Advertisement

ಪಾಪನಾಶಿನಿ ಹೊಳೆ ನೀರಿನ ಹರಿವಿಗೆ ಜಾರುಕುದ್ರುವಿನಲ್ಲಿ ತಡೆ

01:06 AM Jan 31, 2022 | Team Udayavani |

ಕಟಪಾಡಿ: ಉದ್ಯಾವರ ಗ್ರಾ.ಪಂ. ವ್ಯಾಪ್ತಿಯ ಪಿತ್ರೋಡಿಯ ಜಾರು ಕುದ್ರುವಿನಲ್ಲಿ ಹರಿಯುವ ಪಾಪನಾಶಿನಿ ಹೊಳೆಗೆ ತುಂಬಿಸಿದ ಮಣ್ಣನ್ನು ತೆರವುಗೊಳಿಸದೇ ಇದ್ದು ಹೊಳೆಯ ನೀರಿನ ಸರಾಗವಾದ ಹರಿವಿಗೆ ತಡೆಯಾಗುತ್ತಿದೆ. ಇದರಿಂದ ಸಾಂಪ್ರದಾಯಿಕ ಮೀನುಗಾರಿಕೆ ತೊಂದರೆ ಆಗುತ್ತಿದೆ ಎಂದು ಮೀನು ಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಸುಮಾರು 4 ಮಳೆಗಾಲಗಳನ್ನು ಕಳೆದು ಈ ಸೇತುವೆಯ ಕಾಮಗಾರಿಯು ಪೂರ್ಣ ಗೊಂಡಿರುತ್ತದೆ. 654.60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಸಂಪರ್ಕ ಸೇತುವೆಯು 2021ರ ಜು.31ರಂದು ಪೂರ್ಣಗೊಳಿಸಲಾಗಿದೆ ಎಂದು ನಾಮ ಫಲಕದಲ್ಲಿ ಉಲ್ಲೇಖಿಸಲಾಗಿದ್ದರೂ ಇನ್ನೂ ಉದ್ಘಾಟನೆಗೊಂಡಿಲ್ಲ.

ಗುತ್ತಿಗೆದಾರ, ಸಣ್ಣ ನೀರಾವರಿ ಇಲಾಖಾಧಿಕಾರಿಗಳ ನಿರ್ಲಕ್ಷéದಿಂದಾಗಿ ಕಾಮಗಾರಿಯ ಸಂದರ್ಭ ಪಾಪನಾಶಿನಿ ಹೊಳೆಗೆ ಅಡ್ಡಲಾಗಿ ಸುರಿಯಲಾಗಿರುವ ಸಾಕಷ್ಟು ಪ್ರಮಾಣದ ಮಣ್ಣು ಸರಾಗವಾದ ನೀರಿನ ಹರಿವಿಗೆ ತಡೆಯೊಡ್ಡುತ್ತಿತ್ತು. ಬಳಿಕದಮಳೆಗಾಲದಲ್ಲಿ ಉಕ್ಕೇರಿ ಹರಿಯುವ ಹೊಳೆಯ ನೀರಿನ ರಭಸಕ್ಕೆ ಮತ್ತೊಂದು ಪಾರ್ಶ್ವದಲ್ಲಿ ನದಿ ಕೊರೆತ ಉಂಟಾಗಿತ್ತು.ಇದೀಗ ಸರಕಾರದ ದೂರದೃಷ್ಟಿತ್ವದ ಯೋಜನೆಯಾಗಿ ಈ ಭಾಗದ ಗ್ರಾಮಸ್ಥರಿಗೆ ಸುವ್ಯವಸ್ಥಿತ ಸಂಪರ್ಕಕ್ಕೆ ಈ ಸೇತುವೆಯು ನಿರ್ಮಾಣಗೊಂಡಿದೆ. ಆದರೆ ತಳಭಾಗದಲ್ಲಿ ಸೇತುವೆಯ ಕಿಂಡಿಯ ಭಾಗದಲ್ಲಿನ ಮಣ್ಣುತೆರವುಗೊಳಿಸದೆ ಸಾಂಪ್ರದಾಯಿಕ ಮೀನುಗಾರರು ಕುಲಕಸುಬು ನಡೆಸಲು ದೋಣಿಯಲ್ಲಿ ಹೊಗೆ ತೆಗೆದು ಜೀವನ ನಡೆಸುವವರನ್ನು ಸಂಕಷ್ಟಕ್ಕೆ ತಳ್ಳಿದೆ.

ಸೇತುವೆ ನಿರ್ಮಾಣದ ಹಂತದಲ್ಲಿ ಅಳವಡಿಸಲಾದ ಮಣ್ಣು ಸೇತುವೆಯ ತಳಭಾಗದಲ್ಲಿ ಸಂಗ್ರಹವಾಗಿದೆ. ಮೀನು
ಗಾರಿಕೆಗೆ ತೆರಳುವವರಿಗೂ ಅಡ್ಡಿಯಾಗು ತ್ತಿದೆ. ಅದನ್ನು ಕೂಡಲೇ ತೆರವುಗೊಳಿಸಿ ಮತ್ತು ಸಣ್ಣ ನೀರಾವರಿ ಇಲಾಖೆಯ ಮೂಲಕ ದೋಣಿ ತಂಗುದಾಣಕ್ಕೂ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಕೂಡಲೇ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿದ್ದರೂ ಕಳೆದ 6 ತಿಂಗಳುಗಳಿಂದಲೂ ಮಣ್ಣು ತೆರವುಗೊಳಿಸುವ ಭರವಸೆಯು ಹುಸಿ
ಯಾಗಿದ್ದು ಮೀನುಗಾರರನ್ನು ಕೆರಳಿಸಿದೆ.ನೊಂದ ಮೀನುಗಾರರು ಕಠಿಣ ಹೋರಾಟಕ್ಕಿಳಿಯುವ ಮುನ್ನವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು, ಜಿಲ್ಲಾಡಳಿತ ಗಮನಹರಿಸಿ ಸುವ್ಯವಸ್ಥೆ ಕಲ್ಪಿಸುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಸುಪ್ರೀಂ ಕೋರ್ಟ್‌ ಅಂಗಳಕ್ಕೆ ಪೆಗಾಸಸ್‌ ಗೂಢಚರ್ಯೆ ವಿವಾದ

