Advertisement

ಏಶ್ಯನ್‌ ಟೀಮ್‌ ಸ್ನೂಕರ್‌ ಚಾಂಪಿಯನ್‌ಶಿಪ್‌ ; ಭಾರತಕ್ಕೆ ಪ್ರಶಸ್ತಿ

03:45 AM Jul 06, 2017 | Team Udayavani |

ಬಿಸ್ಕೆಕ್‌: ಲಕ್ಷ್ಮಣ್‌ ರಾವತ್‌ ಜತೆಗೂಡಿ ಆಡಿದ ಪಂಕಜ್‌ ಆಡ್ವಾಣಿ ಅವರು ಪಾಕಿಸ್ಥಾನವನ್ನು ಸೋಲಿಸಿ ಏಶ್ಯನ್‌ ಟೀಮ್‌ ಸ್ನೂಕರ್‌ ಚಾಂಪಿಯನ್‌ಶಿಪ್‌ನ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ಐದು ಪಂದ್ಯಗಳ ಫೈನಲ್‌ ಹೋರಾಟದಲ್ಲಿ ಪಂಕಜ್‌ ನೇತೃತ್ವದ ಭಾರತವು ಪಾಕಿಸ್ಥಾನವನ್ನು ಸೋಲಿಸಲು ಯಶಸ್ವಿಯಾಯಿತು. ಮೊದಲ ಪಂದ್ಯದಲ್ಲಿ ಪಂಕಚ್‌ ಆಡ್ವಾಣಿ ಎದುರಾಳಿ ಮೊಹಮ್ಮದ್‌ ಬಿಲಾಲ್‌ ವಿರುದ್ಧ ಅಮೋಘ ಆಟವಾಡಿದರು. ಮೊದಲ ಗೇಮ್‌ನಲ್ಲಿ ಬಿಲಾಲ್‌ ಏಕೈಕ ಅಂಕ ಗಳಿಸಿದರೆ ಪಂಕಜ್‌ ನಿರಂತರ 83 ಅಂಕ ಗಳಿಸಿ ಪಂದ್ಯ ಗೆದ್ದರು.

ಪಂಕಜ್‌ ಅವರ ಜತೆಗಾರ ಲಕ್ಷ್ಮಣ್‌ ರಾವತ್‌ ಅವರ ಆಟದ ಮೇಲೆ ಭಾರತದ ಗೆಲುವಿನ ಭರವಸೆಯಿತ್ತು. ಆದರೆ ರಾವತ್‌ ನಿರಾಸೆಗೊಳಿಸಿಲ್ಲ. ತನ್ನ ಮೊದಲ ಅಂತಾರಾಷ್ಟ್ರೀಯ ಕೂಟದಲ್ಲಿ ಆಡಿದ ಅವರು 73 ಅಂಕ ಪಡೆದರು ಗೆದ್ದರು. ಅವರ ಎದುರಾಳಿ ಬಾಬರ್‌ ಒಂದಂಕ ಪಡೆದರು. ಆಬಳಿಕ ನಡೆದ ಡಬಲ್ಸ್‌ನಲ್ಲಿ ಲಕ್ಷ್ಮಣ್‌ ಮತ್ತು ಪಂಕಜ್‌ ಅಮೋಘವಾಗಿ ಆಡಿ ಭಾರತಕ್ಕೆ ಪ್ರಶಸ್ತಿ ತಂದುಕೊಟ್ಟರು.

ತಂಡ ಸ್ಪರ್ಧೆಯಲ್ಲಿ ಪಂಕಜ್‌ ಮಾತ್ರ ಒಂದೇ ಒಂದು ಪಂದ್ಯ ಸೋಲದ ಆಟಗಾರ ಆಗಿದ್ದಾರೆ. ಇದು ಈ ಋತುವಿನಲ್ಲಿ ಪಂಕಜ್‌ ಗೆದ್ದ ಎರಡನೇ ಮತ್ತು ಸಮಗ್ರವಾಗಿ 8ನೇ ಪ್ರಶಸ್ತಿಯಾಗಿದೆ. ಇದೇ ವೇಳೆ ರಾವತ್‌ಗಿದು ಮೊದಲ ಪ್ರಶಸ್ತಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next