುವ ಈ ಯೋಜನೆ ಕರ್ನಾಟಕದಲ್ಲೇ ಪ್ರಥಮವಾಗಿದೆ. ಪ್ಯಾರಾಗ್ಲೈಂಡಿಂಗ್ ನಿಯಂತ್ರಣ ಪೈಲಟ್ ಬಳಿ ಇರುತ್ತದೆ. ಯಾವುದೇ ಆತಂಕ ಬೇಡ. ವಿವಿಧೆಡೆ ನಾವು ಈ ಚಟುವಟಿಕೆ ನಡೆಸುತ್ತಿದ್ದೇವೆ. -ಪೃಥ್ವಿ, ವ್ಯವಸ್ಥಾಪಕ, ಪ್ಯಾರಾಗ್ಲೈಂಡಿಂಗ್ ಅಡ್ ವೆಂಚರ್ ಎಕ್ಸ್‌ಪ್ಲೋರರ್ ಕಂಪನಿ
ಪ್ಯಾರಾಗ್ಲೈಂಡಿಂಗ್ ಉತ್ತಮ ಯೋಜನೆ. ಪ್ರವಾಸೋದ್ಯಮಕ್ಕೆ ಪೂರಕವಾಗಿದೆ. ಆದರೆ, ಪ್ಯಾರಾಗ್ಲೈಂಡಿಂಗ್ ಬೆಲೆ ವಿಚಾರದಲ್ಲಿ ವ್ಯತ್ಯಾಸವಿದೆ. ಸ್ಥಳೀಯರು ಹೆಚ್ಚು ಹಣ ನೀಡಿ ಹೋಗಲು ಸಾಧ್ಯವಿಲ್ಲ. ಈ ಬಗ್ಗೆ ಅರಣ್ಯ ಇಲಾಖೆ ಗಮನ ಹರಿಸಬೇಕು. ಗುತ್ತಿಗೆ ಪಡೆದ ಕಂಪನಿ ಪ್ರವಾಸಿಗರ ಸುರಕ್ಷತೆಗೆ ಗಮನ ಹರಿಸಬೇಕು. -ಎಚ್.ಕೆ ಕುಮಾರಸ್ವಾಮಿ, ಶಾಸಕ
– ಸುಧೀರ್.ಎಸ್.ಎಲ್