Advertisement

ತುರ್ತು ಕ್ರಮ ಕ್ರಮಕ್ಕೆ ಸೂಚನೆ
ಈಗಾಗಲೇ ಮೀನುಗಾರರ ಸಮಸ್ಯೆಯನ್ನು ಇತ್ಯರ್ಥಗೊಳಿಸಲು ಎಂಜಿನಿಯರ್‌, ಗುತ್ತಿಗೆದಾರ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ವಹಿಸಿ ಸಮಸ್ಯೆಯನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
-ಲಾಲಾಜಿ ಆರ್‌. ಮೆಂಡನ್‌, ಶಾಸಕರು,
ಕಾಪು ವಿಧಾನ ಸಭಾ ಕ್ಷೇತ್ರ

ಶೀಘ್ರ ಮಣ್ಣು ತೆರವು
ವಿಷಯ ಗಮನದಲ್ಲಿದೆ. ಇದರ ಮಣ್ಣನ್ನು ಶೀಘ್ರ ಮಣ್ಣು ತೆರವುಗೊಳಿಸಿ ಸುವ್ಯವಸ್ಥಿತ ವ್ಯವಸ್ಥೆ ಕಲ್ಪಿಸಲಾಗುತ್ತದೆ. -ಎಂಜಿನಿಯರ್‌ ತ್ರಿನೇಶ್‌ ಮತ್ತು ಗುತ್ತಿಗೆದಾರ ರಾಜೇಶ್‌ ಕಾರಂತ್‌

125 ಮೀಟರೋ? ಕಿಲೋಮೀಟರೋ?
ಪಿತ್ರೋಡಿಯಿಂದ ಜಾರುಕುದ್ರು ಸಂಪರ್ಕಕ್ಕೆ ಸುಮಾರು 125 ಮೀಟರ್‌ ಉದ್ದ ಸೇತುವೆಯ ನಿರ್ಮಾಣ ಆಗಿದ್ದರೂ ಅಲ್ಲಿ ಅಳವಡಿಸಲಾಗಿರುವ ಇಲಾಖೆಯ ನಾಮಫಲಕದಲ್ಲಿ 125 ಕಿ.ಮೀ. ಸೇತುವೆಯ ಉದ್ದ ಎಂದು ಉಲ್ಲೇಖೀಸಲಾಗಿದೆ.

ಕಠಿನ ಹೋರಾಟ ಅನಿವಾರ್ಯ
ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ, ಕ್ಷೇತ್ರದ ಶಾಸಕರ ಗಮನಕ್ಕೆ ತರಲಾಗಿದೆ. ಅಪರ ಜಿಲ್ಲಾಧಿಕಾರಿ ಅವರು ಸ್ಥಳಕ್ಕಾಗಮಿಸಿ ಸಮಸ್ಯೆಯನ್ನು ಪರಿಶೀಲಿಸಿ ಮಣ್ಣು ತೆರವುಗೊಳಿಸುವಂತೆ ಎಂಜಿನಿಯರ್‌, ಗುತ್ತಿಗೆದಾರನಿಗೆ ಸೂಚಿಸಿದ್ದರೂ ಇದು ವರೆಗೂ ಸಮಸ್ಯೆ ಪರಿಹಾರವಾಗಿಲ್ಲ. ಮುಂದಿನ ದಿನಗಳಲ್ಲಿನೊಂದ ಮೀನುಗಾರರಿಂದ ಕಠಿನ ಹೋರಾಟ ಅನಿವಾರ್ಯವಾದೀತು.
-ಗಿರೀಶ್‌ ವಿ.ಸುವರ್ಣ, ಉದ್ಯಾವರ ಗ್ರಾ.ಪಂ. ಸದಸ್ಯರು ಹಾಗೂ ನೊಂದ ಮೀನುಗಾರರು

ಫೆಬ್ರವರಿ ಅಂತ್ಯದೊಳಗೆ ಮಣ್ಣು ತೆರವು
ಗುತ್ತಿಗೆದಾರರಿಗೆ ಸೂಚಿಸಲಾಗಿದ್ದು ಫೆಬ್ರವರಿ ಮಾಸಾಂತ್ಯ ದೊಳಗಾಗಿ ತಳಭಾಗದ ಮಣ್ಣನ್ನು ತೆರವುಗೊಳಿಸಲಾಗುತ್ತದೆ.
-ಎನ್‌. ಕೃಷ್ಣಾನಂದ,ಎಕ್ಸಿಕ್ಯೂಟಿವ್‌ ಎಂಜಿನಿಯರ್‌, ಪಿಎಂಜೆಎಸ್‌ವೈ ಯೋ. ವಿಭಾಗ

– ವಿಜಯ ಆಚಾರ್ಯ ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next