Advertisement

ತಮಿಳುನಾಡಿನಲ್ಲಿ ಬಿಜೆಪಿ ಜತೆ ಪನ್ನೀರ್‌ ಬಣ ಹೊಂದಾಣಿಕೆ?

11:14 AM May 21, 2017 | Team Udayavani |

ಹೊಸದಿಲ್ಲಿ: ಸೂಪರ್‌ಸ್ಟಾರ್‌ ರಜನೀಕಾಂತ್‌ ರಾಜಕೀಯಕ್ಕೆ ಬರುತ್ತಾರೋ ಇಲ್ಲವೋ ಎಂಬ ಸುದ್ದಿ ತಮಿಳಿನಾಡಿನಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿರುವಾಗಲೇ, ಮಾಜಿ ಮುಖ್ಯಮಂತ್ರಿ ಒ ಪನ್ನೀರ್‌ ಸೆಲ್ವಂ ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಮಹಣ್ತೀದ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

Advertisement

ಮುಂದೆ ನಡೆಯಲಿರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪನ್ನೀರ್‌ ಬಣ ಮತ್ತು ಬಿಜೆಪಿ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಪನ್ನೀರ್‌ಸೆಲ್ವಂ ಟ್ವೀಟ್‌ ಮಾಡಿದ್ದು, “ಸ್ಥಳೀಯ ಸಂಸ್ಥೆ ಚುನಾವಣೆ ಅಧಿಕೃತವಾಗಿ ಘೋಷಣೆಯಾದ  ಬಳಿಕ ಬಿಜೆಪಿ ಜತೆ ಮೈತ್ರಿ ಮಾಡುವ ಬಗ್ಗೆ ನಿರ್ಧರಿಸುತ್ತೇವೆ’ಎಂದು ಹೇಳಿದ್ದಾರೆ. 

ಸೆಲ್ವಂ ಟ್ವೀಟ್‌ ಭಾರೀ ಚರ್ಚೆಗೆ ಕಾರಣವಾಗಿದ್ದು, ಇದನ್ನು ಮುಂದಿನ ರಾಜಕೀಯ ಬದಲಾವಣೆಗೆ ಹಿಡಿದ ಕನ್ನಡಿ ಎಂದು ವಿಶ್ಲೇಷಿಸಲಾಗುತ್ತಿದೆ. ಟ್ವೀಟ್‌ ಬೆನ್ನಲ್ಲೇ ಅದನ್ನು ತೆಗೆದುಹಾಕಿ, ಸ್ಪಷ್ಟನೆ ನೀಡಿರುವ ಅವರ ಮಾಧ್ಯಮ ತಂಡ, “ಮೈತ್ರಿಯು ಪರಿಸ್ಥಿತಿಗೆ ಅನುಗುಣವಾಗಿ ಯಾವ ಪಕ್ಷದೊಂದಿಗೂ ಆಗಬಹುದು. ಈಗಲೇ ಅದನ್ನು ಹೇಳಲಾಗದು’ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next